Hero: ಪೆಟ್ರೋಲ್‌ಗೆ ಟಾಟಾ ಹೇಳಿ.. ಬರೀ 44,990 ರೂ.. 142 Km ರೇಂಜ್.. ಈ ಹೀರೋ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳು!
ಹೀರೋ ವಿಡಾ ವಿಎಕ್ಸ್2 (Hero Vida VX2) ಜನಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಮನೆ ಮಾತಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನನಿತ್ಯದ ಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ವಿಡಾ ವಿಎಕ್ಸ್2' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price):
ಇದು ಅಗ್ಗದ ದರದಲ್ಲೂ ಲಭ್ಯವಿದೆ. ಕನಿಷ್ಠ ರೂ.73,850 ಮತ್ತು ಗರಿಷ್ಠ ರೂ.94,800 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಬಾಸ್ (ಬ್ಯಾಟರಿ-ಆಸ್-ಎ-ಸರ್ವಿಸ್) ಯೋಜನೆಯಡಿಯೂ ಸಿಗುತ್ತದೆ. ಆ ಮಾಡೆಲ್ ದರ ರೂ.44,990 ದಿಂದ ಶುರುವಾಗಲಿದ್ದು, ಅತಿಹೆಚ್ಚು ಅಂದರೆ ರೂ.70,000 ಬೆಲೆಯಿದೆ. ಗ್ರಾಹಕರು ಪ್ರತಿ ಕಿ.ಮೀ ಸಂಚಾರಕ್ಕೆ ನಿಗದಿತ ಶುಲ್ಕ ಪಾವತಿಸಬೇಕು.

ರೂಪಾಂತಗಳು & ವಿನ್ಯಾಸ (Variants & Design):
ಈ ಸ್ಕೂಟರ್ ವಿಡಾ ವಿಎಕ್ಸ್2 ಗೋ (Vida VX2 Go) & ವಿಡಾ ವಿಎಕ್ಸ್2 ಪ್ಲಸ್ (Vida VX2 Plus) ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್, ಡಿಆರ್‌ಎಲ್‌ಗಳು ಮತ್ತು ಟೈಲ್‌ಲೈಟ್‌ನ್ನು ಪಡೆದಿದೆ. ರಸ್ತೆಯ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಲು 12-ಇಂಚಿನ ಡೈಮಂಡ್-ಕಟ್ ಫಿನಿಶ್ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.
ಸುತ್ತಳತೆ & ಬಣ್ಣಗಳು (Dimensions & Colours):
ಹೊಚ್ಚ ಹೊಸ 'ಹೀರೋ ವಿಡಾ ವಿಎಕ್ಸ್2' ಹೆಚ್ಚು ವಿಶಾಲವಾಗಿದೆ. 1,914 ಎಂಎಂ ಉದ್ದ, 725 ಎಂಎಂ ಅಗಲ ಹಾಗೂ 1,142 ಎಂಎಂ ಎತ್ತರವಿದೆ. 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಪರ್ಲ್ ರೆಡ್, ಪರ್ಲ್ ಬ್ಲ್ಯಾಕ್, ನೆಕ್ಸಸ್ ಬ್ಲೂ, ಮ್ಯಾಟ್ ವೈಟ್, ಮ್ಯಾಟ್ ಲೈಮ್ ಮತ್ತು ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಕಾರ್ಯಕ್ಷಮತೆ (Performance):
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 'ವಿಡಾ ವಿಎಕ್ಸ್2 ಗೋ' ರೂಪಾಂತರವು 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) & 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 92 ರಿಂದ 142 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 4.2 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
'ವಿಎಕ್ಸ್2 ಪ್ಲಸ್' ರೂಪಾಂತರವು 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 142 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 3.1 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ವೈಶಿಷ್ಟ್ಯಗಳು (Features):
ಈ ಎಲೆಕ್ಟ್ರಿಕ್ ಸ್ಕೂಟರ್ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ ಹಾಗೂ ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್‌ನ್ನು ಒಳಗೊಂಡಿದೆ. ಸರಿ ಸುಮಾರು 115 ಕೆಜಿವರೆಗೆ ತೂಗುತ್ತದೆ. 27.2 ರಿಂದ 33.2 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಹೊಂದಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
'ಹೀರೋ ವಿಡಾ ವಿಎಕ್ಸ್2' ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಅಬ್ಸಾರ್ಬರ್ ಸಸ್ಪೆನ್ಸನ್ ಸೆಟಪ್‌ನ್ನು ಪಡೆದಿದೆ. ಜೊತೆಗೆ ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
Image Source: Youtube Shorts/ EV.GOURAV


Click it and Unblock the Notifications








