TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಮರುಬಿಡುಗಡೆಯಾದ ಹೀರೋ ಕರಿಜ್ಮಾ ಝೆಡ್ಎಂಆರ್..!
ಅದು 2003-2005ರ ಆಸುಪಾಸು. ಪರ್ಫಾಮೆನ್ಸ್ ಬೈಕ್ ಪ್ರಿಯರ ಕೈಯಲ್ಲಿದ್ದ ಕರಿಜ್ಮಾ ಬೈಕ್‌ಗಳು ಹುಡುಗರ ಪಾಲಿನ ಹಾಟ್ ಫೇವರಿಟ್ ಆಗಿ ಗಮನ ಸೆಳೆದಿದ್ದವು. ಆದ್ರೆ ಬದಲಾದ ಮಾರುಕಟ್ಟೆಯಲ್ಲಿನ ಸನ್ನಿವೇಶಗಳಿಂದಾಗಿ ಕರಿಜ್ಮಾ ಬೈಕ್‌ಗಳನ್ನು ಯಾರು ಮಾತನಾಡಿಸುವವರೇ ಇಲ್ಲದಂತಾಯ್ತು. ಇದೇ ಕಾರಣಕ್ಕೆ ಕರಿಜ್ಮಾ ಬೈಕ್ ಮಾರಾಟವನ್ನೇ ಸ್ಥಗಿತಗೊಳಿದ್ದ ಹೀರೋ ಸಂಸ್ಥೆಯು ಇದೀಗ ಮತ್ತದೇ ಬೈಕ್‌ಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮರುಬಿಡುಗಡೆಗೊಳಿಸಿದೆ.
2018ರ ಆಟೋ ಎಕ್ಸ್‌ಪೋದಲ್ಲೇ ಕರಿಜ್ಮಾ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಇದೀಗ ಕರಿಜ್ಮಾ ಝೆಡ್ಎಂಆರ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ನವೀಕರಿಸಿದ ವಿನ್ಯಾಸಗಳು ಮತ್ತು ಡಿಸೈನ್‌ಗಳು ಬೈಕಿನ ಅಂದವನ್ನು ಮತ್ತಷ್ಟು ಹೆಚ್ಚಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.
ಕರಿಜ್ಮಾ ಝೆಡ್ಎಂಆರ್ ಬೆಲೆಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)
ಹೀರೋ ಮೊಟೊಕಾರ್ಪ್ ಸಂಸ್ಥೆಯು ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳಲ್ಲಿ ಎರಡು ವೆರಿಯೆಂಟ್‌ಗಳನ್ನು ಪರಿಚಯಿಸಿದ್ದು, ಸ್ಟ್ಯಾಂಡರ್ಡ್ ಬೈಕಿನ ಬೆಲೆಯನ್ನ ರೂ. 1,08,000ಕ್ಕೆ ಹಾಗೂ ಡ್ಯುಯಲ್ ಟೋನ್ ಮಾದರಿ ಬೆಲೆಯನ್ನ ರೂ. 1,10,500ಕ್ಕೆ ನಿಗದಿಗೊಳಿಸಲಾಗಿದೆ.
ಆದ್ರೆ ಹೀರೋ ಮೊಟೊಕಾರ್ಪ್ ಸಂಸ್ಥೆಯು ಹೊಸ ಬೈಕಿನ ವಿನ್ಯಾಸಗಳನ್ನು ಹೊರತುಪಡಿಸಿ ಬೈಕಿನ ಎಂಜಿನ್ ವಿಭಾಗದಲ್ಲಿ ಹಾಗೂ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದಕ್ಕೆ ಕಾರಣ, ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ 125ಸಿಸಿ ಮೇಲ್ಪಪ್ಟ ಬೈಕ್ ಮತ್ತು ಸ್ಕೂಟರ್ ಮಾದರಿಗಳಲ್ಲಿ ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನ ಕಡ್ಡಾಯ ಮಾಡಲಾಗುತ್ತಿದ್ದು, ಹೀಗಿದ್ದರೂ 223 ಸಿಸಿ ಎಂಜಿನ್ ಹೊಂದಿರುವ ಕರಿಜ್ಮಾ ಬೈಕ್‌ಗಳಲ್ಲಿ ಎಬಿಎಸ್ ವ್ಯವಸ್ಥೆ ಇಲ್ಲದಿರುವುದು ಪರ್ಫಾಮೆನ್ಸ್ ಹಲವಾರು ಬೈಕ್ ಪ್ರಿಯರಿಗೆ ನಿರಾಶೆ ಉಂಟುಮಾಡಿದೆ ಎನ್ನಬಹುದು.
ಇದಕ್ಕಾಗಿಯೇ ಎಬಿಎಸ್‌ಗೆ ಬದಲಾಗಿ ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಒದಗಿಸಿರುವ ಹೀರೋ ಸಂಸ್ಥೆಯು, ಏರಿಕ್ ಬ್ಯೂಲ್ ರೇಸಿಂಗ್ ಸಂಸ್ಥೆಯೊಂದಿಗೆ ಜೊತೆಗೂಡಿ ಹೊಸ ಕರಿಜ್ಮಾ ಬೈಕ್‌ಗಳನ್ನು ಮರುಬಿಡುಗಡೆಗೊಳಿಸಿದೆ.
ಕರಿಜ್ಮಾ ಬೈಕಿನ ಎಂಜಿನ್ ವೈಶಿಷ್ಟ್ಯತೆ
223ಸಿಸಿ ಸಿಂಗಲ್ ಸಿಲಿಂಡರ್, ಫೌರ್ ಸ್ಟ್ರೋಕ್ ಎಂಜಿನ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 19.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.
ಜೊತೆಗೆ ಪ್ರತಿ ಗಂಟೆಗೆ 129 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಕರಿಜ್ಮಾ ಬೈಕ್‌ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪ್ರೋಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾರ್ಕ್ಸ್ ಸೌಲಭ್ಯವನ್ನ ನೀಡಲಾಗಿದ್ದು, ಬೈಕಿನ ಹೆಡ್‌ಲ್ಯಾಂಪ್ ವಿನ್ಯಾಸವೇ ಹೊಸ ಬೈಕಿನ ಮೊದಲ ಆಕರ್ಷಣೆಯಾಗಿದೆ ಎನ್ನಬಹುದು.
ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಸ ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ಲ್ಯಾಟಿನ್ ಅಮೆರಿಕ ಮಾರುಕಟ್ಟೆಗಳಿಗೂ ರಫ್ತು ಮಾಡುವ ಉದ್ದೇಶ ಹೊಂದಿದ್ದು, ಝೆಡ್ಎಂಆರ್ ಅಡಿಬರಹವೇ ಬೈಕಿನ ಖದರ್ ಹೆಚ್ಚಿಸಿದೆ.
ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಗಿಂತಲೂ ಮೊದಲೇ ಮಾರುಕಟ್ಟೆ ಪ್ರವೇಶ ಪಡೆದಿರುವ ಕರಿಜ್ಮಾ ಹೊಸ ಬೈಕ್‌ಗಳು ಬಜಾಜ್ ಪಲ್ಸರ್ 220ಎಫ್ ಬೈಕಿನ ಮೊದಲ ಪ್ರತಿಸ್ಪರ್ಧಿಯಾಗಿದ್ದು, ಹೊಸ ಬೈಕಿನಲ್ಲಿ ಎಬಿಎಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ಇದ್ದಿದ್ದರೇ ಬೈಕಿನ ಆಯ್ಕೆಯನ್ನು ಮತ್ತಷ್ಟು ಹೆಚ್ಚಿಸಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.