ನಾಳೆಯಿಂದ ಗ್ರಾಹಕರ ಕೈ ಸೇರಲಿದೆ ಅಥೆರ್ 340 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್
ದೇಶದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯು ಗಗನಕ್ಕೇರುತ್ತಿರುವ ವಿಚಾರ ಬಹುತೇಕರಿಗೆ ಎಲ್ಲರಿಗು ತಿಳಿದಿದೆ. ಆದರೇ ಇದಕ್ಕೆ ಪರಿಹಾರ.? ಇದೇ.. ಅದೇ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವ
ದೇಶದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯು ಗಗನಕ್ಕೇರುತ್ತಿರುವ ವಿಚಾರ ಬಹುತೇಕರಿಗೆ ಎಲ್ಲರಿಗು ತಿಳಿದಿದೆ. ಆದರೇ ಇದಕ್ಕೆ ಪರಿಹಾರ.? ಇದೇ.. ಅದೇ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ವಾಹನ ತಯಾರಕರಿಗೆ ಆದೇಶ ನೀಡಿದೆ.

ವಾಹನ ಉತ್ಪಾದಕರು ಸಹ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, 2020ರ ವೇಳೆಗೆ ಬಹುತೇಕ ತಮ್ಮ ವಿದ್ಯುತ್ ವಾಹನಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. ಹೀಗೆಯೆ ಬೆಂಗಳೂರು ಮೂಲದ ಪ್ರತಿಷ್ಠಿತ ಎಥೆರ್ ಎನರ್ಜಿ ಸಂಸ್ಥೆಯು ಜೂನ್ ತಿಂಗಳಿನಲ್ಲಿ ತಮ್ಮ 340 ಮತ್ತು 450 ಎಲೆಕ್ಟ್ರಿಕ್ ಸ್ಮಾರ್ಟ್ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿತು.

ಸುಮಾರು ಎರಡು ವರ್ಷಗಳ ಪ್ರಯತ್ನದ ನಂತರ ಸಂಸ್ಥೆಯು ಈ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಅಥೆರ್ ಸಂಸ್ಥೆಯ 340 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ ಗ್ರಾಹಕರು ನಾಳೆಯಿಂದ (ಸೆಪ್ಟೆಂಬರ್-11-2018) ಸ್ಕೂಟರ್ ಡೆಲಿವರಿ ಪಡೆಯಲಿದ್ದಾರೆ ಎಂದು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ.

ಅಥೆರ್ ಎನರ್ಜಿ ಸಂಸ್ಥೆಯು ಬಿಡುಗಡೆ ಮಾಡಿರುವ 340 ಮತ್ತು 450 ಎಲೆಕ್ಟ್ರಿಕ್ ಸ್ಕೂಟರ್ ನೋಡಲು ಒಂದೇ ರೀತಿಯಲ್ಲಿದ್ದರೂ ತಾಂತ್ರಿಕ ವಿಚಾರವಾಗಿ ವಿಭಿನ್ನತೆ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ರೂಸ್‌ಲೆಸ್ ಡಿಸಿ ಮೋಟಾರ್(ಬಿಎಲ್‌ಡಿಸಿ) ಬಳಕೆ ಮಾಡಿದೆ.
MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಹೊಸ ಸ್ಕೂಟರ್‌ಗಳಲ್ಲಿ ಜೋಡಿಸಲಾಗಿರುವ ಬ್ಯಾಟರಿ ಮ್ಯಾನೆಜ್‌ಮೆಂಟ್ ಸಿಸ್ಟಂ ಮೇಲೆ ಬರೋಬ್ಬರಿ 3 ವರ್ಷಗಳ ವಾರಂಟಿ ಸಹ ನೀಡಲಾಗಿದ್ದು, ಎಂಜಿನ್ ಪರ್ಫಾಮೆನ್ಸ್ ವಿಚಾರ ಬಂದಲ್ಲಿ 180 ಸಿಸಿ ಬೈಕ್ ಮಾದರಿಯಲ್ಲೇ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ರೈಡಿಂಗ್ ಅನುಭವ ನೀಡಲಿವೆ.

ಸ್ಕೂಟರ್ ಪರ್ಫಾಮೆನ್ಸ್
ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್‌ಗಳು 20ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 450 ಸ್ಕೂಟರ್ ಮಾದರಿಗಳು 20.5-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತೆಗೆ ಗಂಟೆಗೆ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ 340 ಸ್ಕೂಟರ್‌ಗಳು ಕೇವಲ 5.1 ಸೇಕೆಂಡುಗಳಲ್ಲಿ 40 ಕಿ.ಮಿ ವೇಗ ಪಡೆದುಕೊಂಡರೇ, 450 ಸ್ಕೂಟರ್‌ಗಳು 3.9 ಸೇಕೆಂಡುಗಳಲ್ಲಿ 40 ಕಿ.ಮಿ ವೇಗದಲ್ಲಿ ಚಲಿಸಬಲ್ಲವು.

ಬ್ಯಾಟರಿ ಸಾಮರ್ಥ್ಯ
ಒಂದು ಬಾರಿ ಪೂರ್ಣಪ್ರಮಾಣ ಬ್ಯಾಟರಿ ಚಾರ್ಜ್ ಮಾಡಿದಲ್ಲಿ 340 ಸ್ಕೂಟರ್‌ಗಳು 60 ಕಿ.ಮೀ ಮೈಲೇಜ್ ನೀಡಿದಲ್ಲಿ, 450 ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇನ್‌ಬಿಲ್ಟ್ ರಿವರ್ಸ್ ಅಸಿಸ್ಟ್ ಫಿಚರ್ಸ್ ನೀಡಲಾಗಿದ್ದು, ಹಿಮ್ಮುಖವಾಗಿ ಪ್ರತಿ ಗಂಟೆಗೆ 5 ಕಿ.ಮಿ ವೇಗದಲ್ಲಿ ಚಲಿಸುವ ಗುಣವಿಶೇಷತೆ ಹೊಂದಿದೆ. ಇದು ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಸ್ಕೂಟರ್‌ಗಳನ್ನು ಹೊರತೆಗೆಯಲು ಹೆಚ್ಚು ಅನುಕೂಲಕರವಾಗಲಿದೆ.

ಬೈಕಿನ ಹೊರ ವೈಶಿಷ್ಟ್ಯತೆಗಳು
ಅಥೆರ್ 340 ಸ್ಕೂಟರ್‍ನಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ನ್ಯಾವಿಗೆಷನ್, ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡಬಹುದಾದ ಪಾರ್ಕಿಂಗ್ ಅಸಿಸ್ಟ್, ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್ ಸೌಲಭ್ಯ ಸಹ ಇದರಲ್ಲಿದೆ.
MOST READ: ಕೇವಲ 8 ತಿಂಗಳಿನಲ್ಲಿ ಪುಣೆ ಟ್ರಾಫಿಕ್ ಪೊಲೀಸರು ವಸೂಲಿ ಮಾಡಿದ ದಂಡ ಎಷ್ಟು ಗೊತ್ತಾ.?

ಈ ಹೊಸ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಸೌಲಭ್ಯಗಳು ಸಹ ದೊರೆಯಿದ್ದು, ಮನೆ ಅಂಗಳದಲ್ಲಿ ಉಚಿತವಾಗಿ ಚಾರ್ಜಿಂಗ್ ಪಾಯಿಂಟ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಮೂಲಕವೇ ಸ್ಕೂಟರಿನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ.


Click it and Unblock the Notifications








