ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ನಾರ್ಟನ್ ಮೋಟಾರ್ ಸೈಕಲ್ಸ್ ಭಾರತದಲ್ಲಿ ಕಮಾಂಡೋ 961 ಕೆಫೆ ರೇಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಪುಣೆ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್ ರೂ. 23 ಲಕ್ಷ ಬೆಲೆ ಪಡೆದುಕೊಂಡಿದೆ.

By Praveen Sannamani

ನಾರ್ಟನ್ ಮೋಟಾರ್ ಸೈಕಲ್ ಸಂಸ್ಥೆ ಬಿಡುಗಡೆ ಮಾಡಿರುವ ಕಮಾಂಡೋ 961 ಕೆಫೆ ರೇಸರ್ ಸದ್ಯಕ್ಕೆ ಸಿಬಿಯು ಮುಖಾಂತರ ಆಮದು ಮಾಡಿಕೊಳ್ಳಲು ಮಾತ್ರ ಅವಕಾಶವಿದ್ದು, ಭಾರತದಲ್ಲಿನ ನಾರ್ಟನ್ ಮೋಟಾರ್ ಸೈಕಲ್ ಅಧಿಕೃತ ಮಾರಾಟಗಾರ ಮೋಟಾರ್ ಒಯಲ್ ಸಂಸ್ಥೆಯು ಹೊಸ ಬೈಕ್‌ ಮಾರಾಟ ಪ್ರಕ್ರಿಯೆ ನಡೆಸಲಿದೆ. ಹೀಗಾಗಿ ಆಸಕ್ತ ಗ್ರಾಹಕರು ರೂ. 2 ಲಕ್ಷ ಮುಂಗಡ ಪಾವತಿ ಹೊಸ ಬೈಕ್ ಖರೀದಿ ಮಾಡಬೇಕಾಗುತ್ತದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಫೆ ರೇಸರ್ ಬೈಕ್ ಮಾದರಿಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ ಮಾಡಿರುವ ನಾರ್ಟನ್ ಸಂಸ್ಥೆಯು ಐಷಾರಾಮಿ ಕ್ಲಾಸಿಕ್ ಬೈಕ್ ಪ್ರಿಯರಿಗೆ ಹೊಸ ಆಯ್ಕೆಯೊಂದನ್ನು ಒದಗಿಸುತ್ತಿದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಇದರ ಜೊತೆಗೆ ಸದ್ಯ ದುಬಾರಿ ಬೆಲೆಯಲ್ಲಿ ಲಭ್ಯವಿರುವ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳ ಬೆಲೆ ತಗ್ಗಿಸುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಿರುವ ನಾರ್ಟನ್ ಮೋಟಾರ್ ಸೈಕಲ್ ಸಂಸ್ಥೆಯು ಸ್ಥಳೀಯವಾಗಿ ಬೈಕ್ ಉತ್ಪಾದನೆಗಾಗಿ ಮೋಟಾರ್ ಒಯಲ್ ಸಂಸ್ಥೆಯೊಂದಿಗೆ ಜಂಟಿಯಾಗಿ ಭಾರತದಲ್ಲಿ ಬೈಕ್ ಉತ್ಪಾದನೆ ಮಾಡುವ ಯೋಜನೆ ಹೊಂದಿದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

2018-19ರ ಸಾಲಿನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಯಾದ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳು ರಸ್ತೆಗಿಳಿಯಲಿದ್ದು, ಹೊಸ ಬೈಕ್‌ಗಳ ಬೆಲೆಯಲ್ಲಿ ಮತ್ತಷ್ಟು ಬೆಲೆ ಕಡಿಮೆಯಾಗಲಿದೆ. ಆದರೇ ಸದ್ಯ ಬಿಡುಗಡೆ ಮಾಡಿರುವ ಬೈಕ್‌ಗಳು ಆಮದು ಮಾಡಿಕೊಂಡಿರುವ ಹಿನ್ನೆಲೆ ಕೊಂಚ ದುಬಾರಿ ಎನ್ನಬಹುದು.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಆದರೂ, ಮಾಡರ್ನ್ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ಹೊಂದಿರುವ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳು ಕ್ಲಾಸಿಕ್ ಬೈಕ್ ಪ್ರಿಯರ ಹಾಟ್ ಫೇವರಿಟ್ ಎನ್ನಿಸಲಿದ್ದು, ರೌಂಡ್ ಹೆಡ್‌ಲ್ಯಾಂಪ್, ಸಣ್ಣದಾದ ವಿಂಡ್ ಸ್ಕೀನ್, ವಕ್ರವಾದ ಫ್ಯೂಲ್ ಟ್ಯಾಂಕ್, ಟೈಲ್ ಲೈಟ್ ಮತ್ತು ರಿಯರ್ ಕೌಲ್ ಪಡೆದುಕೊಂಡಿದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

961ಸಿಸಿ ಪ್ಯಾರಾಲಲ್ ಟ್ವಿನ್ ಏರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 78.9ಬಿಎಚ್‌ಪಿ ಮತ್ತು 90ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಜೊತೆಗೆ ಅಲ್ಯುಮಿನಿಯಂ ಪ್ರೇರಿತ ಸ್ಪೋರ್ಕ್ ರಿಮ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್, ಮಡ್ ಗಾರ್ಡ್ ಮತ್ತು ಕಾರ್ಬನ್ ಫೈಬರ್ ಹೊಂದಿರುವ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳು, ಮುಂಭಾಗದಲ್ಲಿ 320ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಹಾಗೂ 220ಎಂಎಂ ರಿಯಲ್ ಸಿಂಗಲ್ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಈ ಮೂಲಕ ಬೈಕಿನ ಅಂದವನ್ನು ಹೆಚ್ಚಿಸಲಾಗಿದ್ದು, ಸೀಟುಗಳು ಡಿಸೈನ್, ಎಕ್ಸಾಸ್ಟ್ ಡಿಸೈನ್, ಮುಂಭಾಗದಲ್ಲಿ 43 ಎಂಎಂ ಓಹೊಹಿಲ್ಸ್ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಓಹೊಹಿಲ್ಸ್ ಟ್ವಿನ್ ಶಾರ್ಕ್ ಸೌಲಭ್ಯ ಅಳವಡಿಸಲಾಗಿದೆ.

ರೂ.23 ಲಕ್ಷಕ್ಕೆ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್ ಬಿಡುಗಡೆ

ಒಟ್ಟಿನಲ್ಲಿ ಮಾರ್ಡನ್ ಕ್ಲಾಸಿಕ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಎಂಜಿನ್ ಸಾಮರ್ಥ್ಯ ಮತ್ತು ಐಷಾರಾಮಿ ಸೌಲಭ್ಯ ಹೊಂದಿರುವ ನಾರ್ಟನ್ ಕಮಾಂಡೋ 961 ಕೆಫೆ ರೇಸರ್ ಬೈಕ್‌ಗಳು ಬೆಲೆಯಲ್ಲಿ ದುಬಾರಿ ಎನ್ನಿಸಿದರೂ ಐಷಾರಾಮಿ ಕ್ಲಾಸಿಕ್ ಬೈಕ್ ಪ್ರಿಯರ ನೆಚ್ಚಿನ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Friday, April 20, 2018, 11:16 [IST]
English summary
Norton Commando 961 Cafe Racer Launched In India; Priced At Rs 23 Lakh.
Read more on norton commando
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+