ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕ್‌ಗಳ ಬಿಡುಗಡೆಗೆ ಕ್ಷಣಗಣನೆ..
ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯ ಬಹುನೀರಿಕ್ಷಿತ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಇದೇ ತಿಂಗಳು 18ರಂದು ಅಂದ್ರೆ ನಾಳೆಯೇ ಬಿಡುಗಡೆಯಾಗುತ್ತಿದ್ದು, ಹೊಸ ಬೈಕ್‌ಗಳು ಈಗಾಗಲೇ ಡೀಲರ್ಸ್ ಯಾರ್ಡ್‌ಗೆ ಲಗ್ಗೆಯುಟ್ಟಿವೆ. ಹೊಸ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಬೈಕ್‌ಗಳು ಹತ್ತಾರು ಹೊಸತನಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಬಿಎಂಡಬ್ಲ್ಯು ಟ್ವಿನ್ ಬೈಕ್‌ಗಳ ವಿಶೇಷತೆ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಕಳೆದ ವರ್ಷದಿಂದಲೇ ಡ್ರೈವ್‌ಸ್ಪಾರ್ಕ್ ತಂಡವು ಜಿ310ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳ ಬಗೆಗೆ ಹಲವು ಮಾಹಿತಿಗಳನ್ನು ನೀಡಿದ್ದು, ಸದ್ಯ ಹೊಸ ಬೈಕ್‌ಗಳು ಖರೀದಿಗೆ ಲಭ್ಯವಾಗುತ್ತಿವೆ. ಈ ಹಿನ್ನೆಲೆ ಅಡ್ವೆಂಚರ್ ಬೈಕ್ ಬಗ್ಗೆ ಬೈಕ್ ಪ್ರೇಮಿಗಳು ತಿಳಿದುಕೊಳ್ಳಬೇಕಾದ 10 ಕುತೂಹಲದಾಯಕ ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಭಾರತೀಯ ಮೂಲದ ಅತಿ ದೊಡ್ಡ ದ್ವಿಚಕ್ರ ವಾಹನ ಅಭಿವೃದ್ಧಿ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದೆ.

ತಮಿಳುನಾಡಿನ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಮೋಟಾರು ಘಟಕದಲ್ಲೇ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ಇಲ್ಲಿಂದಲೇ ರಫ್ತುಗೊಳ್ಳಲಿವೆ.
Image Source: autocarindia

ವಿನೂತನ ಬಿಎಂಡಬ್ಲ್ಯು ಜಿ310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಎರಡರಿಂದ ಮೂರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದ್ದು, ಸ್ಥಳೀಯವಾಗಿ ಬಿಡಿಭಾಗಗಳ ಬಳಕೆಯಿಂದಾಗಿ ಬೈಕ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಬಿಎಂಡಬ್ಲ್ಯು ಸಂಸ್ಥೆಯು ತನ್ನ ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಜಿ310 ಜಿಎಸ್ ವಿನ್ಯಾಸವನ್ನು ರಚಿಸಿದ್ದು, ಇದು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಜೋಡಿಸಲಾಗಿದೆ. ಹಾಗೆಯೇ ಜಿ 310 ಆರ್ ಕೂಡಾ ಸ್ಪ್ರೀಟ್ ಫೈಟರ್ ಎನ್ನುವ ಟ್ಯಾಗ್ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು 28 ಎನ್ ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹೊಸ ಬೈಕ್‌ಗಳಲ್ಲಿ ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟೆಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಜೊತೆಗೆ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಹಾಗೆಯೇ ಬೈಕಿನ ಮುಂಭಾಗದ ಚಕ್ರಗಳಲ್ಲಿ 4 ಪಿಸ್ಟನ್ ಕ್ಯಾಲಿಪರ್ ಜೊತೆ 300ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ.

ಅಂದ ಹಾಗೆ, ನೂತನ ಜಿ310 ಜಿಎಸ್ ಬೈಕ್‌ಗಳು 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

ಇನ್ನು ಹೊಸ ಬೈಕ್‌ಗಳು ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌ಗೆ 30 ಕಿ.ಮಿ ಮೈಲೇಜ್ ಪಡೆದುಕೊಂಡಿರುತ್ತವೆ. ಒಟ್ಟಿನಲ್ಲಿ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಬಿಎಂಡಬ್ಲ್ಯು ಟ್ವಿನ್ ಬೈಕ್‌ಗಳು ಕೆಟಿಎಂ ಡ್ಯೂಕ್ 390, ಯಮಹಾ ವೈಜೆಡ್-ಎಫ್ ಆರ್3 ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ಗಳಿಗೆ ಪೈಪೋಟಿ ನೀಡುವ ತವಕದಲ್ಲಿವೆ ಎನ್ನಬಹುದು.


Click it and Unblock the Notifications








