ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸಿದ್ದು, ಇದೀಗ ಮತ್ತೊಮ್ಮೆ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲು ಎಂಟ್ರಿ ಲೆವಲ್ 125 ಡ್ಯೂಕ್ ಬೈಕ್ ಬಿಡುಗಡೆ ಮಾಡಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಮಾದರಿಯಾಗಿರುವ ಡ್ಯೂಕ್ 125 ಬೈಕ್ ಮಾದರಿಗಳು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತದಲ್ಲೂ ಹೊಸ ಬೈಕ್ ಉತ್ಪನ್ನವನ್ನು ಪರಿಚಯಿಸುವ ಮೂಲಕ ಕೆಟಿಎಂ ಸಂಸ್ಥೆಯು ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆಯುವ ತವಕದಲ್ಲಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಕೆಟಿಎಂ ಸಂಸ್ಥೆಯು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಸಹ ಮಾರಾಟ ಮಾಡುತ್ತಿದ್ದು, ಅದೇ ಬೈಕಿನ ಡಿಸೈನ್ ಪ್ರೇರಿಣೆ ಹೊಂದಿರುವ ಬೇಬಿ ಡ್ಯೂಕ್( ಡ್ಯೂಕ್ 125) ಬೈಕ್ ಮಾದರಿಯನ್ನು ಹೊರತಂದಿರುವುದು ಸ್ಪೋರ್ಟಿ ಬೈಕ್ ಪ್ರಿಯರಿಗೆ ಹಬ್ಬವೇ ಸರಿ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿರುವ ಡ್ಯೂಕ್ 200 ಬೈಕಿನಂತೆಯೇ ಬಹುತೇಕ ಹೋಲಿಕೆಯನ್ನೇ ಹೊಂದಿರುವ ಹೊಸ ಡ್ಯೂಕ್ 125 ಬೈಕ್ ಮಾದರಿಯು, ಎಂಜಿನ್ ವಿಭಾಗದ ರಕ್ಷಣೆಗಾಗಿ ಅಲ್ಯುಮಿನಿಯಂ ಸ್ವಿಂಗರ್ಮ್ ಸೌಲಭ್ಯವನ್ನು ಪಡೆಗದುಕೊಂಡಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಇದರಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದ್ದು, 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಎಬಿಎಸ್ ಪಡೆದ ಬೆಬಿ ಡ್ಯೂಕ್

ದೇಶದಲ್ಲಿ ಇದುವರೆಗೆ ಹಲವು ಬೈಕ್ ಮಾದರಿಗಳು 200 ಸಿಸಿ ವಿಭಾಗದಲ್ಲೂ ಎಬಿಎಸ್ ಸೌಲಭ್ಯವನ್ನು ಹೊಂದಿಲ್ಲ. ಹೀಗಿರುವಾಗ ಕೆಟಿಎಂ ಸಂಸ್ಥೆಯು ತನ್ನ 125 ಸಿಸಿ ಎಂಟ್ರಿ ಲೆವಲ್ ಬೈಕಿನಲ್ಲೂ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಜೋಡಣೆ ಮಾಡಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಬೈಕಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.18 ಲಕ್ಷ ಬೆಲೆ ಪಡೆದಿದ್ದು, ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿದ್ದರು ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯುವ ಬೈಕಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎನ್ನಬಹುದು.

MOST READ: ಹೊಸ ಜಾವ ಬೈಕ್ ಬಿಡುಗಡೆ ಮಾಡಿದ ಮಹೀಂದ್ರಾ ವಿರುದ್ಧ ಫ್ಯಾನ್ಸ್ ಫುಲ್ ಗರಂ

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಜೊತೆಗೆ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್‌ ಮಾದರಿಗಳಾದ ಯಮಹಾ ಆರ್15 ವಿ3.0, ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಬಜಾಜ್ ಪಲ್ಸರ್ ಎನ್ಎಸ್160 ಬೈಕ್‌ಗಳಿಗೆ ಸರಿಸಮನಾಗಿ ಪರ್ಫಾಮೆನ್ಸ್ ತೊರುವ ಡ್ಯೂಕ್ 125 ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಹೀಗಾಗಿ ಕಡಿಮೆ ಬೆಲೆಗಳಲ್ಲಿ ಪರ್ಫಾಮೆನ್ಸ್ ಬೈಕ್ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಸಾಧ್ಯತೆಗಳಿದ್ದು, ಮುಂದಿನ ದಿನಗಳಲ್ಲಿ ಡ್ಯೂಕ್ 125 ಬೈಕ್‌ಗಳು ಯುವಕರ ಪಾಲಿನ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಬುಕ್ಕಿಂಗ್ ಆರಂಭ

ಕೆಟಿಎಂ ಸಂಸ್ಥೆಯು ಹೊಸ ಡ್ಯೂಕ್ 125 ಬೈಕ್ ಬಿಡುಗಡೆಗೂ ಒಂದು ವಾರದ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ರೂ.1 ಸಾವಿರ ಮುಂಗಡ ನೀಡಿ ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ಹೊಸ ಬೈಕ್‌ಗಳು ಈಗ ಬಿಡುಗಡೆಯಾಗಿದ್ದರೂ ಸಹ ಮುಂದಿನ ತಿಂಗಳು ಆರಂಭದಿಂದಲೇ ಬೈಕ್ ವಿತರಣೆಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.

More from DriveSpark

ಕೆಟಿಎಂ ಡ್ಯೂಕ್ 125 ಬೈಕಿನ ಮತ್ತಷ್ಟು ಚಿತ್ರಗಳನ್ನು ಇಲ್ಲಿ ನೋಡಿ..!

Article Published On: Monday, November 26, 2018, 15:27 [IST]
English summary
KTM Duke 125 Launched In India; Priced At Rs 1.18 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+