ಮತ್ತೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ 2018ರ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 48,641 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ 2018ರ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 48,641 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

2018ರ ಹೊಸ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ ತನ್ನ ಹಿಂದಿನ ಮಾದರಿಗಿಂತ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಆಕರ್ಷಕವಾದ ಗೋಲ್ಡ್ ಗ್ರಾಫಿಕ್ಸ್ ಮತ್ತು ಕ್ರೋಮ್ ಮಫ್ಲರ್ ಪ್ರೊಟೆಕ್ಟರ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ಬೈಕ್‍ನಲ್ಲಿ ಹೊಸದಾಗಿ ಹಿಂಭಾಗದಲ್ಲಿ ಅಳವಡಿಸಲಾಗಿರುವ ಹೆವಿ-ಡ್ಯುಟಿ ಕ್ಯಾರಿಯರ್ ಬೈಕಿನ ವಿನ್ಯಾಸವನ್ನು ಇನ್ನಷ್ಟು ಆಕರ್ಷಕವಾಗಿ ಕಾಣಿಸುವಲ್ಲಿ ಜೊತೆಯಾಗಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೊಂಡ ಹೊಸ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ 110ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್, ಹೆಚ್ಇಟಿ (ಹೋಂಡಾ ಇಕೊ ಟೆಕ್ನಾಲಜಿ) ಎಂಜಿನ್ ಸಹಾಯದಿಂದ 8.31 ಬಿಹೆಚ್‍ಪಿ ಮತ್ತು 9.09 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್‍ನ ಮುಂಭಾಗದಲ್ಲಿ ಅಪ್‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಆಧಾರಿತ ಹೈಡ್ರಾಲಿಕ್ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕಿನ ಎರಡು ಬದಿಗಳಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಟ್ಯುಬ್‍ಲೆಸ್ ಟೈರ್‍ಗಳನ್ನು ಈ ಬೈಕ್ ಪಡೆದುಕೊಂಡಿದೆ.

2018ರ ಹೊಸ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ ಬ್ಲಾಕ್ ಬಣ್ಣದೊಂದಿಗೆ ಕ್ಯಾಬಿನ್ ಬ್ಲಾಕ್, ಬ್ಲಾಕ್ ಬಣ್ಣದೊಂದಿಗೆ ಗ್ರೀನ್ ಮೆಟಾಲಿಕ್, ಬ್ಲಾಕ್ ಬಣ್ಣದೊಂದಿಗೆ ಗ್ರೇ ಸಿಲ್ವರ್ ಮೆಟಾಲಿಕ್, ಬ್ಲಾಕ್ ಬಣ್ಣದೊಂದಿಗೆ ಕೆಂಪು ಮತ್ತು ಬ್ಲಾಕ್ ಬಣ್ಣದೊಂದಿಗೆ ಬ್ಲ್ಯೂ ಮೆಟಾಲಿಕ್ ಎಂಬ 4 ಬಣ್ಣಗಳಾ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

'1966 ರಿಂದ ಸಿಡಿ ಬ್ರ್ಯಾಂಡ್ ವಿಶ್ವದಾದ್ಯಂತ ಸಾಂಪ್ರದಾಯಿಕ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಪಡೆದುಕೊಂಡು ಬಂದಿದ್ದು, 2018ರ ಸಿಡಿ 110 ಡ್ರೀಮ್ ಡಿಎಕ್ಸ್ ಕೂಡಾ ಅದೇ ಮಟ್ಟದ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ' ಎಂದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್‍ನ ಮಾರಾಟ ಮತ್ತು ಮಾರ್ಕೆಟಿಂಗ್‍ನ ಹಿರಿಯ ಉಪಾಧ್ಯಕ್ಷ ಯಾದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

2014ರಲ್ಲಿ ಮೊದಲಿಗೆ ದೇಶಿಯ ಮಾರುಕಟ್ಟೆಯಲ್ಲಿ ಕಾಲಿಟ್ಟ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್ ಬೈಕ್ ಅಂದಿನಿಂದಲೂ ಗ್ರಾಹಕರಿಂದ ಜನಪ್ರಿಯತೆಯನ್ನು ಪಡೆಯುತಲೆ ಬಂದಿದೆ. ಟ್ರಾಫಿಕ್‍ನಲ್ಲಿ ಆರಾಮಾಡಿ ಓಡಿಸಲು ಅಗಲವಾದ ಹ್ಯಾಂಡಲ್‍ಬಾರ್ ಅನ್ನು ಹೊಂದಿದ್ದು ಜೊತೆಗೆ 8 ಲೀಟರ್‍ನ ಫ್ಯುಯಲ್ ಟ್ಯಾಂಕ್ ಹಾಗು 109ಕೇಜಿ ತೂಕವನ್ನು ಹೊಂದಿದೆ.


Click it and Unblock the Notifications