ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡರಲ್ಲಿ ಯಾವುದು ಬೆಸ್ಟ್?

ಹೋಂಡಾ ಸಂಸ್ಥೆಯು ಹೊಸದಾಗಿ ತಮ್ಮ ಜನಪ್ರಿಯ ಡಿಯೋ ಸ್ಕೂಟರ್‍ ಅನ್ನು ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಹೊಸದಾಗಿ 2018ರ ಡಿಯೋ ಸ್ಕೂಟರ್‍‍ನ ವಿನೂತನ ಡಿಎಲ್ಎಕ್ಸ್ ವೇರಿಯಂಟ್ ರೂಪದಲ್ಲಿಯು ಕೂಡ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

By Rahul Ts

ಹೋಂಡಾ ಸಂಸ್ಥೆಯು ಹೊಸದಾಗಿ ತಮ್ಮ ಜನಪ್ರಿಯ ಡಿಯೋ ಸ್ಕೂಟರ್‍ ಅನ್ನು ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಹೊಸದಾಗಿ 2018ರ ಡಿಯೋ ಸ್ಕೂಟರ್‍‍ನ ವಿನೂತನ ಡಿಎಲ್ಎಕ್ಸ್ ವೇರಿಯಂಟ್ ರೂಪದಲ್ಲಿಯು ಕೂಡ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಆದರೆ ಬಿಡುಗಡೆಗೊಂಡ 2018ರ ಹೊಸ ಡಿಯೋ ಸ್ಕೂಟರ್‍‍ಗೆ ಯಮಹಾ ರೇ ಜೆಡ್‍ಆರ್ ಸ್ಕೂಟರ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತಿದ್ದು, ಈ ನಿಟ್ಟಿನಲ್ಲಿ ಇವೆರಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ವಿನ್ಯಾಸ

ಹೊಸ ಹೋಂಡಾ ಸಡಿಯೋ ಸ್ಕೂಟರಿನ ಒಟ್ಟಾರೆ ವಿನ್ಯಾಸವು ಆಕರ್ಷಕ ಮತ್ತು ಆಕ್ರಮಣಕಾರಿಯಾಗಿದ್ದು, ಮುಂಭಾಗದಲ್ಲಿ ಸ್ಪೋರ್ಟಿ ಏಪ್ರಾನ್ ಇಂಟಿಗ್ರೇಟೆಡ್ ಎಲ್ಇಡಿ ಹೆಡ್‍‍ಲೈಟ್, ಟರ್ನ್ ಇಂಡಿಕೇಟರ್‍ ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಇನ್ನು ಹೊಸ ಡಿಯೋ ಸ್ಕೂಟರಿನ ಸೈಡ್ ಪ್ರೊಫೈಲ್ ಬಗೆ ಹೇಳುವುದಾದರೆ ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಹೊಸ ಬಣ್ಣದ ರಿಮ್ಸ್ ಅನ್ನು ಪಡೆದುಕೊಂಡಿದ್ದು, ಸ್ಕೂಟರಿನ ಟೈಲ್ ಸೆಕ್ಷನ್‍ ಭಾಗದಲ್ಲಿ ದೇಹ ಬಣ್ಣದ ಗ್ರ್ಯಾಬ್ ರೈಲ್ಸ್ ಮತ್ತು ಸ್ಟೈಲಿಶ್ ಟೈಲ್ ಲೈಟ್ ಅನ್ನು ಅಳವಡಿಸುವುದರ ಜೊತೆಗೆ ಹೊಸ ಎಕ್ಸಾಸ್ಟ್ ಮಫ್ಲರ್ ಅನ್ನು ಕೂಡ ಪಡೆದಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಯಮಹಾ ರೇ ಜೆಡ್ಆರ್ ಸ್ಕೂಟರ್ ಮುಂಭಾಗದಲ್ಲಿ ಏಪ್ರಾನ್ ಮೌಂಟೆಡ್ ಹೆಡ್‍‍ಲ್ಯಾಂಪ್ ಅನ್ನು ಪಡೆದಿದ್ದು, ಫ್ರಂಟ್ ಎಂಡ್ ಭಾಗದಲ್ಲಿ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ ಇಂಡಿಕೇಟರ್ಸ್ ಮತ್ತು ಜೆಡ್‍ಆರ್ ಎಂಬ ಗ್ರಾಫಿಕ್ಸ್ ಅನ್ನು ಕೂಡ ಪಡೆದುಕೊಂಡಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಯಮಹಾ ರೇ ಜೆಡ್ಆರ್ ಸ್ಕೂಟರಿನ ಟೈಲ್ ವಿಭಾಗದ ಬಗ್ಗೆ ಹೇಳುವುದಾದರೆ ಶಾರ್ಪ್ ಟೈಲ್‍‍ಲೈಟ್‍‍ನೊಂದಿಗೆ ಟರ್ನ್ ಸಿಗ್ನಲ್ ಇಂಡಿಕೇಟರ್ಸ್, ಗ್ರ್ಯಾಬ್ ರೈಲ್ಸ್ ಮತ್ತು ಎಕ್ಸಾಸ್ಟ್ ಮಫ್ಲರ್ ಅನ್ನು ಅಳವಡಿಸಲಾಗಿದ್ದು, ಇದು ಸ್ಕೂಟರಿನ ನೋಟವನ್ನು ಹೆಚ್ಚಿಸಿದೆ. ಆದರೆ ಹೊಸ ಡಿಯೋ ಸ್ಕೂಟರಿಗೆ ಹೋಲಿಸಿದರೆ ಯಮಹಾ ರೇ ಜೆಡ್ಆರ್ ಸ್ಕೂಟರ್ ವಿನ್ಯಾಸದಲ್ಲಿ ಹೆಚ್ಚು ಆಕರ್ಷಿಸುತ್ತವೆ.

ಒಟ್ಟಾರೆ ವಿನ್ಯಾಸದ ರೇಟಿಂಗ್

ಹೊಸ ಹೋಂಡಾ ಡಿಯೋ - 8/10

ಯಮಹಾ ರೇ ಜೆಡ್‍ಆರ್ - 8.5/10

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ವೈಶಿಷ್ಟ್ಯತೆಗಳು

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಡಿಯೋ ಸ್ಕೂಟರ್‍‍ಗಳು ಎಲ್ಇಡಿ ಹೆಡ್‍‍ಲ್ಯಾಂಪ್ಸ್, 4 ಇನ್ 1 ಲಾಕ್‍‍ನೊಂದಿಗೆ ಸೀಟ್ ಅನ್ನು ತೆರೆಯಬಹುದಾದ ಸ್ವಿಚ್, ಸಿಬಿಎಸ್, ಹೊಸ ಫ್ರಂಟ್ ಹೂಕ್ ಮತ್ತು ಟ್ಯೂಬ್‍‍ಲೆಸ್ ಟೈರ್‍‍ಗಳನ್ನು ಪಡೆದುಕೊಂಡಿವೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಇನ್ನು ಡಿಯೋ ಸ್ಕೂಟರಿನ ಡೀಲಕ್ಸ್ (ಡಿಎಲ್ಅಕ್ಸ್೦ ಟಾಪ್ ವೇರಿಯಂಟ್‍‍ಗಳಲ್ಲಿ ಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಗೋಲ್ಡೆನ್ ರಿಮ್‍‍ಗಳನ್ನು ಪಡೆದಿದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಕಳೆದುಕೊಂಡಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಯಮಹಾ ರೇ ಜೆಡ್ಆರ್ ಸ್ಕೂಟರ್‍‍ಗಳು ಮೋಜಿನ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಟ್ರೋರೇಜ್ ಪಾಕೆಟ್ಸ್, ಕೀ ಶಟರ್ ಲಾಕಿಂಗ್ ಸಿಸ್ಟಂ, ಸೀಟ್‍‍ನ ಕೆಳಗೆ ವಿಶಾಲವಾದ ಡಿಕ್ಕಿ, ಸ್ಟೆಪ್‍‍ಅಪ್ ಸೀಟ್, ಅಲಾಯ್ ಚಕ್ರಗಳು ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಪಡುಕೊಂಡಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಯಮಹಾ ರೇ ಜೆಡ್ಆರ್ ಸ್ಕೂಟರ್‍‍ಗಳು ವೈಶಿಷ್ಟ್ಯತೆಯಲ್ಲಿ ಹೋಂಡಾ ಡಿಯೋ ಸ್ಕೂಟರ್‍‍ಗಳಿಗಿಂತ ಹಿಂದಿದ್ದರೂ, ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡು ಸಮಾನತೆಯ ಅಂಕವನ್ನು ಪಡೆದುಕೊಂಡಿದೆ.

