ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಕೆಟಿಎಂ ಡ್ಯೂಕ್ 200 ಬೈಕ್
ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಸಂಸ್ಥೆಯು ತಮ್ಮ ಬೈಕ್‍ಗಳಿಂದ ಯುವಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಸಂಸ್ಥೆಯು ತಮ್ಮ ಮಾರಾಟದ ಶ್ರೇಣಿಯನು ಅಧಿಕಗೊಳಿಸಲು ತಮ್ಮ ಬೈಕ್‍ಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಮೊದಲನೆಯದಾಗಿ ತಮ್ಮ ಜನಪ್ರಿಯ 200ಸಿಸಿ ಬೈಕ್ ಸರಣಿಯಲ್ಲಿರುವ ಕೆಟಿಎಂ ಡ್ಯುಕ್ 200 ಬೈಕ್‍ಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವ ಸಲುವಾಗಿ, ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.6 ಲಕ್ಷದ ಮಾರಾಟದ ಬೆಲೆಯನ್ನು ನಿಗದಿ ಮಾಡಲಾಗಿದೆ.

ಇದುವರೆಗು ಕೆಟಿಎಂ ಸಂಸ್ಥೆಯು ತಮ್ಮ ಡ್ಯೂಕ್ 200 ಬೈಕ್‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಇಲ್ಲದೆಯೆ ಮಾರಾಟ ಮಾಡಲಾಗುತ್ತಿದ್ದು, ಆದರೆ 2019ರ ಏಪ್ರಿಲ್‍ನ ನಂತರ 150ಸಿಸಿ ಮೇಲ್ಪಟ್ಟ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ತಪ್ಪದೇ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿರಬೇಕೆಂಬ ಕೇಂದ್ರ ಸರ್ಕಾರದ ಆದೇಶದಂತೆ ಡ್ಯುಯಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲಾಗಿದೆ.

ದೇಶದಲ್ಲಿ ತಮ್ಮ ಬೈಕ್‍ಗಳನ್ನು ಮಾರಾಟ ಮಾಡಲು ಯೋಜಿಸಿದ ಆಸ್ಟ್ರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕೆಟಿಎಂ ಬಜಾಜ್ ಸಂಸ್ಥೆಯೊಂದಿಗೆ ಕೈ ಜೋಡಿಸಿತು. ಈ ನಿಟ್ಟಿನಲ್ಲಿ 2013ರ ವೇಳೆಯಲ್ಲಿ ತಮ್ಮ ಡ್ಯುಕ್ 200 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಎಂಜಿನ್ ಸಾಮರ್ಥ್ಯ
ಕೆಟಿಎಂ ಡ್ಯೂಕ್ 200 ಬೈಕ್ 199.5ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 24ಬಿಹೆಚ್‍ಪಿ ಮತ್ತು 19.6ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನೇಕೆಡ್ ಮೋಟಾರ್‍ಸೈಕಲ್ ಆದ ಕೆಟಿಎಂ ಡ್ಯೂಕ್ 200 ಬೈಕ್‍ನ ಮುಂಭಾಗದಲ್ಲಿ ಯುಎಸ್‍ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಕ್ ಅನ್ನು ಒದಗಿಸಲಾಗಿದೆ. ಇದರ ಜೊತೆಗೆ 17 ಇಂಚಿನ ವ್ಹೀಲ್‍ಗಳನ್ನು ಸಹ ನೀಡಲಾಗಿದೆ.

ರೈಡರ್‍ಗಳ ಸುರಕ್ಷಣೆಗಾಗಿ ಕೆಟಿಎಂ ಡ್ಯೂಕ್ ಬೈಕ್‍ನ ಮುಂಭಾಗದಲ್ಲಿ 300 ಎಂಎಂ ಮತ್ತು ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದ್ದು, ಇದೀಗ ಸುರಕ್ಷೆತೆಗಾಗಿ ಹೆಚ್ಚು ಒತ್ತು ನೀಡಲು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಕೆಟಿಎಂ ಡ್ಯೂಕ್ 200 ಬೈಕ್ ಬಿಡುಗಡೆಗೊಂಡ ಮೊದಲಿನಲ್ಲಿ ಕೇವಲ ಆರೆಂಜ್ ಬಣ್ಣದಲ್ಲಿ ಮಾತರ ಲಭ್ಯವಾಗಿತ್ತು, ಆದರೆ ಕೆಲದಿನಗಳ ನಂತರ ಸಂಸ್ಥೆಯು ಈ ಬೈಕ್‍ಗಳಿಗೆ ಬಿಳಿ ಮತ್ತು ಕಪ್ಪು ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ನೀಡಿದೆ.

ಕೆಟಿಎಂ ಡ್ಯೂಕ್ 200 ಬೈಕ್ ಸಂಸ್ಥೆಹಿಂದ ಬಿಡುಗಡೆಗೊಂಡ ಮೊದಲ ಬೈಕ್ ಆಗಿದ್ದು, ಈಗಲೂ ಸಹ ಸಂಸ್ಥೆಲ್ಲಿನ ಹೆಚ್ಚು ಜನಪ್ರಿಯತೆಯನ್ನು ಪಡೆಯುವಲ್ಲಿ ಮುಂದೆ ಇದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 200 ಬೈಕ್ ಬಜಾಜ್ ಪಲ್ಸರ್ ಎನ್ಎಸ್200 ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್ 200 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications