ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

Written By: Rahul

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆಯಾದ ಚಾಪನ್ನು ಮೂಡಿಸಿರುವ ಹೊಂಡಾ ಮೋಟಾರ್ ಸೈಕಲ್ ವಿಭಾಗವು ತನ್ನ ಹೊಸ ಮಾದರಿಯ ಎಕ್ಸ್-ಬ್ಲೇಡ್ ಮೊಟಾರ್ ಸೈಕಲ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಬಹಿರಂಗ ಪಡಿಸಿದ್ದು, ಮಧ್ಯಮ ಗಾತ್ರದ ಸ್ಪೋರ್ಟಿ ಬೈಕ್‌ಗಳಲ್ಲಿ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಹೊಂಡಾ ನಿರ್ಮಾಣದ ಎಕ್ಸ್-ಬ್ಲೇಡ್ ವಿನ್ಯಾಸವು ಹೊಂಡಾ ಹಾರ್ನೆಟ್ 160 ಆರ್ ಬೈಕ್‌ಗೆ ಹೋಲಿಕೆ ಆಗುತ್ತಾದರೂ ಈ ಬೈಕ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಶಾರ್ಪ್ ಲುಕ್ ಯುವ ಸಮುದಾಯವನ್ನು ತನ್ನತ್ತ ಕೈ ಬಿಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಎಂಜಿನ್ ಸಾಮರ್ಥ್ಯ

162.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ -ಬ್ಲೇಡ್ ಬೈಕ್‌ಗಳು 13.93-ಬಿಹೆಚ್‌ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಬೈಕ್‌ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಇದ್ದು, ರೇಸರ್ ಶಾರ್ಪ್ ಡಿಸೈನ್ ಆಕರ್ಷಕ ಲುಕ್ ಕೊಟ್ಟಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಹೊಸ ಬೈಕ್ ವೈಶಿಷ್ಟ್ಯತೆ

ಎಕ್ಸ್-ಬ್ಲೇಡ್ ಬೈಕ್ ಪ್ರಮುಖ ಲಕ್ಷಣವೆಂದರೆ ಫುಲ್ ಎಲ್ಇಡಿ ಹೆಡ್‌ಲೈಟ್ ಸೆಟಪ್, ರೋಬೊ ಫೇಸ್ ನೋಟ, ಎಲ್ಇಡಿ ಹೆಡ್ ಲೈಟ್ ಪೊಜಿಷನ್ ಲ್ಯಾಂಪನ್ನು ಹೊಂದಿದ್ದು, ಟೈಲ್ ಲೈಟ್ ಕೂಡ ಎಲ್ಇಡಿಯಾಗಿದೆ. ಇದಲ್ಲದೇ ಹೊಸ ಡಿಜಿಟಲ್ ಕ್ಲಸ್ಟರ್ ಉಪಕರಣ ಮತ್ತು ಗೇರ್ ಶಿಫ್ಟ್ ಇಂಡಿಕೇಟರ್ ಕೂಡ ಹೊಂದಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಆಕ್ರಮಣಕಾರಿ ಕಪ್ಪು ಶೇಡ್ ಗಳೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿನ ವಿನ್ಯಾಸಕ್ಕೆ ಮೆರಗು ನೀಡಿದ್ದು, ಸೈಡ್ ಪ್ಯಾನೆಲ್ ಗಳು ಕೂಡ ಕಪ್ಪು ಬಣ್ಣವನ್ನು ಹೊಂದಿದೆ. ಬೈಕಿನ ಟೈಲ್ ವಿಭಾಗವು ಸ್ಪ್ಲಿಟ್ ಗ್ರಾಬ್ ರೈಲ್ ಮತ್ತು ರೇಜರ್ ಅಂಚುಗಳು ಮತ್ತು ಡಬಲ್ ಔಟ್ಲೆಟ್ ಮಫ್ಲರ್ ನೀಡಲಾಗಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಲಭ್ಯವಿರುವ ಬಣ್ಣಗಳು

ಹೊಸ ಬೈಕ್‌ಗಳು ಮೇಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಇಗ್ನ್ಯೋಸ್ ಬ್ಲಾಕ್, ಮೇಟ್ ಫ್ರೋಜೆನ್ ಸಿಲ್ವರ್, ಪರ್ಲ್ ಸ್ಪಾರ್ಟನ್ ಮತ್ತುಮೇಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಎಂಬ 5 ವಿವಿಧ ಬಣ್ಣಗಳಲ್ಲಿ ದೊರೆಯಲಿವೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಬಿಡುಗಡೆ ಯಾವಾಗ?

ಹೋಂಡಾ ಎಕ್ಸ್-ಬ್ಲೇಡ್ ಬೈಕ್‌ಗಳು ಇದೇ ತಿಂಗಳಾಂತ್ಯಕ್ಕೆ ಲಭ್ಯವಿರಲಿದ್ದು, ಯಮಹಾ ಎಫ್ ಜೆಡ್, ಟಿವಿಎಸ್ ಅಪಾಚೆ ಆರ್ ಟಿ ಆರ್ 160 ಮತ್ತು ಬಜಾಜ್ ಪಲ್ಸರ್ ಎನ್ಎಸ್ 160 ನಂತಹ ಬೈಕುಗಳಿಗೆ ಇದು ಪ್ರತಿಸ್ಪರ್ಧಿಸಲಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಬೆಲೆಗಳು (ಅಂದಾಜು)

ದೆಹಲಿ ಎಕ್ಸ್ ಶೋರಂ ಪ್ರಕಾರ ಹೊಸ ಬೈಕ್‌ಗಳ ಬೆಲೆಯು 80 ಸಾವಿರದಿಂದ 83 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಆಟೋ ಎಕ್ಸ್ ಪೋ 2018: ಹೊಂಡಾ ವಿನೂತನ ಎಕ್ಸ್-ಬ್ಲೇಡ್ ಮೋಟಾರ್ ಸೈಕಲ್ ಅನಾವರಣ

ಹೊಂಡಾ ಎಕ್ಸ್-ಬ್ಲೇಡ್ ಅಲ್ಲದೆ ಸಂಸ್ಥೆಯು ಆಕ್ಟಿವಾ 5ಜಿ, ಲಿವೊ, ಸೀಬಿ ಶೈನ್, ಸೀಬಿ ಶೈನ್ ಎಸ್ ಪಿ, ಸೀಬಿ ಹಾರ್ನೆಟ್ ಮತ್ತು ಸಿಬಿಆರ್ 250ಆರ್ ತನ್ನ ಹತ್ತು ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಿದ್ದು, ಪರ್ಫಾಮೆನ್ಸ್ ಬೈಕ್‌ಗಳಾದ ಸಿಬಿಆರ್ 650ಎಫ್, ಆಫ್ರಿಕಾ ಟ್ವಿನ್, ಸಿಬಿಆರ್1000 ಆರ್ ಆರ್ ಮತ್ತು ಗೋಲ್ಡ್ ವಿಂಗ್ ಹೊಸ ಆವೃತ್ತಿಗಳನ್ನು ಕೂಡಾ ಅನಾವರಣಗೊಳಿಸಲಿದೆ.

Read more on honda auto expo 2018 bikes
English summary
Honda X-Blade Unveiled — Expected Launch Date, Price, Features And Images.
Story first published: Wednesday, February 7, 2018, 19:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark