ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಪ್ಯೂಜೊ ಜೊತೆಗೂಡಿ ಹೊಸ ಮಾದರಿಯ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದ ಮಹೀಂದ್ರಾ ಇದೀಗ ಹಿಂದೆ ಸರಿದಿದೆ.

By Rahul Ts

ಪ್ಯೂಜೊ ಜೊತೆಗೂಡಿ ಹೊಸ ಮಾದರಿಯ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದ ಮಹೀಂದ್ರಾ ಇದೀಗ ಹಿಂದೆ ಸರಿದಿದೆ. ಬದಲಾದ ಮಾರುಕಟ್ಟೆ ಸನ್ನಿವೇಶಗಳು ಮತ್ತು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ಯೂಜೊ ಸ್ಕೂಟರ್‌ಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಈ ಹಿಂದೆ ಶೇಕಡ 51ರಷ್ಟು ಪಾಲು ಖರೀದಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಪ್ಯೂಜೊ ಸ್ಕೂಟರ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದ ಮಹಿಂದ್ರಾ ಸಂಸ್ಥೆಯು ತನ್ನ ಮಹತ್ವದ ಯೋಜನೆಯಿಂದ ಹಿಂದೆ ಸರಿದಿದ್ದು, ಪ್ಯೂಜೊ ಸ್ಕೂಟರ್‌ಗಳನ್ನು ಖರೀದಿ ಮಾಡಲು ಎದುರು ನೋಡುತ್ತಿದ್ದ ಗ್ರಾಹಕರಿಗೆ ನಿರಾಸೆ ಮೂಡಿಸಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಈ ಬಗ್ಗೆ ಮಹಿಂದ್ರಾ ಸಂಸ್ಥೆಯ ಎಂ.ಡಿ ಪವನ್ ಗೋಯಾಂಕ್ ಮಾತನಾಡಿದ್ದು, "ಪ್ಯೂಜೊ ಸ್ಕೂಟರ್‌ಗಳ ಬೆಲೆ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಕೆಲ ಗೊಂದಗಳಿದ್ದು, ಈ ಹಿನ್ನೆಲೆ ಸ್ಕೂಟರ್ ಬಿಡುಗಡೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ್ದೇವೆ. ಆದರೇ ಬಹುನೀರಿಕ್ಷಿತ ಪ್ಯೂಜೊ ಸ್ಕೂಟರ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವುದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿದ್ದಾರೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಇನ್ನು 2014ರಲ್ಲೇ ಮಹಿಂದ್ರಾ ಸಂಸ್ಥೆಯು ಪ್ಯೂಜೊ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಸ್ಕೂಟರ್ ಉತ್ಪನ್ನಗಳನ್ನು ಸಿದ್ದಪಡಿಸಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಹೀಗಾಗಿ ಸ್ಕೂಟರ್‌ಗಳ ಬಿಡುಗಡೆಗೂ ಮುನ್ನ ಮಹೀಂದ್ರಾ ಸಂಸ್ಥೆಯು ಸರ್ವೆ ನಡೆಸಿದ್ದು, ಅದರಲ್ಲಿ ಹಲವರು ಸ್ಕೂಟರಿನ ಬೆಲೆಗಳನ್ನು ಕಡೆಮೆಗೊಳಿಸಬೇಕೇಂಬ ಸಲಹೆ ನೀಡಲಾಗಿದ್ದು, ಈ ಹಿನ್ನೆಲೆ ಪ್ಯೂಜೊ ಸಂಸ್ಥೆಯು ಹೊಸ ಸ್ಕೂಟರ್ ಬಿಡುಗಡೆಯನ್ನು ಸ್ಥಗಿತಗೊಳಿಸಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಮಹೀಂದ್ರಾ ಸಂಸ್ಥೆಯು ಮೂರು ಪ್ಯೂಜೊ ಸ್ಕೂಟರ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗೆಗೊಳಿಸಲು ತೀರ್ಮಾನಿಸಿದ್ದು, ಅದರಲ್ಲಿ ಎರಡು ಡಿಜಾಂಗೊ ಮತ್ತು ಸ್ಪೀಡ್‍‍ಲೈಟ್ ಸ್ಕೂಟರ್‍‍ಗಳು 125ಸಿಸಿ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಅಭಿವೃದ್ಧಿ ಮಾಡಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಒಂದು ವೇಳೆ ಮಹಿಂದ್ರಾ ಸಂಸ್ಥೆಯು 125ಸಿಸಿ ಸ್ಕೂಟರ್‍‍ಗಳು ಬಿಡುಗಡೆಗೊಳಿಸಿದ್ದಲ್ಲಿ ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‍‍ಟಾರ್ಕ್ 125 ಮತ್ತು ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‍‍ಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದ್ದು, ಅದಕ್ಕಾಗಿ ಕಡಿಮೆ ಬೆಲೆ ನಿಗದಿ ಮಾಡುವುದು ಮುಖ್ಯವಾಗಿದೆ.

ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ಬ್ರೇಕ್ ಹಾಕಿದ ಮಹಿಂದ್ರಾ..

ಈಗಾಗಲೇ ವಿವಿಧ ಸಂಸ್ಥೆಗಳ 125ಸಿಸಿ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿ ಜನಪ್ರಿಯಗಳಿಸುತ್ತಿದ್ದು, ಇತರೆ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲು ಯಾವೆಲ್ಲಾ ಮಾರುಕಟ್ಟೆ ತಂತ್ರಗಳನ್ನು ಅನುಸರಿಬೇಕೆಂಬ ಅಧ್ಯಯನ ನಂತರವಷ್ಟೇ ಪ್ಯೂಜೊ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

More from DriveSpark

Article Published On: Tuesday, March 6, 2018, 13:07 [IST]
English summary
Mahindra-Peugeot Scooter Launch Plan Put On Hold.
Read more on mahindra scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+