23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಅಮೆರಿಕದ ಪ್ರಸಿದ್ದ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ರೋಡ್ ಮಾಸ್ಟರ್ ಎಲೈಟ್ ಐಷಾರಾಮಿ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 48 ಲಕ್ಷ ಬೆಲೆ ಹೊಂದಿದೆ.

By Praveen Sannamani

ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಬಿಡುಗಡೆ ಮಾಡಿರುವ ರೋಡ್ ಮಾಸ್ಟರ್ ಎಲೈಟ್ ಬೈಕ್‌ಗಳು ಲಿಮಿಟೆಡ್ ಆವೃತ್ತಿಯಾಗಿದ್ದು, ಭಾರತದಲ್ಲಿ ಕೇವಲ 300 ಬೈಕ್ ಮಾತ್ರ ಮಾರಾಟಗೊಳ್ಳಲಿವೆ. ವಿಶೇಷ ಅಂದ್ರೆ ಮಾರಾಟಗೊಳ್ಳಲಿರುವ ಈ ಎಲ್ಲಾ 300 ಬೈಕ್‌ಗಳನ್ನು ಸಹ ಈಗಾಗಲೇ ಇಂಡಿಯನ್ ಬೈಕ್ ಪ್ರಿಯರು ಬುಕ್ಕಿಂಗ್ ಮಾಡಿದಲ್ಲದೇ ಹೊಸ ಬೈಕ್ ಎರುವ ಉತ್ಸಾಹದಲ್ಲಿದ್ದಾರೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಬಿ ಸ್ಪೋಕ್ ಪೇಂಟ್ ಸ್ಕೀಮ್ ಹೊಂದಿರುವ ರೋಡ್ ಮಾಸ್ಟರ್ ಎಲೈಟ್ ಬೈಕ್‌ಗಳು ಹ್ಯಾಂಡ್-ಪೇಂಟ್ ಕ್ಯಾಂಡಿ ಬ್ಲ್ಯೂ ಮತ್ತು ಬ್ಲ್ಯಾಕ್ ಪೇಂಟ್ ಕೊಂಬೋ ಸೌಲಭ್ಯ ಹೊಂದಿದ್ದು, ಬೈಕಿನ ಪ್ರತಿಯೊಂದು ತಾಂತ್ರಿಕ ಅಂಶವು ಕೂಡಾ ವಿಭಿನ್ನ ಎನ್ನಿಸಲಿವೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

23 ಕ್ಯಾರೆಟ್ ಗೋಲ್ಡ್ ಬಳಕೆ

ಹೌದು, ಇಂಡಿಯನ್ ಮೋಟಾರ್ ಸೈಕಲ್‌ನ ರೋಡ್ ಮಾಸ್ಟರ್ ಎಲೈಟ್ ಬೈಕಿನ ಲೋಗೊ ಬ್ಯಾಡ್ಜ್ ಅನ್ನು 23 ಕ್ಯಾರೆಟ್ ಗೋಲ್ಡ್‌ನಿಂದ ಸಿದ್ದಗೊಳಿಸಲಾಗಿದ್ದು, ಬೈಕಿನ ಫ್ಯೂಲ್ ಟ್ಯಾಂಕ್ ಮೇಲೆ ವಿನೂತನ ವಿನ್ಯಾಸದ ಗೋಲ್ಡ್ ಬ್ಯಾಡ್ಜ್ ಜೋಡಣೆ ಮಾಡಲಾಗಿದೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಜೊತೆಗೆ ಅಲ್ಟ್ರಾ ಕ್ರೂಸರ್ ಬೈಕ್ ಮಾದರಿಯಾಗಿರುವ ರೋಡ್ ಮಾಸ್ಟರ್ ಎಲೈಟ್ ಹತ್ತಾರು ವಿಶೇಷ ತಂತ್ರಜ್ಞಾನಗಳ ಸೌಲಭ್ಯವಿದ್ದು, ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ವಿಶೇಷ ಫೀಚರ್ಸ್‌ಗಳನ್ನು ಒದಗಿಸಿರುವುದು ಈ ಬೈಕಿನ ಮತ್ತೊಂದು ವಿಶೇಷ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಬೈಕಿನ ತಾಂತ್ರಿಕ ಅಂಶಗಳು

ಒಂದೇ ಸೂರಿನಡಿ ಹತ್ತಾರು ಮಾಹಿತಿಗಳನ್ನು ನೀಡಬಲ್ಲ 7-ಇಂಚಿನ ಟಚ್ ಸ್ಕ್ರೀನ್ ರೈಡ್ ಕಮಾಂಡ್ ಸಿಸ್ಟಂ, ಬ್ಯೂಟೂಥ್ ನಾವಿಗೆಷನ್, ಗೋಲ್ಡ್ ಪ್ಲೇಟೆಡ್ ಎಂಜಿನ್ ಕವರ್, ರಿಮೋಟ್ ಲಾಕಿಂಗ್ ಸೈಡ್ ಬ್ಯಾಗ್ಸ್, ಪವರ್ ವೀಂಡ್‌ಶಿಲ್ಡ್ ಮತ್ತು 300ಡಬ್ಲ್ಯು ಆಡಿಯೋ ಸಿಸ್ಟಂ ಕೂಡಾ ಇದರಲ್ಲಿದೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಎಂಜಿನ್ ಸಾಮರ್ಥ್ಯ

