ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

By Praveen Sannamani

ಜಾವಾ ಯೆಜ್ಡಿ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ಇಲ್ಲವಾದ್ರೂ ಅವುಗಳ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ಜಾವಾ ಯೆಜ್ಡಿ ಬೈಕ್‌ಗಳಿಗೆ ಫಿದಾ ಆಗದವರೇ ಇಲ್ಲ ಎಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಬೈಕ್ ಪ್ರೇಮಿಗಳ ಮನಗೆದ್ದಿದ್ದ ಈ ಬೈಕ್‌ಗಳು ಬಹುತೇಕರ ಪಾಲಿನ ಆ್ಯಂಟಿಕ್ ಪೀಸ್.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ದೇಶದಲ್ಲಿ ಸದ್ಯ ಜಾವಾ ಯೆಜ್ಡಿ ಬೈಕ್‌ಗಳು ಮಾರಾಟಕ್ಕೆ ಇಲ್ಲವಾದ್ರೂ ಪ್ರತಿ ವರ್ಷ ನಡೆಯುವ ಜಾವಾ ದಿನಾಚರಣೆಯು ಹಲವು ವಿಶೇಷತೆಗಳಿಂದಾಗಿ ಗಮನಸೆಳೆಯುತ್ತಿದ್ದು, ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಜಾವಾ ದಿನಾಚರಣೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದಲ್ಲದೇ ಸಿಲಿಕಾನ್ ಸಿಟಿ ಜನರ ಆಕರ್ಷಣೆಗೆ ಕಾರಣವಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಬೆಂಗಳೂರಿನ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್' ವತಿಯಿಂದ ಆಯೋಜಿಸಲಾಗಿದ್ದ ಜಾವಾ ಯೆಜ್ಡಿ ಬೈಕ್ ರ‍್ಯಾಲಿಯಲ್ಲಿ ಸಮಾರು 500ಕ್ಕೂ ಬೈಕ್‌ಗಳು ಪಾಲ್ಗೊಂಡಿದ್ದಲ್ಲದೇ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳ ಸದ್ದು ಬೈಕ್ ಪ್ರೇಮಿಗಳ ಎದೆಯಲ್ಲಿ ರೊಮಾಂಚನ ಉಂಟುಮಾಡಿತು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ನಗರ ಹೃದಯ ಭಾಗದಲ್ಲಿರುವ ಸೇಂಟ್ ಜೋಸೆಫ್ ಹೈ ಸ್ಕೂಲ್ ಮೈದಾನದಿಂದ ಆರಂಭವಾದ ಬೈಕ್ ರ‍್ಯಾಲಿಯು ವಿಠಲ್ ಮಲ್ಯಾ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಪ್ರದರ್ಶನ ನಡೆಯಿತು. ರ‍್ಯಾಲಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ 50ಸಿಸಿ ಸಾಮರ್ಥ್ಯದ ಜಾವಾ ಕ್ಲಾಟ್, 125ಸಿಸಿ ಸಾಮರ್ಥ್ಯದ ಪರ್ಕ್ ಮತ್ತು 350ಸಿಸಿ ಸಾಮರ್ಥ್ಯ ಟ್ವಿನ್ ಬೈಕ್‌ಗಳ ಸದ್ದು ಕ್ಲಾಸಿಕ್ ಯುಗವನ್ನು ನೆನಪಿಸಿದ್ದು ಮಾತ್ರ ಸುಳ್ಳಲ್ಲ.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಒಂದು ಕಾಲದಲ್ಲಿ ವಿಶ್ವದಲ್ಲೇ ಜನಪ್ರಿಯವಾಗಿದ್ದ ಬುಲೆಟ್ ಬೈಕ್‌ಗಳ ಜಾವಾ ಕೂಡಾ ಒಂದು. ಮೈಸೂರಿನಲ್ಲಿಯೇ ತಯಾರಾಗುತ್ತಿದ್ದ ಈ ಬೈಕ್‌ಗಳು 1960 ರಿಂದ 1996ರವರೆಗೆ ಭಾರತದ ಮಹಾನಗರಗಳನ್ನು ಮಾತ್ರವಲ್ಲ, ವಿಶ್ವದ ಅನೇಕ ರಾಷ್ಟ್ರಗಳಿಗೆ ರಫ್ತಾಗಿದ್ದವು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಟರ್ಕಿ, ನೈಜಿರಿಯಾ, ಶ್ರೀಲಂಕಾ, ಈಜಿಪ್ಟ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಯೆಜ್ಢಿ ಬೈಕ್ ಎಂಬುದು ರೋಡ್ ಕಿಂಗ್ ಆಗಿ ಮೆರೆದಿತ್ತು. ‘ಫಾರ್ ಎವರ್ ಬೈಕ್, ಫಾರ್ ಎವರ್ ವ್ಯಾಲ್ಯೂ...' ಎಂಬುದು ಯೆಜ್ಡಿ ಅಡಿ ಬರಹವಾಗಿತ್ತು !

