ಮತ್ತೆ ದುಬಾರಿಯಾದ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಖರೀದಿ
ಕವಾಸಕಿ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸೂಪರ್ ಬೈಕ್ ಮಾದರಿಗಳಾದ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದ್ದು, ಹೊಸ ಬೈಕ್ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಕವಾಸಕಿ ಸಂಸ್ಥೆಯು ಶಾಕ್ ನೀಡಿದೆ.

ಕಳೆದ ಜೂನ್‌ನಲ್ಲಿ ಕವಾಸಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೇ ಬಿಡುಗಡೆ ಮಾಡಿತ್ತು. ಭಾರತದಲ್ಲೇ ನಿರ್ಮಾಣ ಮಾಡಿ ಬಿಡುಗಡೆಗೊಳಿಸಲಾಗಿದ್ದ ಈ ಬೈಕ್‌ಗಳು ಆಕರ್ಷಕ ಬೆಲೆ ಬಿಡುಗೊಂಡಿದ್ದಲ್ಲದೇ ಮೆಡ್ ಇನ್ ಇಂಡಿಯಾ ಹೆಗ್ಗಳಿಕೆ ಪಾತ್ರವಾಗಿದ್ದವು. ಆದ್ರೆ ಇದೀಗ ಹೊಸ ಬೈಕ್ ಬಿಡುಗಡೆಯಾಗಿ ಕೆಲವು ತಿಂಗಳಲ್ಲಿ ಭಾರೀ ಪ್ರಮಾಣದ ಬೆಲೆ ಏರಿಕೆ ಮಾಡಲಾಗಿದೆ.

ಸದ್ಯ ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು ಕ್ರಮವಾಗಿ ರೂ. 16.5 ಲಕ್ಷ ಮತ್ತು ರೂ. 21 ಲಕ್ಷ ಬೆಲೆ ಹೊಂದಿದ್ದು, ಪ್ರತಿ ಬೈಕಿನ ಬೆಲೆಯನ್ನು ರೂ.50 ಸಾವಿರ ಏರಿಕೆ ಮಾಡಲಾಗಿದೆ.

ಬಿಡುಗಡೆಯ ನಂತರ ಜುಲೈನಲ್ಲಿ ಮೊದಲ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬ್ಯಾಚ್ ಮಾರಾಟಗೊಂಡಿದ್ದು, ಇದೀಗ 2ನೇ ಬ್ಯಾಚ್ ಬೈಕ್‌ಗಾಗಿ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ ಕವಾಸಕಿ ಸಂಸ್ಥೆಯು ಬೆಲೆ ಹೆಚ್ಚಳದ ಶಾಕ್ ನೀಡಿದೆ.

ಇದಕ್ಕೆ ಕಾರಣ, ಸುಪ್ರೀಂಕೋರ್ಟ್ ಆದೇಶದಂತೆ ಸೆಪ್ಟೆಂಬರ್ 1ರಿಂದ ಹೊಸ ಬೈಕ್‌ಗಳಿಗೆ 5 ವರ್ಷದ ಕಡ್ಡಾಯ ಥರ್ಡ್ ಪಾರ್ಟಿ ಮಿಮೆ ಪಾಲಸಿಯನ್ನು ಕಡ್ಡಾಯಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಿಮಿಯಂಗಳ ಮೊತ್ತವು ದುಬಾರಿಯಾಗಿರುವುದು ಬೈಕ್ ಮಾರಾಟದ ಮೇಲೂ ಪರಿಣಾಮ ಬಿರಿದೆ.

ಬೈಕ್‌ಗಳ ಎಂಜಿನ್ ಸಾಮರ್ಥ್ಯ
ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು 998ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಫೌರ್ ಸಿಲಿಂಡರ್ ಎಂಜಿನ್ ಹೊಂದಿದ್ದು, 197-ಬಿಎಚ್‌ಪಿ ಮತ್ತು 113.4-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.
MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಜೊತೆಗೆ ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಎಂಜಿನ್ ವಿಭಾಗದಲ್ಲಿ ಎರಡು ಮಾದರಿಗಳು ಒಂದೇ ಆಗಿದ್ದರೂ ಬೈಕಿನಲ್ಲಿ ನೀಡಲಾಗಿರುವ ಕೆಲವು ಐಷಾರಾಮಿ ಫಿಚರ್ಸ್‌ಗಳು ಭಿನ್ನತೆಯನ್ನು ಹೊಂದಿವೆ ಎನ್ನಬಹುದು.

ಬೈಕಿನ ವೈಶಿಷ್ಟ್ಯತೆಗಳು ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳಲ್ಲಿ ಕವಾಸಕಿ ಲಾಂಚ್ ಕಂಟ್ರೊಲರ್, ಕವಾಸಕಿ ಟ್ರಾನ್ಷನ್ ಕಂಟ್ರೊಲರ್, ಕವಾಸಕಿ ಬ್ರೇಕಿಂಗ್ ಕಂಟ್ರೊಲರ್, ಕ್ವಿಕ್ ಶಿಫ್ಟರ್, ಕಾರ್ನರ್ ಮ್ಯಾನೆಜ್‌ಮೆಂಟ್ ಫಂಕ್ಷನ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯ ಹೊಂದಿವೆ.

ನಿಂಜಾ ಜೆಡ್ಎಕ್ಸ್-10ಆರ್ ಮಾದರಿಗಳಲ್ಲಿ ಕೆಆರ್‌ಟಿ ವೆರಿಯೆಂಟ್ ಖರೀದಿಗೆ ಲಭ್ಯವಿದ್ದು, ಗ್ರೀನ್ ಬಣ್ಣದ ಪೇಂಟ್ ಸ್ಕೀಮ್ ಹೊಂದಿದೆ. ಹಾಗೆಯೇ ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು ಸಹ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ 3 ವಿವಿಧ ವೆರಿಯೆಂಟ್‌ಗಳ ಜೊತೆ ಜೊತೆಗೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿವೆ.

ಹೀಗಾಗಿಯೇ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳನ್ನು ಸದ್ಯ ಭಾರತದಲ್ಲಿ ಉತ್ತಮ ಬೇಡಿಕೆಯ ಬೈಕ್ ಮಾದರಿಯಾಗಿದ್ದು, ಸೂಪರ್ ಬೈಕ್ ಮಾರಾಟದಲ್ಲಿ ಸುಜುಕಿ, ಬಿಎಂಡಬ್ಲ್ಯು, ಯಮಹಾ ಮತ್ತು ಹೋಂಡಾ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡುತ್ತಿದೆ.


Click it and Unblock the Notifications








