ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಕವಾಸಕಿ ನಿರ್ಮಾಣದ ಬಹುನೀರಿಕ್ಷಿತ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.5.58 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

By Praveen Sannamani

ಸೂಪರ್ ಬೈಕ್ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕವಾಸಕಿ ನಿರ್ಮಾಣದ ಬಹುನೀರಿಕ್ಷಿತ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.5.58 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಕವಾಸಕಿ ಬಿಡುಗಡೆ ಮಾಡಿರುವ ಕ್ರೂಸರ್ ವೈಶಿಷ್ಟ್ಯತೆಯ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬೈಕ್‌ಗಳು ಈ ಹಿಂದಿನ ವಲ್ಕನ್ ಎಸ್ 650 ಮುಂದುವರಿದ ಭಾಗವಾಗಿದ್ದು, ಐಷಾರಾಮಿ ಕ್ರೂಸರ್ ಬೈಕ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ. ಒಟ್ಟು 2 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಬೈಕ್‌ಗಳು ಮಹಿಳಾ ಬೈಕರ್‌ಗಳಿಗಾಗಿಯೇ ವಿಶೇಷವಾಗಿ ಅಭಿವೃದ್ಧಿ ಮಾಡಲಾಗಿದೆ ಎಂಬ ಮಾಹಿತಿ ಕೂಡಾ ಇದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಹೀಗಾಗಿ ಬೈಕ್ ಸವಾರಿ ಮಾಡುವ ರೈಡ್‌ಗಳಿಗೆ ವಿಶೇಷ ಚಾಲನಾ ಅನುಭವ ಒದಗಿಸುವ ವಲ್ಕನ್ ಎಸ್ 650 ಬೈಕ್‌ಗಳು, ಹೋಂದಾಣಿಕೆ ಮಾಡಬಲ್ಲ ಸ್ಯಾಂಡರ್ಡ್, 25ಎಂಎಂ ಫಾರ್ವಡ್ ಮತ್ತು 25ಎಂಎಂ ಬ್ಯಾಕ್‌ವರ್ಡ್ ಫುಟ್ ಪೆಗ್ಸ್ ಸೌಲಭ್ಯ ಪಡೆದಿದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ವಲ್ಕನ್ ಎಸ್ 650 ಬೈಕ್ ಆವೃತ್ತಿಗಳು 649ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 60.2ಬಿಎಚ್‌ಪಿ ಮತ್ತು 62.7ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಜೊತೆಗೆ ಸ್ಟಿಲ್ ಡೈಮಂಡ್ ಪ್ರೆಮ್ ಮತ್ತು ಫ್ಯೂಲ್ ಇಂಜೆಕ್ಡೆಡ್ ಎಂಜಿನ್ ಸೌಲಭ್ಯಗಳು ಹೊಸ ಬೈಕಿನ ಅಂದವನ್ನು ಹೆಚ್ಚಿಸಿದ್ದು, ಇತರೆ ಕ್ರೂಸ್ ಬೈಕ್‌ಗಳಿಂತೂ ತುಸು ಹೆಚ್ಚಿನ ಭಾರವನ್ನು(235) ಹೊಂದಿದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಆದರೂ ಸ್ಪೋರ್ಟ್ ಬೈಕ್‌ ಆವೃತ್ತಿಗಳಿಗೆ ಕಡಿಮೆ ಅಲ್ಲದ ವೈಶಿಷ್ಟ್ಯತೆಗಳನ್ನು ಕೂಡಾ ಹೊಂದಿರುವ ವಲ್ಕನ್ ಎಸ್ 650 ಬೈಕಿನಲ್ಲಿ ಸುಖಕರ ಪ್ರಯಾಣಕ್ಕೆ ವಿವಿಧ ರೈಡಿಂಗ್ ಮೂಡ್‌ಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಇದಲ್ಲದೇ ಸುರಕ್ಷಿತ ಬೈಕ್ ಚಾಲನೆಗಾಗಿ ಆಯ್ಕೆ ರೂಪದಲ್ಲಿ ಎಬಿಎಸ್, ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹ್ಯಾಂಡಲ್‌ಗಳು, ಅತ್ಯತ್ತಮ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಪ್ರಮುಖ ಎರಡು ಬಣ್ಣಗಳೊಂದಿಗೆ ಹೊಸ ಬೈಕ್ ಅನ್ನು ಉತ್ಪಾದನೆ ಮಾಡಲಾಗಿದೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಕವಾಸಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವೈ.ಯುಟಕಾ ಅವರು 'ಭಾರತದಲ್ಲಿ ಸ್ಪೋರ್ಟ್ ಬೈಕ್ ಬಳಿಕ ಕ್ರೂಸರ್ ಆವೃತ್ತಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಉದ್ದೇಶದಿಂದಲೇ ಕವಾಸಕಿ ಜನಪ್ರಿಯ ಮಾದರಿಯಾದ ವಲ್ಕನ್ ಎಸ್ 650 ಪರಿಚಯಿಸುತ್ತಿದ್ದೇವೆ' ಎಂದಿದ್ದಾರೆ.

ಕವಾಸಕಿ ವಿನೂತನ ವಲ್ಕನ್ ಎಸ್ ಪರ್ಲ್ ಲಾವಾ ಆರೇಂಜ್ ಎಡಿಷನ್ ಬಿಡುಗಡೆ

ಒಟ್ಟಿನಲ್ಲಿ ಐಷಾರಾಮಿ ಕ್ರೂಸರ್ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಬೇಡಿಕೆ ಸಾಧಿಸುವ ತವಕದಲ್ಲಿರುವ ವಲ್ಕನ್ ಎಸ್ 650 ಬೈಕ್‌ಗಳು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಮತ್ತು ರಾಯಲ್ ಎನ್‌ಫೀಲ್ಡ್ ಮುಂಬರುವ ಕಾಂಟಿನೆಂಟರ್ ಜಿಟಿ 650 ಟ್ವಿನ್ ಬೈಕ್ ಆವೃತ್ತಿಗಳಿಗೆ ಪೈಪೋಟಿ ನೀಡುವ ಗುಣಹೊಂದಿದೆ.

Article Published On: Wednesday, May 2, 2018, 17:16 [IST]
English summary
Kawasaki Vulcan S Pearl Lava Orange Launched In India At Rs 5.58 Lakh.
Read more on kawasaki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+