ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೋಂಡಾ ಇಂಡಿಯಾ ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್‍‍ಗಳ ಮೇಲೆ ಬೆಲೆ ಏರಿಕೆ ಮಾಡಿದೆ.

By Rahul Ts

ಹೋಂಡಾ ಇಂಡಿಯಾ ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್‍‍ಗಳ ಮೇಲೆ ಬೆಲೆ ಏರಿಕೆ ಮಾಡಿದೆ. ಧರದಲ್ಲಿ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಎರಡೂ ಬೈಕ್‍‍ಗಳ ಮೇಲೆ ಕೇವಲ ರೂ. 500 ಬೆಲೆ ಏರಿಕೆಯಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೋಂಡಾ ಸಂಸ್ಥೆಯು ಹೊಸದಾಗಿ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಎರಡೂ ಬೈಕ್‍‍ಗಳ 2018ರ ಹೊಸ ಎಡಿಶನ್ ಅನ್ನು ಬಿಡುಗಡೆಗೊಳಿಸಿದ್ದು, ಹೊಸ ವಿನ್ಯಾಸ ಮತ್ತು ಅಧಿಕವಾದ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಹೊಸ ಸಿಬಿ ಹಾರ್ನೆಟ್ 160ಆರ್ ಬೈಕ್ ಆಯ್ಕೆಯಾಗಿ ಸಿಂಗಲ್ ಚಾನಲ್ ಎಬಿಎಸ್ ಮತ್ತು ಎಲ್ಇಡಿ ಹೆಡ್‍‍ಲೈಟ್ ಅನ್ನು ಪಡೆದಿದ್ದು, ಇನ್ನು ಸಿಬಿಆರ್ 250ಆರ್ ಬೈಕ್ ಕೂಡ ಹೊಸ ಎಲ್ಇಡಿ ಹೆಡ್‍‍ಲೈಟ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಪಡೆದುಕೊಂಡಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಬೆಲೆ ಏರಿಕೆಯ ನಂತರ ಬೈಕ್‍‍ಗಳ ಬೆಲೆಯು ಈ ಕೆಳಗಿನಂತಿವೆ.

Model Old Price New Price
Hornet 160R STD ₹84,675 ₹85,234
Hornet 160R CBS ₹89,175 ₹89,734
Hornet 160R STD ABS ₹90,175 ₹90,734
Hornet 160R DLX ABS ₹92,675 ₹93,234
CBR 250R Non-ABS ₹1,63,584 ₹1,64,143
CBR 250R ABS ₹1,93,107 ₹1,93,666
ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೋಂಡಾ ಸಿಬಿ ಹಾರ್ನೆಟ್ 160ಸಿಸಿ ಪರ್ಫಾರ್ಮೆನ್ಸ್ ಮೋಟಾರ್‍‍ಸೈಕಲ್ ಆಗಿದ್ದು, ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ. 2018ರ ಹೊಸ ಸಿಬಿ ಹಾರ್ನೆಟ್ ಬೈಕ್ ತನ್ನ ಹಳೆಯ ಮಾದರಿಗಿಂತ ಬೈಕ್‍‍ನ ಲುಕ್ ಅನ್ನು ಹೆಚ್ಚಿಸಲು ಆಕರ್ಷಕವಾದ ಗ್ರಾಫಿಕ್ ಡಿಸೈನ್ ಮತ್ತು ರಿಮ್ ಸ್ಟ್ರೈಪ್ಸ್ ಅನ್ನು ಪಡೆದುಕೊಂಡಿವೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೊಸ ಹೋಂಡಾ ಸಿಬಿ ಹಾರ್ನೆಟ್ ಬೈಕ್ 162.71ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.9ಬಿಹೆಚ್‍‍ಪಿ ಮತ್ತು 14.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಬೈಕಿನ ಎರಡೂ ವೇರಿಯಂಟ್‍‍ಗಳ ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೋಂಡಾ ಸಿಬಿ ಹಾರ್ನೆಟ್ 160ಆರ್ ಟಾಪ್ ಸ್ಪೆಕ್ ಮಾಡಲ್ ಬೈಕ್‍‍‍ಗಳು ಮುಂಭಾಗದ ಚಕ್ರಗಳಿಗೆ ಆಯ್ಕೆಯಾಗಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪಡೆದಿದ್ದು, ಇನ್ನು ಬೇಸ್ ವೇರಿಯಂಟ್‍‍ಗಳು ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಎರಡೂ ಬದಿಗಳಲ್ಲಿ ಪಡೆದುಕೊಂಡಿರಲಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಇದಲ್ಲದೆ ಹೋಂಡಾ ಸಂಸ್ಥೆಯು ಸಿಬಿಆರ್ 250ಆರ್ ಬೈಕ್‍ ಅನ್ನು ಕೂಡ ಬಿಡುಗಡೆಗೊಳಿಸಿದೆ. ಈ ಬೈಕ್ ಬಿಎಸ್-4 ಅಧಾರಿತ 149ಸಿಸಿ ಎಂಜಿನ್, ಲಿಕ್ವಿಡ್ ಕೂಲ್ಡ್ ಹಾಗು ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ 26.5 ಬಿಹೆಚ್‍‍ಪಿ ಮತ್ತು 22.9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಸಿಬಿಆರ್ 250ಆರ್ ಬೈಕ್ ಮೇಲೆ ಬೆಲೆ ಏರಿಕೆ..

ಹೋಂಡಾ ಸಿಬಿಆರ್ 250ಆರ್ ಬೈಕ್‍‍ನ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಎನ್ನು ಅಳವಡಿಸಲಾಗಿದ್ದು, ಬೈಕಿನ ಟಾಪ್ ಎಂಡ್ ವೇರಿಯಂಟ್‍‍ಗಳಿಗೆ ಡ್ಯುಯಲ್ ಚಾನಲ್ ಏಬಿಎಸ್ ಅನ್ನು ಅಳವಡಿಸಲಾಗಿದೆ. ಇನ್ನು ಸಿಬಿಆರ್ 250ಆರ್ ಬೈಕ್ ಮಾರುಕಟ್ಟೆಯಲ್ಲಿ ಬಜಾಜ್ ಡಾಮಿನಾರ್ 400 ಮತ್ತು ಮಹೀಂದ್ರಾ ಮೋಜೊ ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
Read more on honda cbr price hike
English summary
Honda CB Hornet 160R And CBR 250R Prices Hiked.
Story first published: Wednesday, May 30, 2018, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X