ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವ ತವಕದಲ್ಲಿದ್ದು, ಜೊತೆಗೆ ಭಾರತೀಯ ಮಾರುಕಟ್ಟೆಗಾಗಿ ತನ್ನ ಉತ್ಪನ್ನಗಳ ತಂತ್ರದ ಬಗ್ಗೆಯೂ ಕೂಡಾ ಹೇಳಿಕೊಂಡಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

ಹೊಂಡಾ ಸಂಸ್ಥೆಯು ಹೊಸದಾಗಿ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ವಾಹನಗಳನ್ನು ನವೀಕರಿಸಲಿದೆ ಎಂದು ಹೇಳಲಾಗಿದೆ. ಹೀಗಾಗಿ ಹೊಸ ಯೋಜನೆಯ ಅಡಿಯಲ್ಲಿ ಮತ್ತಷ್ಟು ಸುಧಾರಿತ ಮಾದರಿಯ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

ಕಳೆದ ಹಣಕಾಸು ವರ್ಷದ ಅವಧಿಯ ಮಾರಾಟದಲ್ಲಿ ಶೇಕಡಾ 22ರಷ್ಟು ಏರಿಕೆಯನ್ನು ಕಂಡಿದ್ದು, ಮುಂದಿನ ಹಣಕಾಸು ವರ್ಷದ ಅವಧಿಯಲ್ಲಿ ಶೇಕಡಾ 30ರಷ್ಟು ಏರಿಕೆಯನ್ನು ಕಾಣುವ ಯೋಜನೆಯನ್ನು ಮಾಡಿಕೊಂಡಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೋಂಡಾ ಸಂಸ್ಥೆಯು 800 ಕೋಟಿ ಹೂಡಿಕೆ ಮಾಡಲಿದ್ದು, 6,000 ಟಚ್ ಪಾಯಿಂಟ್‍‍ಗಳನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಇದಲ್ಲದೇ ಹೋಂಡಾ ಸಂಸ್ಥೆಯು ತಮ್ಮ ಗ್ರಾಹಕರಿಗಾಗಿ ಜಾಯ್ ಕ್ಲಬ್ ಎಂಬ ಗ್ರಾಹಕರ ನಿಷ್ಠಾವಂತ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದು, ಹೋಂಡಾ ಅತ್ಯುತ್ತಮ ಡೀಲ್ ನೆಟ್‍ವರ್ಕ್ 250 ಟಚ್ ಪಾಯಿಂಟ್‍ಗಳಿಗೆ ವಿಸ್ತರಿಸಲಾಗಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

ಇವುಗಳ ಜೊತೆಗೆ ಹೋಂಡಾ ಸಂಸ್ಥೆಯು 2020 ಹೊತ್ತಿಗೆ ತಮ್ಮ ವಾಹನಗಳಲ್ಲಿ ಬಿಎಸ್ 4 ಎಮಿಷನ್ ಅನ್ನು ಅಭಿವೃದ್ಧಿಗೊಳಿಸಲಿದ್ದು, ಆಂತರಿಕವಾಗಿ ಸಂಸ್ಥೆಯು ಎಲ್ಲಾ ಪ್ಲ್ಯಾಂಟ್‍‍ಗಾಳಾದ್ಯಂತ ಉತ್ಪಾದನೆಯನ್ನು ಆಧುನಿಕರಣ ಮಾಡಲು ಪ್ರಾರಂಭಿಸಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

2019ರಲ್ಲಿ ಹೋಂಡಾ ಸಂಸ್ಥೆಯು ತಮ್ಮ ಹೊಸ ಸಿಬಿಆರ್250ಆರ್‍ಆರ್ ಬೈಕ್ ಅನ್ನು ಬಿಡುಗಡೆಗೊಳಿಸುವ ತವಕದಲಿದ್ದು, ಇನ್ನು ಹೊಸ ಉತ್ಪನ್ನದ ಬಗ್ಗೆ ಮಾತನಾಡುತ್ತಾ ಇದು ಮಾರುಕಟ್ಟೆಯಲ್ಲಿನ 125ಸಿಸಿ ಸರಣಿಯಲ್ಲಿ ಗ್ರಾಹಕರನ್ನು ಸೆಳೆಯಲಿದೆ ಎಂದು ಹೇಳಿಕೊಂಡಿದೆ.

ಹೊಸ ಯೋಜನೆಗಳೊಂದಿಗೆ ಮತ್ತೆ ಸದ್ದು ಮಾಡಲಿದೆ ಹೋಂಡಾ...

ಹೋಂಡಾ ಸಂಸ್ಥೆಯು ಗ್ರಾಜಿಯಾ, ಆಕ್ಟಿವಾ, ಸಿಬಿ ಹಾರ್ನೆಟ್ 160ಆರ್ ಹಾಗೂ ಹೊಸ ಎಕ್ಸ್ ಬ್ಲೇಡ್ ವಾಹನಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಜನಪ್ರಿಯತೆಯನ್ನು ಪಡೆಯಲಿದ್ದು, 2018/19ರ ಹಣಕಾಸು ವರ್ಷದಲ್ಲಿಯು ಕೂಡ ಇನ್ನಷ್ಟು ಗ್ರಾಹಕರನ್ನು ಪಡೆಯುವ ತವಕಲ್ಲಿದೆ.

Read more on honda
English summary
Honda Reveals Their Plans For India — To Launch All-New Product.
Story first published: Wednesday, April 11, 2018, 19:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark