ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಅತ್ಯಂತ ವೇಗದ ಎಲೆಕ್ಟ್ರಿಕ್‌ ಸ್ಕೂಟರ್‌ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಜಪಾನ್ ಮೂಲದ ಒಕಿನಾವ ಸಂಸ್ಥೆಯು ತನ್ನ ಬಹುನೀರಿಕ್ಷಿತ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಸರಳಗೊಳಿಸಲು ಹಲವು ಹೊಸ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ 2019ರಿಂದ ಬಹುತೇಕ ವಾಹನ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುತ್ತಿದ್ದು, ಇದರಲ್ಲಿ ಒಕಿನವಾ ಸ್ಕೂಟರ್‌ಗಳು ಕೂಡಾ ಪ್ರಮುಖವಾಗಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಒಕಿನಾವ ಸಂಸ್ಥೆಯು ಈಗಾಗಲೇ ಭಾರತದಲ್ಲಿ ಪ್ರೈಸ್ ಮತ್ತು ರಿಡ್ಜ್ ಪ್ಲಸ್ ಎನ್ನುವ ಎರಡು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಐ-ಪ್ರೈಸ್ ಎನ್ನುವ ಸ್ಕೂಟರ್ ಮಾದರಿಯನ್ನು ಪರಿಚಯಿಸಲು ತಯಾರಿ ನಡೆಸಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ

ಒಕಿನವಾ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮುಂದಿನ ತಿಂಗಳು ಬಿಡುಗಡೆಗೊಳ್ಳುವುದು ಖಚಿತವಾಗಿದ್ದು, ಈ ಹಿನ್ನೆಲೆ ಆಸಕ್ತ ಗ್ರಾಹಕರಿಂದ ರೂ.5 ಸಾವಿರ ಮುಂಗಡದೊಂದಿಗೆ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪಡೆದುಕೊಳ್ಳಲಾಗುತ್ತಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಒಕಿನಾವ ಸಂಸ್ಥೆಯು ಐ-ಪ್ರೈಸ್ ಸ್ಕೂಟರ್ ಬಿಡುಗಡೆಗೊಳಿಸಿದ ನಂತರ ಮೊದಲ ಹಂತವಾಗಿ 500 ಸ್ಕೂಟರ್‌ಗಳನ್ನು ಮಾತ್ರ ಹೊರತರುತ್ತಿದ್ದು, ಹೀಗಾಗಿ ಮೊದಲು ಬುಕ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ವಿತರಣೆಗೆ ಆದ್ಯತೆ ನೀಡಲಾಗುತ್ತೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಮೊದಲ ಹಂತದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐ-ಪ್ರೈಸ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಿರಲಿದ್ದು, ಅತ್ಯುತ್ತಮ ಮೈಲೇಜ್ ಪ್ರೇರಣೆ ಹೊಂದಿರುವ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವು ಈ ಸ್ಕೂಟರ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಬ್ಯಾಟರಿ ಸಾಮರ್ಥ್ಯ

ತೆಗೆದು ಹಾಕಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಐ-ಪ್ರೈಸ್ ಸ್ಕೂಟರ್‌ಗಳು ಕೇವಲ ಎರಡರಿಂದ ಎರಡೂವರೆ ಗಂಟೆಗಳಲ್ಲಿ ಪೂರ್ಣಪ್ರಮಾಣದ ಚಾರ್ಚಿಂಗ್ ಪಡೆದುಕೊಳ್ಳಲಿದ್ದು, ಇದು ಲಿಡ್ ಆ್ಯಸಿಡ್ ಬ್ಯಾಟರಿಗಳಿಂತ ಶೇ.40ರಷ್ಟು ಕಡಿಮೆ ತೂಕ ಹೊಂದಿರಲಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಐ-ಪ್ರೈಸ್ ಮೈಲೇಜ್

ಮೇಲೆ ಹೇಳಿದ ಹಾಗೆ ಮೈಲೇಜ್ ವಿಚಾರದಲ್ಲಿ ಸದ್ಯ ಗಮನಸೆಳೆಯುತ್ತಿರುವ ಲೀಥಿಯಂ ಬ್ಯಾಟರಿ ಸೌಲಭ್ಯವು ಐ-ಪ್ರೈಸ್ ಸ್ಕೂಟರ್‌ನಲ್ಲಿ ಜೋಡಣೆ ಮಾಡಲಾಗಿದ್ದು, ಇದು ಒಂದು ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಚ್ ಮಾಡಿದ್ದಲ್ಲಿ 160 ರಿಂದ 180 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಸ್ಕೂಟರ್ ಬೆಲೆ(ಅಂದಾಜು)

ಈ ಹಿಂದಿನ ಪ್ರೈಸ್ ಸ್ಕೂಟರ್‌ಗಿಂತಲೂ ಐ-ಪ್ರೈಸ್ ಸ್ಕೂಟರ್ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರಲಿದ್ದು, ಸ್ಕೂಟರ್ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.71 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಇದು ಮಾರುಕಟ್ಟೆಯಲ್ಲಿರುವ ಇತರೆ ಸ್ಕೂಟರ್‌ಗಳಿಂತಲೂ ತುಸು ದುಬಾರಿ ಎನ್ನಿಸಿದರೂ ಸಹ ಕೊಟ್ಟ ಬೆಲೆಗೆ ತಕ್ಕಂತೆ ಉತ್ತಮ ಮೈಲೇಜ್ ಹೊಂದಿದ್ದು, ಇದರಿಂದಾಗಿ ಪ್ರಯಾಣದ ವೆಚ್ಚವು ತಗ್ಗುವುದರಿಂದ ಇದು ಖರೀದಿಗೆ ಯೋಗ್ಯ ಎನ್ನಿಸಲಿವೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿರುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಗಂಟೆಗೆ ಗರಿಷ್ಠ 75 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಚಾಲನಾ ವೆಚ್ಚ, ಕಡಿಮೆ ನಿರ್ವಹಣೆ ವೆಚ್ಚ ಮತ್ತು ಶೂನ್ಯ ಮಾಲಿನ್ಯನೊಂದಿಗೆ ಪರಿಸರ ಸ್ನೇಹಿ ಸ್ಕೂಟರ್‌ ಮಾದರಿಯಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಚಾಲನಾ ವಿಧಗಳು:

ಎಕಾನಮಿ (35 ಕಿ.ಮಿ ಪ್ರತಿ ಗಂಟೆಗೆ),

ಸ್ಫೋರ್ಟಿ (65 ಕಿ.ಮಿ ಪ್ರತಿ ಗಂಟೆಗೆ),

ಟರ್ಬೊ (75 ಕಿ.ಮಿ ಪ್ರತಿ ಗಂಟೆಗೆ)

MOST READ: ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು..!

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಒಕಿನಾವ ಸ್ಕೂಟರ್ ವಿಶೇಷತೆಗಳು:

ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಒಕಿನಾವ ಸ್ಕೂಟರ್‌ಗಳು ಹೈ ಸ್ಪೀಡ್, ಡಿಜಿಟಲ್ ಸ್ಪೀಡೋಮೀಟರ್, ಆ್ಯಪ್ ಸಂಯೋಜಿತ ಫ್ಯೂಚರ್, ತ್ವರಿತ ಚಾರ್ಜಿಂಗ್, ಗರಿಷ್ಠ ಮೈಲೇಜ್, ರಿಯರ್ ಸಸ್ಪೆನ್ಷನ್, ಸ್ಟೈಲಿಷ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಲೈಟ್ಸ್ ಪಡೆದುಕೊಂಡಿರಲಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಬುಕ್ಕಿಂಗ್ ಆರಂಭ..!

ಹಾಗೆಯೇ ಸ್ಕೂಟರ್‌ಗಳಲ್ಲಿ ಸುರಕ್ಷಿತ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 12 ಇಂಚುಗಳ ಚಕ್ರಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಫ್ರಂಟ್ ಡಿಸ್ಕ್, ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಅಸಿಸ್ಟನ್ ಬ್ರೇಕಿಂಗ್ ಸಿಸ್ಟಂ (E-ABS), ಸೈಡ್ ಸ್ಟ್ಯಾಂಡ್ ಸೇಫ್ಟಿ ಸೆನ್ಸಾರ್ ಸಹ ಇದರಲ್ಲಿದೆ.

More from DriveSpark

Article Published On: Friday, December 14, 2018, 18:01 [IST]
English summary
Okinawa i-Praise Bookings Open For Rs 5000: Comes With A 'Detachable' Battery Promising 180km Range. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+