Just In
- 28 min ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- 1 hr ago ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- 1 hr ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 2 hrs ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರನ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಿದ್ದವಾಗಿರುವ ಹೀರೋ ಎಕ್ಸ್ಟ್ರಿಮ್ 200ಆರ್ ಬೈಕ್ ಬೆಲೆ ಎಷ್ಟು ಗೊತ್ತಾ?
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್ಟ್ರಿಮ್ 200ಆರ್ ಬೈಕ್ನ್ನು ಸದ್ಯದಲ್ಲೇ ಬಿಡುಗಡೆಗೊಳಿಸುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್ಟ್ರಿಮ್ 200ಆರ್ ಬೈಕ್ನ್ನು ಸದ್ಯದಲ್ಲೇ ಬಿಡುಗಡೆಗೊಳಿಸುತ್ತಿದ್ದು, ಮಧ್ಯಮ ಗಾತ್ರದ ಸೂಪರ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.
ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಹೀರೋ ಸಿಬಿಝೆಡ್ ಎಕ್ಸ್ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ. ಹೀಗಾಗಿ ಹೊಸ ಬೈಕಿನ ಮೇಲೆ ಭಾರೀ ನೀರಿಕ್ಷೆಗಳಿದ್ದು, ಇದೀಗ ಬೈಕಿನ ಬೆಲೆಗಳ ಬಗೆಗೆ ಹೀರೋ ಸಂಸ್ಥೆಯು ಅಧಿಕೃತ ಮಾಹಿತಿ ಹೊರಹಾಕಿದೆ.
ಹೀರೋ ಸಂಸ್ಥೆಯ ಅಧಿಕೃತ ವೆಬ್ಸೈಟ್ ಸಿಕ್ಕಿರುವ ಮಾಹಿತಿಗಳ ಪ್ರಕಾರ ಹೊಸ ಎಕ್ಸ್ಟ್ರಿಮ್ 200ಆರ್ ಬೈಕ್ಗಳು ಎಕ್ಸ್ಶೋರಂ ಪ್ರಕಾರ ರೂ.88,000 ಬೆಲೆ ಹೊಂದಿದ್ದು, 200ಸಿಸಿ ವಿಭಾಗದಲ್ಲೇ ಇದು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಮಾದರಿಯಾಗಿದೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹೀರೋ ಸಂಸ್ಥೆಯು ಹೀರೋ ಸಂಸ್ಥೆಯು ಎಕ್ಸ್ಟ್ರಿಮ್ ಬೈಕ್ಗಳ ಬೆಲೆಯನ್ನು ಸದ್ಯಕ್ಕೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಅನ್ವಯವಾಗಿ ದರ ನಿಗದಿಗೊಳಿಸಿದ್ದು, ಇನ್ನುಳಿದ ರಾಜ್ಯಗಳಲ್ಲಿ ಎಷ್ಟು ಬೆಲೆ ಹೊಂದಿರಲಿವೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಕೆಲವು ಮೂಲಗಳ ಪ್ರಕಾರ ಈಶಾನ್ಯ ರಾಜ್ಯಗಳಲ್ಲಿ ನಿಗದಿ ಪಡಿಸಲಾಗಿರುವ ಬೆಲೆಗಳಿಂತ ಇನ್ನುಳಿದ ರಾಜ್ಯಗಳಲ್ಲಿ ಎಕ್ಸ್ಟ್ರಿಮ್ ಬೆಲೆಯು ರೂ. 90 ಸಾವಿರದಿಂದ ರೂ. 91ಸಾವಿರ ಇರಬಹುದೆಂದು ಹೇಳಲಾಗುತ್ತಿದ್ದು, 200ಸಿಸಿ ವಿಭಾಗದ ಬೈಕ್ಗಳ ಬೆಲೆಗೆ ಹೋಲಿಕೆ ಮಾಡಿದಲ್ಲಿ ಇದು ತುಂಬಾ ಕಡಿಮೆ ಎಂದು ಹೇಳಬಹುದು.
ಇದಕ್ಕೆ ಕಾರಣ ಸದ್ಯ ಮಾರುಕಟ್ಟೆಯಲ್ಲಿರುವ ಟಿವಿಎಸ್ ಅಪಾಚೆ ಆರ್ಟಿಆರ್ 200 4ವಿ ಬೈಕ್ಗಳು ಎಕ್ಸ್ಶೋರಂ ಪ್ರಕಾರ 1.03 ಲಕ್ಷ ಬೆಲೆ ಹೊಂದಿದ್ದರೆ ಮತ್ತೊಂದು ಜನಪ್ರಿಯ ಬೈಕ್ ಬಜಾಜ್ ಪಲ್ಸರ್ ಎನ್ಎಸ್200 ಬೈಕ್ಗಳು ಎಕ್ಸ್ಶೋರಂ ಪ್ರಕಾರ 1 ಲಕ್ಷ ಬೆಲೆ ಹೊಂದಿದೆ.
ಹೀಗಿರುವಾಗ ಎಕ್ಸ್ಶೋರಂ ಪ್ರಕಾರ ರೂ.90 ಸಾವಿರ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಎಕ್ಸ್ಟ್ರಿಮ್ 200ಆರ್ ಬೈಕ್ ಕೈಗುಟುವ ಬೆಲೆಗಳಲ್ಲಿ ಲಭ್ಯವಾಗುವುದಲ್ಲದೇ ಮೇಲೆ ತಿಳಿಸಲಾದ ಜನಪ್ರಿಯ ಬೈಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಜಿನ್ ಸಾಮರ್ಥ್ಯ
200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್ಬಾಕ್ಸ್ ಪಡೆದುಕೊಂಡಿದೆ.
ಇದಲ್ಲದೇ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್ಟ್ರಿಮ್ 200ಆರ್ ಬೈಕ್ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.
ಹೀಗಾಗಿ ಹೀರೋ ಸಂಸ್ಥೆಯು ಪರಿಚಯಿಸುತ್ತಿರುವ ಹೊಸ ಬೈಕ್ ಮಾದರಿಯು 160ಸಿಸಿಯಿಂದ 200ಸಿಸಿ ಸಾಮರ್ಥ್ಯದ ಬೈಕ್ ಖರೀದಿಸುವ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣ ಹೊಂದಿರುವ ಈ ಹೊಸ ಇದೇ ತಿಂಗಳ ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿರುವುದು ಸಂತಸದ ವಿಚಾರ.