ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ 2018ರ ಹೊಸ ನವಿ ಸ್ಕೂಟರ್ ಅನ್ನು ಬಿಡುಗೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 44,775 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ 2018ರ ಹೊಸ ನವಿ ಸ್ಕೂಟರ್ ಅನ್ನು ಬಿಡುಗೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 44,775 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಾರುಕಟ್ಟೆಗೆ ಮತ್ತೊಮ್ಮೆ ಲಗ್ಗೆಯಿಟ್ಟ ಹೋಂಡಾ ನವಿ ಸ್ಕೂಟರ್‍ ಈ ಬಾರಿ ಹೊಸ ವಿನ್ಯಾಸನವನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

2018ರ ಹೊಸ ಹೋಂಡಾ ನವಿ ಸ್ಕೂಟರ್ ತನ್ನ ಹಳೆಯ ಮಾದರಿಗಿಂತ ಬೆಲೆಯಲ್ಲಿ ರೂ.1991 ಸಾವಿರ ಅಧಿಕವಿದ್ದು, ಈ ಮೋಟೊ ಸ್ಕೂಟರ್‍ ಅನ್ನು ಸಂಪೂರ್ಣವಾಗಿ ಹೋಂಡಾ ರಿಸರ್ಚ್ ಆಂಡ್ ಡೆವೆಲಪ್‍‍ಮೆಂಟ್ ವಿನ್ಯಾಸ ಮಾಡಲಾಗಿದೆ. ಇದಲ್ಲದೆ ಈ ಸ್ಕೂಟರ್ ಹೆಚ್‍‍ಎಮ್‍ಎಸ್ಐ ಲ್ಯಾಟಿನ್ ಅಮೇರಿಕಾದ ಮಾರುಕಟ್ಟೆಗು ಕೂಡ ರಫ್ತು ಮಾಡುತ್ತದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಹೊಸದಾಗಿ ಬಿಡುಗಡೆಗೊಂಡ ಹೋಂಡಾ ನವಿ ಹೊಸ ಫ್ಯುಯಲ್ ಗೇಜ್ ಮತ್ತು ಮೆಟಲ್ ಮಫ್ಲರ್ ಪ್ರೊಟೆಕ್ಟರ್ ಅನ್ನು ಪಡೆದುಕೊಂಡಿದ್ದು, ಸ್ಟೈಲಿಷ್ ಸ್ಪೀಡೋಮೀಟರ್, ಟ್ಯೂಬ್‍‍ಲೆಸ್ ಟೈರ್ಸ್, ಗ್ರ್ಯಾಬ್ ರೈಲ್, ಹೆಡ್‍ಲೈಟ್ ಕವರ್, ರಿಯರ್ ವ್ಯೂ ಮಿರರ್ಸ್ ಮತ್ತು ಸ್ಪೋರ್ಟಿ ರೆಡ್ ಬಣ್ಣದ ಕ್ಯೂಷನ್ ಸ್ಪ್ರಿಂಗ್ ಅನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಎಂಜಿನ್ ಸಾಮರ್ಥ್ಯ

ಹೊಸ ನವಿ ಸ್ಕೂಟರ್ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಪಡೆದಿದ್ದು 109ಸಿಸಿ ಫ್ಯಾನ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 8ಬಿಹೆಚ್‍‍ಪಿ ಮತ್ತು 8.96ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು ವಿ ಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಇದಲ್ಲದೆ ಹೋಂಡಾ ನವಿ ಸ್ಕೂಟರ್‍ ಈಗಾಗಲೆ ಮಾರುಕಟ್ಟೆಯಲ್ಲಿ ಪೇಟ್ರಿಯಾಟ್ ರೆಡ್, ಶಾಸ್ಟಾ ವೈಟ್, ಸ್ಪಾರ್ಕಿ ಆರೆಂಜ್, ಬ್ಲಾಕ್ ಎಂಬ ಬಣ್ಣಗಳಲ್ಲಿ ಲಭ್ಯಬಿದ್ದು ಇದೀಗ ಹೊಸದಾಗಿ ರೇಂಜ್ ಗ್ರಿನ್ ಹಾಗು ಲದಾಕ್ ಬ್ರೌನ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ನವಿ ಮೋಟೊ-ಸ್ಕೂಟರ್ ಹೋಸ್ಟ್ ಬಿಡಿಭಾಗಗಳು ಸೇರಿದ ಹಲವಾರು ಕಸ್ಟಮೈಸೇಷನ್‍‍ನ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿದ್ದು, ಗಂಟೆಗೆ 81 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಹೊಂಡಾ ನವಿ 1805ಎಮ್ಎಮ್ ಉದ್ದ, 748ಎಮ್ಎಮ್ ಅಗಲ, 1039ಎಮ್ಎಮ್ ಎತ್ತರ, 1286ಎಮ್ಎಮ್ ವ್ಹೀಲ್ ಬೇಸ್, 156ಎಮ್ಎಮ್ ಗೌಂಡ್ ಕ್ಲಿಯರೆನ್ಸ್, 765ಎಮ್ಎಮ್ ಸೀಟ್ ಎತ್ತರ, 99 ಕೇಜಿ ತೂಕ ಮತ್ತು 9.5 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಇನ್ನು ಸಸ್ಪೆಂಷನ್ ವಿಚಾರಕ್ಕೆ ಬಂದಿದ್ದಲ್ಲಿ ಹೋಂಡಾ ನವಿ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಸಸ್ಪೆಂಷನ್ ಸಿಸ್ಟಮ್ ಅನ್ನು ಪದೆದುಕೊಂಡಿದೆ. ಮತ್ತು ಸ್ಕೂಟರ್‍‍ನ ಎರಡು ಬದಿಗಳಲ್ಲಿ 130ಎಮ್ಎಮ್ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದ ಹೋಂಡಾ ನವಿ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2016ರಲ್ಲಿ ಬಿಡುಗಡೆಗೊಂಡ ಹೋಂಡಾ ನವಿ ಸ್ಕೂಟರ್ ಪ್ರಾರಂಭದಲ್ಲಿ ಹೆಚ್ಚು ಸದ್ದು ಮಾಡಿದ್ದಿ, ನಂತರದ ದಿನಗಳಲ್ಲಿ ಕಳಪೆ ಮಟ್ಟದ ಮಾರಾಟವನ್ನು ಕಂಡಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯು ಈ ಸ್ಕೂಟರ್‍‍ನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎಂಬ ಗಾಳಿ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಹೋಂಡಾ ಸಂಸ್ಥೆಯು ನವಿ ಸ್ಕೂಟರ್‍ ಅನ್ನು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ.

Most Read Articles

Kannada
Read more on honda navi new launches
English summary
New Honda Navi Launched In India.
Story first published: Friday, July 20, 2018, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X