ಒಟ್ಟಾರೆ ವೈಶಿಷ್ಟ್ಯತೆಯ ರೇಟಿಂಗ್

ಹೊಸ ಹೋಂಡಾ ಡಿಯೋ - 8/10

ಯಮಹಾ ರೇ ಜೆಡ್‍ಆರ್ - 8/10

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಎಂಜಿನ್ ಮತ್ತು ಮೈಲೇಜ್

ಹೊಸ 2018ರ ಹೋಂಡಾ ಡಿಯೋ ಸ್ಕೂಟರ್ 109.19ಸಿಸಿ ಎಂಜಿನ್ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಬಿಎಸ್-IV ಎಂಜಿನ್ ಸಹಾಯದಿಂದ 8ಬಿಹೆಚ್‍‍ಪಿ ಮತ್ತು 8.91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ವಿ-ಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ. ಅಲ್ಲದೆ ಪ್ರತೀ ಲೀಟರ್‍‍ಗೆ 60 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಇನ್ನು ಯಮಹಾ ರೇ ಜೆಡ್‍ಆರ್ ಸ್ಕೂಟರ್‍‍ಗಳು 113ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 7.1 ಬಿಹೆಚ್‍ಪಿ ಮತ್ತು 8.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದುಮ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೆ ಪ್ರತೀ ಲೀಟರ್‍‍ಗೆ 66 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಎಂಜಿನ್ ಮತ್ತು ಮೈಲೇಜ್ ರೇಟಿಂಗ್

ಹೊಸ ಹೋಂಡಾ ಡಿಯೋ - 8/10

ಯಮಹಾ ರೇ ಜೆಡ್‍ಆರ್ - 7.5/10

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಬೆಲೆ

2018ರ ಹೋಂಡಾ ಡಿಯೋ ಬೇಸ್ ವೇರಿಯಂಟ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 50,296 ಸಾವಿರಕ್ಕೆ ನಿಗದಿ ಪಡಿಸಲಾಗಿದ್ದು, ಸ್ಕೂಟರಿನ ಟಾಪ್ ವೇರಿಯಂಟ್‍‍ಗಳು ರೂ 53,292 ಸಾವಿರಕ್ಕೆ ನಿಗದಿ ಪಡೆಸಲಾಗಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಯಮಹಾ ರೇ ಜೆಡ್ಆರ್ ಸ್ಕೂಟರ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ಡ್ರಮ್ ಬ್ರೇಕ್ ವೇರಿಯಂಟ್‍‍ಗಳು ರೂ 53,451 ಮತ್ತು ಡಿಸ್ಕ್ ಬ್ರೇಕ್ ವೇರಿಯಂಟ್‍‍ಗಳಿಗೆ ರೂ 56,898 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್ಆರ್ ಎರಡೂ ಸ್ಕೂಟರ್‍‍ಗಳು ಸ್ಪೋರ್ಟಿ ಸ್ಕೂಟರ್‍‍ಗಳಗಿದ್ದು, ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿವೆ. ಆದರೆ ನೀಡುವ ಬೆಲೆಗೆ ಅನುಗುಣವಾದ ವೈಶಿಷ್ಟ್ಯತೆಗಳನ್ನು ಪಡೆದಿರುವ ಹೋಂಡಾ ಡೀಯೋ ಉತ್ತಮವೆಂದು ಹೇಳಬಹುದು.

ಹೊಸ ಹೋಂಡಾ ಡಿಯೋ ಮತ್ತು ಯಮಹಾ ರೇ ಜೆಡ್‍ಆರ್ ಇವೆರಡಲ್ಲಿ ಯಾವುದು ಬೆಸ್ಟ್.?

ಮತ್ತೊಂದು ಕಡೆ ಯಮಹಾ ರೇ ಜೆಡ್ಆರ್ ಸ್ಕೂಟರ್ ಬೆಲೆಯಲ್ಲಿ ಹೆಚ್ಚಿದ್ದರೂ, ಡಿಸ್ಕ್ ಬ್ರೇಕ್ ಅನ್ನು ಪಡಿದಿರುವುದು ಗಮನಾರ್ಹ. ಆದರೆ ಹೋಂಡಾ ಡಿಯೋ ಕೊಂಚ ಪ್ರಪ್ರಬುದ್ಧವಾದ ಸ್ಕೂಟರ್ ಆಗಿದ್ದು, ಯಮಹಾ ರೇ ಜೆಡ್ಆರ್ ಸ್ಕೂಟರ್‍‍ಗಳು ತನ್ನ ಮೋಜಿನ ವಿನ್ಯಾಸದಿಂದ ದೇಶದಲ್ಲಿನ ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ.

Most Read Articles

Kannada
English summary
New Honda Dio Vs Yamaha Ray ZR Comparison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X