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಆ ಕಾಲದ ಸಿನಿಮಾ ಹೀರೋಗಳು ನಾಯಕಿಯರನ್ನು ಕೂರಿಸಿಕೊಂಡು ಓಡುತ್ತಿದ್ದ ವಾಹನ ಕೂಡ ಇದೇ. ಇಂಥಾ ಬೈಕ್ ಏರಿ, ಪ್ರೀತಿಸಿದ ಯುವತಿಯನ್ನೋ, ಮೆಚ್ಚಿನ ಮಡದಿಯನ್ನೋ, ಕಾಲೇಜಿನ ಗರ್ಲ್ಸ್ ಫ್ರೆಂಡ್ ಅನ್ನೋ ಹಿಂದೆ ಕೂರಿಸಿಕೊಂಡು- ಬೈಕ್ ಓಡಿಸುವುದು ಆ ಕಾಲದ ‘ಹೀರೋಯಿಸಂ' ಆಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಅಂದು ಹೀರೋಯಿಸಂ ಮೆರೆದ ಅನೇಕರು ಇಂದು ಹಿರಿಯ ನಾಗರಿಕರು. ವಿಶೇಷ ಅಂದ್ರೆ, ಅಂದು ಬೈಕ್ ಓಡಿಸಿದವರು ಇಂದಿನ ಬೈಕ್ ರ‍್ಯಾಲಿಯಲ್ಲಿ ಕೂಡಾ ಭಾಗಿಯಾಗಿಗುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದು ಯುವಕರನ್ನು ನಾಚಿಸುವಂತಿತ್ತು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಈ ಎಲ್ಲ ಕಾರಣಕ್ಕಾಗಿಉಯೋ ಏನೋ, ಬಹುತೇಕರಿಗೆ ಯೆಜ್ಡಿ ಎಂದರೆ ಆ್ಯಂಟಿಕ್ ಪೀಸ್ ! ಅದನ್ನು ಜತನದಿಂದಲೇ ಮನೆಯಲ್ಲಿಟ್ಟುಕೊಂಡು ರ‍್ಯಾಲಿಗಳ ಸಂದರ್ಭದಲ್ಲಿ ಬೈಕ್ ಏರಿ, ಚಿರ ಯೌವನಿಗರಾಗುತ್ತಾರೆ. ಭಾನುವಾರ ನಡೆದ ರ‍್ಯಾಲಿಯಲ್ಲೂ ಕೂಡಾ ಯೆಜ್ಡಿ ಏರಿದವರಲ್ಲಿ ಯುವಕರೂ ಇದ್ದರು. ಜೊತೆಗೆ ಹಿರಿಯರಂತೆ ಅವರು ಕೂಡ ಜೋಶ್‌ನಲ್ಲಿ ಬೈಕ್ ಓಡಿಸಿದ್ದು ವಿಶೇಷವಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

1996ರಿಂದಲೇ ಜಾವಾ ಸಂಸ್ಥೆಯು ತನ್ನ ಐಕಾನಿಕ್ ಮೋಟಾರ್‌ಸೈಕಲ್‌ಗಳ ನಿರ್ಮಾಣವನ್ನು ಕೊನೆಗೊಳಿಸಿತ್ತು. ಇದೀಗ ಮಹೀಂದ್ರ ಜಾವಾ ಬ್ರಾಂಡ್ ಹೆಸರಲ್ಲಿ ಮಾರಾಟ ಹಕ್ಕು ಗಿಟ್ಟಿಸಿಕೊಳ್ಳುವ ಮೂಲಕ ಮರು ಜೀವ ಪಡೆಯುವ ಕಾಲ ಸನ್ನಿಹತವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಬ್ರಿಟನ್‌ನ ಅತಿ ಹಳೆಯ ಬಿಎಸ್‌ಎ ಮೋಟಾರ್ ಸೈಕಲ್ ಸಂಸ್ಥೆಯನ್ನು ಖರೀದಿಸುವ ಮೂಲಕ ದೇಶದೆಲ್ಲ ವಾಹನ ಪ್ರೇಮಿಗಳನ್ನು ಆಶ್ಚರ್ಯ ಚಕಿತಗೊಳಿಸಿರುವ ಭಾರತದ ಅಗ್ರಗಣ್ಯ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯೀಗ ಮಗದೊಂದು ಐಕಾನಿಕ್ ಜಾವಾ ಬ್ರಾಂಡ್ ಮಾದರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಪ್ರೀಮಿಯಂ ಹಾಗೂ ಐಕಾನಿಕ್ ಮೋಟಾರ್ ಸೈಕಲ್ ವಿಭಾಗವನ್ನು ಗುರಿ ಮಾಡಲಿರುವ ಮಹೀಂದ್ರ, ಹಳೆಯ ಜೀವನಶೈಲಿಯನ್ನು ಹೊಸ ರೀತಿಯಲ್ಲಿ ಮರು ಸೃಷ್ಟಿ ಮಾಡಲಿದೆ.

ಸಿಲಿಕಾನ್ ಸಿಟಿಯಲ್ಲಿ ಜಾವಾ ಯೆಜ್ಢಿ ಬೈಕ್‌ಗಳದ್ದೇ ಕಾರು ಬಾರು..!!

ಮಹೀಂದ್ರಾ ಅಂಗ ಸಂಸ್ಥೆಯಾಗಿರುವ ಕ್ಲಾಸಿಕ್ ಲೆಜೆಂಡ್ಸ್ ಇಂಡಿಯಾ ಮತ್ತು ಪೂರ್ವ ಏಷ್ಯಾದಲ್ಲಿ ಜಾವಾ ಬ್ರಾಂಡ್ ನಲ್ಲಿ ಹೊಸ ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಗಿಟ್ಟಿಸಿಕೊಂಡಿದೆ. ಒಟ್ಟಿನಲ್ಲಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದ ಜಾವಾ ಯಜ್ಡಿ ಬೈಕ್‌ಗಳು ಹೊಸತನದೊಂದಿಗೆ ಮತ್ತೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಆಧುನಿಕ ಭರಾಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಠಿಸುವ ತವಕದಲ್ಲಿವೆ ಎನ್ನಬಹುದು.

Kannada
Read more on auto news
English summary
Bangalore Jawa Yezdi Motorcycle Club (BJYMC) To Host 16th International Jawa Day Celebrations.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more