ಬರಲಿದೆ ಹೀರೊ ಎಲೆಕ್ಟ್ರಿಕ್ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್...
ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ವಿದ್ಯುತ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಎಲೆಕ್ಟ್ರಿಕ್ ಮಾರುಕಟ್ಟೆಗೆ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವ ಯೋಜನೆಯಲ್ಲಿದೆ.
ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ವಿದ್ಯುತ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಎಲೆಕ್ಟ್ರಿಕ್ ಮಾರುಕಟ್ಟೆಗೆ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವ ಯೋಜನೆಯಲಿದ್ದು, ಬಿಡುಗಡೆಗೊಳಿಸಲಿರುವ ಈ ಸ್ಕೂಟರ್‍ನಲ್ಲಿ ಪರ್ಫಾರ್ಮೆನ್ಸ್ ಮತ್ತು ರೇಂಜ್‍ನ ಮೇಳೆ ಹೆಚ್ಚು ಒತ್ತಡವನ್ನು ನೀಡಲಿದೆ.

ಮಾರುಕಟ್ಟೆಯಲ್ಲಿ ಎಲೆಕ್ಟಿಕ್ ಸ್ಕೂಟರ್‍ಗಳ ಪರ್ಫರ್ಮೆನ್ಸ್ ಕಡಿಮೆಯಿದ್ದು, ಈ ಕಾರಣದಿಂದಾಗಿ ಇಂಧನ ಆಧಾರದಿಂದ ಚಲಿಸುವ ದ್ವಿಚಕ್ರವಾಹನಗಳು ಹೆಚಾಗುತ್ತಿವೆ. ಈ ನಿಟ್ಟಿನಲ್ಲಿ ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡುವ ಸ್ಕೂಟರ್ ಅನ್ನು ಹೋಂಡಾ ಎಲೆಕ್ಟ್ರಿಕ್ ಸಂಸ್ಥೆಯು ನೀಡಲಿವೆ.

ಹೊಸ ಹೀರೊ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಹೆಚ್‍ಎಲ್‍ಇ-20 ಎಂಬ ಹೆಸರನ್ನು ಹೋರಲಿದ್ದು, ಬ್ರ್ಯಾಂಡ್‍ನ ಉತ್ಪನ್ನದ ಬಂಡವಾಳದಲ್ಲಿ ಉನ್ನತ ದರ್ಜೆ ಕೊಡುಗೆಯಾಗಿರಲಿದೆ. ಅಲ್ಲದೆ ಸಂಸ್ಥೆಯ ಹೈ ಸ್ಪೀಡ್ ಸರಣಿಯಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.

ಹೀರೊ ಎಲೆಕ್ಟ್ರಿಕ್ ಸ್ಕೂಟರ್‍ಗಳ ಸರಣಿಯ ನೈಕ್ಸ್, ಫೋಟಾನ್ ಮತ್ತು ಫೋಟಾನ್ 72ವಿ ಎಂಬ ಮೂರು ಸ್ಕೂಟರ್‍ಗಳಿದ್ದು, AXHLE-20 ಸ್ಕೂಟರ್ ಅಧಿಕ ಬೆಲೆಯಲ್ಲಿ ಮಾರಾಟಗೊಳ್ಳಲಿದೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ AXHLE-20 ಸ್ಕೂಟರ್ 4 ಕಿಲೋವ್ಯಾಟ್ಸ್ ಬ್ಯಾಟರಿನ್ನು ಅಳವಡಿಸಲಾಗಿದ್ದು, ಗಂಟೆಗೆ 85 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ನೀಡಲಿದೆ. ಅಲ್ಲದೆ ಪ್ರತಿ ಚಾರ್ಜ್‍ಗೆ 110 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ.

ಹೊಸ ಹೀರೊ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಬ್ಲೂಟೂತ್ ಸಹಾಯದಿಂದ ಮೊಬೈಲ್ ಕನೆಕ್ಟ್ ಮಾಡಬಹುದಾಗಿದ್ದು, ಜೊತೆಗೆ ಮೊಬೈಲ್ ಆಪ್ ಮೂಲದಿಂದ ಸಪೊರ್ಟ್ ಮಾಡುವ ಸ್ಮಾರ್ಟ್‍ಫೋನ್ ಇಂಟೆಗ್ರೇಶನ್ ಮತ್ತು ಇನ್ಸ್ಟ್ರೂಮೆಂಟ್ ಕಂಸೋಲ್ ಎಂಬ ವೈಶಿಷ್ಟ್ಯತೆಗಳನ್ನು ಕೂಡ ಅಳವಡಿಸಲಾಗಿದೆ.

AXHLE-20 ಎಲೆಕ್ಟ್ರಿಕ್ ಸ್ಕೂಟರ್ ಕಳೆದ ವರ್ಷವೆ ಬಹಿರಂಗಗೊಂಡಿದ್ದು, ಸುರಕ್ಷತೆಗಾಗಿ ರೀಜೆನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಗಿದೆ. ಇನ್ನು ಇದರಲ್ಲಿ ಬಳಸಲಾಗಿರುವ ಬ್ಯಾಟರಿಗಳು ನಾಲ್ಕು ಗಂಟೆಗಳ ಅವಧಿಯಲ್ಲಿ ಪೂರ್ಣವಾಗಿ ಚಾರ್ಜ್ ಆಗಲಿವೆ.

ಹೀರೊ ಎಲೆಕ್ಟ್ರಿಕ್ ಸಂಸ್ಥೆಯು ತಮ್ಮ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಇಲಾಖೆಯ ಮೇಳೆ ಭಾರಿ ಮೊತ್ತವನ್ನು ಹೂಡಿಕೆ ಮಾಡಿದ್ದು, ಬರಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಒಳ್ಳೆಯ ಗುಣಮಟ್ಟದ ಎಮಿಷನ್ ಅನ್ನು ನೀಡುತ್ತವೆ ಎಂಬ ಬರವಸೆ ಇದೆ.

ವಾಹನ ತಯಾರಕ ಸಾಂಸ್ಥೆಗಳು ಎಲೆಕ್ಟ್ರಿಕ್ ಯೋಗ್ಯವಾದ ಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಹೆಚ್ಚು ಸಮಯವನ್ನು ತೆಗೆದುಕೊಳುತಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರೀಕ್ ಸ್ಕೂಟರ್‍ಗಳು ಕಡಿಮೆ ಪರ್ಫಾರ್ಮೆನ್ಸ್ ಅನ್ನು ನೀಡುತ್ತಿವೆ. ಈ ಕಾರಣದಿಂದಾಗಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‍ಗಳು ಮಾರಾಟವಾಗುತಿಲ್ಲ. ಆದರೆ ಬರಲಿರುವ ಹೀರೊ ಸಂಸ್ಥೆಯ ಈ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮಾರಾಟದಲ್ಲಿ ಬದಲಾವಣೇಗಳನ್ನು ತರಬಹುದು ಎಂಬ ನಿರೀಕ್ಷೆಯಿದೆ.


Click it and Unblock the Notifications








