ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನ ತಾಂತ್ರಿಕ ಅಂಶಗಳ ಕೊರತೆ

90ರ ದಶಕದಲ್ಲಿ ಮೋಟಾರ್‌ಸೈಕಲ್ ಪ್ರೇಮಿಗಳ ಹಾಟ್ ಫೆವರಿಟ್ ಆಗಿದ್ದ ಜಾವಾ ಸಂಸ್ಥೆಯು ಇದೀಗ ಮಹತ್ವದ ಬದಲಾಣೆಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮಾರ್ಡನ್ ರೆಟ್ರೋ ಸ್ಟೈಲ್‌ನಲ್ಲಿ ತನ್ನ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಆದ್ರೆ ಹೊಸ ಬೈಕ್‌ನಲ್ಲಿ ಕೆಲವು ತಾಂತ್ರಿಕ ಅಂಶಗಳ ಕೊರತೆ ಎದ್ದುಕಾಣುತ್ತಿದ್ದು, ಜಾವಾ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಆದ್ರೆ ಹೊಸ ಜಾವಾ ಬೈಕಿನಲ್ಲಿ ಒದಗಿಸಲಾಗಿರುವ ಫ್ರಂಟ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಗಮನಸೆಳೆಯುವ ಅಂಶಗಳಾಗಿದ್ದರೂ ಬೈಕಿನ ಹಿಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಇಲ್ಲದಿರುವ ಬಗ್ಗೆ ಜಾವಾ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಹೊಸ ಬೈಕ್ ಅನ್ನು ಮಾರ್ಡನ್ ರೆಟ್ರೋ ಲುಕ್ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಬೈಕಿನ ಸುರಕ್ಷತೆಯ ವಿಚಾರದಲ್ಲಿ ಅಸಡ್ಡೆ ಮಾಡಲಾಗಿದೆ ಎಂದು ದೂರಿರುವ ಕೆಲವು ಜಾವಾ ಪ್ರಿಯರು ಹೊಸ ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡಿ ಅಂತಾ ಪಟ್ಟುಹಿಡಿದ್ದಾರೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಸದ್ಯ ಬಿಡುಗಡೆ ಮಾಡಲಾಗಿರುವ ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಸೌಲಭ್ಯ ನೀಡಲಾಗಿದ್ದು, ಮತ್ತೊಂದು ಬೈಕ್ ಮಾದರಿಯಾದ ಪೆರಾಕ್ ಬೈಕಿನಲ್ಲಿ ಮಾತ್ರವೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಕಲ್ಪಿಸಲಾಗಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಹೀಗಾಗಿ ಜಾವಾ ಮತ್ತು ಜಾವಾ 42 ಬೈಕಿನಲ್ಲೂ ಹಿಂದಿಯ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯ ನೀಡುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪಟ್ಟುಹಿಡಿರುವ ಜಾವಾ ಅಭಿಮಾನಿಗಳು, ಡಿಸ್ಕ್ ಬ್ರೇಕ್ ಸೌಲಭ್ಯ ನೀಡದೆ ಹೊದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಇದಕ್ಕೆ ಪ್ರಕ್ರಿಯೆ ನೀಡಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯ ಅಧ್ಯಕ್ಷ ಅಶಿಸ್ ಜೋಶಿಯವರು, 1980-90ರ ಅವಧಿಯಲ್ಲಿನ ಕ್ಲಾಸಿಕ್ ಬೈಕ್‌ಗಳ ವಿನ್ಯಾಸವನ್ನೇ ಉಳಿಸಿಕೊಳ್ಳುವ ಉದ್ದೇಶದಿಂದ ಬೈಕಿನ ಹಿಂಬದಿಯ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಬದಲಾಗಿ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಇದರ ಹೊರತಾಗಿ ಬೈಕಿನ ಸುರಕ್ಷತೆಯಲ್ಲಿ ಜಾವಾ ಸಂಸ್ಥೆಯು ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದಿರುವ ಅಶಿಸ್ ಜೋಶಿ, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಗ ಅನುಗುಣವಾಗಿ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಲು ನಮ್ಮದು ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಹಾಗಂತ, ಇದೀಗ ನೀಡಲಾಗಿರುವ ಡ್ರಮ್ ಬ್ರೇಕ್ ಸೌಲಭ್ಯವು ಕಳಪೆ ಬ್ರೇಕಿಂಗ್ ಸಿಸ್ಟಂ ಎಂದು ಬಿಂಬಿಸುವುದು ಸರಿಯಲ್ಲ ಎಂದಿರುವ ಜಾವಾ ಸಂಸ್ಥೆಯು ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

MOST READ: ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಇನ್ನು ಜಾವಾ ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೇ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಬಹುದು.

MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಯ್ತು ಜಾವಾ ಹೊಸ ಬೈಕಿನಲ್ಲಿ ತಾಂತ್ರಿಕ ಅಂಶಗಳ ಕೊರತೆ

ಹಾಗೆಯೇ ಜಾವಾ 42 ಬೈಕ್ ಮುಂಭಾಗದಲ್ಲಿ 90/90 ಆರ್18 ಟೈರ್ ಮತ್ತು ಹಿಂಭಾಗದಲ್ಲಿ 120/80 ಆರ್17 ಯೂನಿಟ್ ಟೈರ್‍‍ಗಳನ್ನು ಪಡೆದುಕೊಂಡಿದೆ. ಇನ್ನು ರೈಡರ್‍‍ಗಳ ಸುರಕ್ಷತೆಗಾಗಿ ಈ ಬೈಕಿನ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 153ಎಂಎಂ ಡ್ರಮ್ ಬೆಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ನೀಡಲಾಗಿದೆ.

Kannada
English summary
Jawa Motorcycles Rear-Disc Variant Might Happen, But Not Soon — Here’s Why.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more