TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇದೇ ವರ್ಷ ಬಿಡುಗಡೆಯಾಗಲಿರುವ ಎಕ್ಸ್‌ಪಲ್ಸ್ 200 ಬೆಲೆ ಎಷ್ಟು ಗೊತ್ತಾ?
ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿಯಾದ ಎಕ್ಸ್ ಪಲ್ಸ್ ಬೈಕ್ ಅನ್ನು ಕಳೆದ ತಿಂಗಳ ಹಿಂದಷ್ಟೇ ಅನಾವರಣಗೊಳಿಸಿದ್ದು, ಇದೀಗ ಹೊಸ ಬೈಕಿನ ಬೆಲೆ ಮತ್ತು ಬಿಡುಗಡೆ ದಿನಾಂಕದ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಲು ಮುಂದಾಗಿದೆ.
ಕೆಲವು ವರದಿಗಳ ಪ್ರಕಾರ ಇದೇ ವರ್ಷ ಎರಡೇ ತ್ರೈಮಾಸಿಕ ಅವಧಿಯಲ್ಲಿ ಹೀರೋ ಹೊಸ ಎಕ್ಸ್‌ಪಲ್ಸ್ 200 ಬೈಕ್ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅತಿಕಡಿಮೆ ಬೆಲೆಯಲ್ಲಿ ವಿನೂತನ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದಿರಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯನ್ನು 1 ಲಕ್ಷದೊಳಗೆ ನಿರ್ಧರಿಸುವ ಬಗ್ಗೆ ಇರಾದೆಯಲ್ಲಿದೆ.
ಒಂದು ವೇಳೆ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು ಹೊಸ ಬೈಕಿನ ಬೆಲೆಯನ್ನು ಒಂದು ಲಕ್ಷದೊಳಗೆ ನಿರ್ಧರಿಸಿದ್ದೇ ಆದಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿಗೂ ತೀವ್ರ ಪೈಪೋಟಿ ನೀಡಲಿರುವ ಎಕ್ಸ್‌ಪಲ್ಸ್ 200 ಬೈಕ್‌ಗಳು ಅಡ್ವೆಂಚರ್ ಪ್ರಿಯರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಹೀರೋ ಎಕ್ಸ್‌ಪಲ್ಸ್ 200 ಬಗೆಗೆ ಹೇಳುವುದಾದರೇ, ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.
ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಈ ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.
ಎಕ್ಸ್‌ಪಲ್ಸ್ 200 ಎಂಜಿನ್ ಸಾಮರ್ಥ್ಯ
ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.
ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 170-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.
ಇದಲ್ಲದೇ ಈ ಬೈಕಿನ ಮುಂಭಾಗದಲ್ಲಿ 21 ಇಂಚಿನ ಚಕ್ರಗಳನ್ನು ಒದಗಿಸಲಾಗಿದ್ದು, ಮುಂಭಾಗದ 18 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಆಪ್ ರೋಡಿಂಗ್‌ಗೆ ಸಹಕಾರಿಯಾಗಲು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.
ಒಟ್ಟಿನಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.