ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಜಾವಾ ಬೈಕ್‌ಗಳು ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಇದೀಗ ಜಾವಾ ಬೈಕ್ ಬಿಡುಗಡೆಗೊಂಡ ಬೆನ್ನಲ್ಲೇ ಮತ್ತೊಂದು ಜನಪ್ರಿಯ ಬೈಕ್ ಮಾದರಿಯಾದ ಯಜ್ಡಿ ಬೈಕ್ ಬಿಡುಗಡೆಗೆ ಮಹೀಂದ್ರಾ ಮೂಹರ್ತ ಫಿಕ್ಸ್ ಮಾಡಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಹೌದು, ಭಾರತದಲ್ಲಿ ಜಾವಾ ಬೈಕ್‌ಗಳನ್ನು ಮರುಬಿಡುಗಡೆಯ ಹೊಣೆಹೊತ್ತಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಯಜ್ಡಿ ಬೈಕ್‌ಗಳನ್ನು ಸಹ ಹೊಸ ವಿನ್ಯಾಸದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಬೈಕ್ ಪ್ರಿಯರಲ್ಲಿ ಮತ್ತೊಮ್ಮೆ ಕುತೂಹಲ ಹುಟ್ಟುಹಾಕಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ದೇಶದಲ್ಲಿ ಯಜ್ಡಿ ಬೈಕ್‌ಗಳನ್ನು ಮರು ಬಿಡುಗಡೆ ಮಾಡುವ ಬಗ್ಗೆ ಜಾವಾ ಬೈಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು, ಜಾವಾ ಆಯ್ತು ಮುಂದೆ ಇನ್ಮುಂದೆ ಯಜ್ಡಿ ಕೂಡಾ ಹೊಸ ಟ್ರೆಂಡ್ ಸೃಷ್ಠಿಸಲಿದೆ ಎಂದಿದ್ದಾರೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಸದ್ಯ ಜಾವಾ ಮತ್ತು ಯಜ್ಡಿ ಬೈಕ್‌ಗಳ ನಿರ್ಮಾಣ ಮತ್ತು ಮಾರಾಟದ ಹಕ್ಕು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಬಳಿಯಿದ್ದು, ಇದು ಮಹೀಂದ್ರಾ ಸಂಸ್ಥೆಯ ಅಂಗಸಂಸ್ಥೆ ಎನ್ನುವುದು ಬಹುತೇಕ ಗೊತ್ತಿಲ್ಲದ ವಿಚಾರ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಇದೀಗ ಬಿಡುಗಡೆಯಾಗಿರುವ ಜಾವಾ, ಜಾವಾ 42 ಮತ್ತು ಅನಾವರಣ ಮಾಡಲಾದ ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯೇ ಮರು ನಿರ್ಮಾಣ ಮಾಡಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಅಸಲಿಗೆ ಜಾವಾ ಮತ್ತು ಯೆಜ್ಡಿ ಸಂಸ್ಥೆಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌‌ಸೈಕಲ್ ಸಂಸ್ಥೆಯ ಪಾಲಾಗಿದ್ದು, ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಹಕ್ಕು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಬಿಎಸ್ಎ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ಮತ್ತು ಯಜ್ಡಿ ಬೈಕ್‌ಗಳನ್ನು ಪುನಾರಂಭಿಸುವ ಬಗ್ಗೆ ಒಪ್ಪಿಗೆ ಪಡೆದುಕೊಂಡಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಇದರ ಪರಿಣಾಮವೇ ಇಂದು ಜಾವಾ ಬೈಕ್‌ಗಳು ಭಾರತೀಯ ರಸ್ತೆಗೆ ಮರಳಿ ಬಂದಿದ್ದು, ಮುಂದಿನ 6 ತಿಂಗಳ ಅವಧಿಯೊಳಗೆ ಯಜ್ಡಿ ಬೈಕ್‌ಗಳ ಹೊಸ ರೂಪವನ್ನು ಮಹೀಂದ್ರಾ ಸಂಸ್ಥೆಯು ಅನಾವರಣಗೊಳಿಸುವ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಜಾವಾ ಬೈಕ್‌ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಿದ್ದಲ್ಲಿ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿ ಸಾಮರ್ಥ್ಯ ಎಂಜಿನ್‌‌ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್‌ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಇದಷ್ಟೇ ಅಲ್ಲದೇ ಬಿಎಸ್ಎ ಮೋಟಾರ್‌ಸೈಕಲ್ ಸಂಸ್ಥೆಯ ಕೆಲವು ಪ್ರೀಮಿಯಂ ಬೈಕ್‌ಗಳು ಸಹ ಭಾರತಕ್ಕೆ ಎಂಟ್ರಿ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಬಿಎಸ್ಎ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆದಿದೆ.

MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಇದಕ್ಕಾಗಿಯೇ ಮಹೀಂದ್ರಾ ಸಂಸ್ಥೆಯು ದೇಶಾದ್ಯಂತ 500ಕ್ಕೂ ಹೆಚ್ಚು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಡೀಲರ್ಸ್‌ಗಳನ್ನು ತೆರೆಯಲು ಯೋಜಿಸಿದ್ದು, ಇದರಲ್ಲಿ ಈಗಾಗಲೇ 105ಕ್ಕೂ ಹೆಚ್ಚು ಡೀಲರ್ಸ್‌ಗಳು ಮುಂದಿನ ಜನವರಿ ಆರಂಭದಲ್ಲಿ ಕಾರ್ಯನಿರ್ವಹಣೆ ಆರಂಭಿಸಲು ಸಿದ್ದಗೊಂಡಿವೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಹಂತಹಂತವಾಗಿ ಪ್ರತಿಸ್ಪರ್ಧೆ ನೀಡಲು ಯೋಜನೆ ರೂಪಿಸುತ್ತಿರುವ ಮಹೀಂದ್ರಾ ಸಂಸ್ಥೆಯು, ಗತಕಾಲದ ವೈಭವವನ್ನು ಮರಳಿ ತರಲು ಬೃಹತ್ ಯೋಜನೆ ಸಿದ್ದಗೊಳಿಸಿದೆ ಎನ್ನಬಹುದು.

MOST READ: ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..!

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಜಾವಾ ಹೊಸ ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ, ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಬೆಲೆ ನಿಗದಿ ಮಾಡಲಿದ್ದು, ಇದರಲ್ಲಿ ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೇ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಬಹುದು.

More from DriveSpark

Article Published On: Saturday, November 17, 2018, 19:01 [IST]
English summary
New Yezdi Motorcycles India: Classic Legends To Bring Back Yezdi Models Too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+