ರೋಡ್ ಮಾಸ್ಟರ್ ಎಲೈಟ್ ಬೈಕ್‌ಗಳು 1811 ಸಿಸಿ ಥಂಡರ್ ಸ್ಟ್ರೋಕ್ 111 ವಿ ಟ್ವಿನ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 161ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಆದರೇ ಎಂಜಿನ್ ಬಿಎಚ್‌ಪಿ ಬಗೆಗೆ ಇನ್ನು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಬೈಕಿನ ವೈಶಿಷ್ಟ್ಯತೆ

ಐಷಾರಾಮಿ ಬೈಕ್ ರೈಡಿಂಗ್ ಕೌಶಲ್ಯವನ್ನು ಒದಗಿಸುವ ಉದ್ದೇಶದಿಂದಲೇ ಈ ಬೈಕ್ ಸಿದ್ದಗೊಳಿಸಲಾಗಿದ್ದು, ಸೂಪಿರಿಯರ್ ಕ್ವಾಲಿಟಿ ಆಸನ, ಬೈಕಿನಲ್ಲಿ 140 ಲೀಟರ್ ಸಾಮರ್ಥ್ಯದ ವಾಟರ್ ಪ್ರೂಫ್ ಸೈಡ್ ಬ್ಯಾಗ್‌ಗಳು ದೂರದ ಪ್ರಯಾಣಕ್ಕೆ ಸಹಕಾರಿಯಾಗಲಿವೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಇನ್ನು ರೋಡ್ ಮಾಸ್ಟರ್ ಎಲೈಟ್ ಬೈಕ್‌ಗಳು ಬರೋಬ್ಬರಿ 433 ಕೆಜಿ ತೂಕ ಪಡೆದುಕೊಂಡಿದ್ದು, ಬೈಕ್ ಚಾಲನೆ ಮಾಡುವ ಬೈಕ್ ಸವಾರರು ದೈಹಿಕವಾಗಿ ಸದೃಡವಾಗಿರಬೇಕಾದ ಅವಶ್ಯಕೆಯಿದೆ ಅಂದ್ರೆ ತಪ್ಪಾಗುವುದಿಲ್ಲ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯ

ಸುರಕ್ಷತೆಗಾಗಿ ಎಬಿಎಸ್, ಕ್ರೂಸ್ ಕಂಟ್ರೋಲರ್, ಎರಡು ಬದಿಯ ಚಕ್ರಗಳಲ್ಲೂ 300 ಎಂಎಂ ಡಿಸ್ಕ್ ಬ್ರೇಕ್, ರೈಡಿಂಗ್ ಅಸಿಸ್ಟ್ ಸೌಲಭ್ಯ ಹೊಂದಿರುವ ರೋಡ್ ಮಾಸ್ಟರ್ ಎಲೈಟ್ ಬೈಕ್‌ಗಳು ಸವಾರರ ನಿಯಂತ್ರಣಕ್ಕಾಗಿ 16 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಈ ಮೂಲಕ ದುಬಾರಿ ಬೆಲೆ ಹೊಂದಿರುವ ಹಾರ್ಲೇ ಡೇವಿಡ್ಸನ್ ಸಿವಿಒ ಲಿಮಿಟೆಡ್(49.99 ಲಕ್ಷ) ಎಡಿಷನ್‌ಗೆ ಪೈಪೋಟಿ ನೀಡಲಿದ್ದು, ಈಗಾಗಲೇ ಖರೀದಿಗೆ ಲಭ್ಯವಿರುವ ಎಲ್ಲಾ ಬೈಕ್ ಮಾರಾಟವಾಗಿರುವ ಹಿನ್ನೆಲೆ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ರೋಡ್ ಮಾಸ್ಟರ್ ಎಲೈಟ್ ಬೈಕ್ ಉತ್ಪಾದಿಸುವ ಸಾಧ್ಯತೆಗಳಿವೆ.

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಗಳಲ್ಲಿ ಕೆಳೆದ ಕೆಲ ವರ್ಷಗಳಿಂದ ತನ್ನ ವಿನೂತನ ಐಷಾರಾಮಿ ಕ್ರೂಸರ್ ಬೈಕ್‌ಗಳನ್ನು ಮಾರಾಟಗೊಳಿಸುತ್ತಿರುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಇದೀಗ ಲಿಮಿಡೆಟ್ ಎಡಿಷನ್ ರೋಡ್ ಮಾಸ್ಟರ್ ಎಲೈಟ್ ಬೈಕ್‌ ಅನ್ನು ಬಿಡುಗಡೆ ಮಾಡಿದೆ. 23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಸೇರಿದಂತೆ ಹತ್ತಾರು ವಿನೂತನ ಸೌಲಭ್ಯ ಹೊಂದಿರುವ ಈ ಹೊಸ ಬೈಕ್ ಭಾರತೀಯ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

More from DriveSpark

Article Published On: Thursday, May 3, 2018, 12:14 [IST]
English summary
Indian Roadmaster Elite Launched In India At Rs 48 Lakh: Limited To 300 And Comes With 23 Karat Gold.
Read more on indian motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+