ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

By Praveen Sannamani

ದೇಶದ ಅತ್ಯಂತ ವೇಗದ ಎಲೆಕ್ಟ್ರಿಕ್‌ ಸ್ಕೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಓಕಿನವಾ ಸ್ಕೂಟರ್‌‌ಗಳು ಸದ್ಯ ಲೀಡ್ ಆ್ಯಸಿಡ್ ಬ್ಯಾಟರಿ ಸೌಲಭ್ಯದೊಂದಿಗೆ ಮಾರಾಟವಾಗುತ್ತಿದ್ದು, ಸದ್ಯ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಪರಿಚಯಿಸುತ್ತಿರುವ ಬಗ್ಗೆ ಓಕಿನವಾ ಸುಳಿವು ನೀಡಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ದೇಶಿಯವಾಗಿ ಅಭಿವೃದ್ಧಿಗೊಂಡ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಸಂಸ್ಥೆಯಾಗಿರುವ ಓಕಿನವಾ (Okinawa) ಸಂಸ್ಥೆಯು ಕಳೆದ ಡಿಸೆಂಬರ್‌ನಲ್ಲಿ 'ಪ್ರೈಸ್' (Praise) ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಓಕಿನವಾ ಸಂಸ್ಥೆಯು ತನ್ನ ಹೊಸ ಇ-ಸ್ಕೂಟರ್‌ಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಪರಿಚಯಿಸುವ ಹೊಸ ಯೋಜನೆಗೆ ಸಮ್ಮತಿ ಸೂಚಿಸಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿರುವ ಓಕಿನವಾ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಗಂಟೆಗೆ ಗರಿಷ್ಠ 75 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಚಾಲನಾ ವೆಚ್ಚ, ಕಡಿಮೆ ನಿರ್ವಹಣೆ ವೆಚ್ಚ ಮತ್ತು ಶೂನ್ಯ ಮಾಲಿನ್ಯನೊಂದಿಗೆ ಪರಿಸರ ಸ್ನೇಹಿ ಸ್ಕೂಟರ್‌ ಮಾದರಿಯಾಗಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಸದ್ಯ ಓಕಿನವಾ ಸ್ಕೂಟರ್‌ಗಳಲ್ಲಿ ತೆಗೆಯಬಹುದಾದ ಲೀಡ್ ಆ್ಯಸಿಡ್ ಬ್ಯಾಟರಿ ಸೌಲಭ್ಯದೊಂದಿಗೆ ಮಾರಾಟವಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಾಗುತ್ತಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಪರಿಚಯಿಸಿದ್ದಲ್ಲಿ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಚಾರ್ಜ್‌ಗೆ ಗರಿಷ್ಠ 170ರಿಂದ 210 ಕಿ.ಮೀ ಮೈಲೇಜ್ ಸಾಮರ್ಥ್ಯವನ್ನು ಹೊಂದಲಿದ್ದು, ಇವುಗಳು ಸದ್ಯ ಬಳಕೆ ಮಾಡಲಾಗುತ್ತಿರುವ ಲೀಡ್ ಆ್ಯಸಿಡ್ ಬ್ಯಾಟರಿಗಳಿಂತಲೂ ಹಗುರವಾಗಿರಲಿವೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

9 ಕೆ.ಜಿ ಭಾರದ ಬ್ಯಾಟರಿಯನ್ನು ಚಾರ್ಜ್ ಮಾಡಿಸಿ ಸ್ಕೂಟರ್‌ನಲ್ಲಿ ಪ್ರತ್ಯೇಕವಾಗಿ ಇಡಬಹುದಾಗಿದ್ದು, ಶೇಕಡಾ 80ರಷ್ಟು ಚಾರ್ಜ್ ಮಾಡಿಸಲು ಕೇವಲ 45 ನಿಮಿಷಗಳಷ್ಟು ಸಮಯ ಬೇಕಾಗುವುದು. ಅಲ್ಲದೆ, ಅತ್ಯುತ್ತಮ ಬ್ಯಾಟರಿ ಬಾಳ್ವಿಕೆಯನ್ನು ( 2,000 cycles) ಕಾಯ್ದುಕೊಂಡಿದ್ದು, ಮೂರು ವರ್ಷಗಳ ಬದಲಿ ವಾರಂಟಿಯನ್ನು ನೀಡುತ್ತದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಇದರೊಂದಿಗೆ ಹೈ ಫೇಸ್ ಬಿಎಲ್‌ಡಿಸಿ ಮೋಟಾರು ಜಲ ನಿರೋಧಕ ಕೂಡಾ ಆಗಿದ್ದು, 18ರಿಂದ 40 ಎನ್‌ಎಂ ತಿರುಗುಬಲವು ತ್ವರಿತ ವೇಗವನ್ನು ಖಾತ್ರಿಪಡಿಸಲಿದೆ. ಅಲ್ಲದೇ ಸ್ಕೂಟರ್ ಚಾಲನೆಗೆ ಅನುಕೂಲಕರವಾಗಲೆಂದು ಪ್ರಮುಖ ಮೂರು ಚಾಲನಾ ವಿಧಾನಗಳನ್ನು ಸಹ ಅಳವಡಿಸಲಾಗಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಚಾಲನಾ ವಿಧಗಳು:

ಎಕಾನಮಿ (35ಕಿ.ಮಿ ಪ್ರತಿ ಗಂಟೆಗೆ),

ಸ್ಫೋರ್ಟಿ (65ಕಿ.ಮಿ ಪ್ರತಿ ಗಂಟೆಗೆ),

ಟರ್ಬೊ (75ಕಿ.ಮಿ ಪ್ರತಿ ಗಂಟೆಗೆ)

ಲಭ್ಯವಿರುವ ಬಣ್ಣಗಳು: ಪರ್ಪಲ್, ಗೋಲ್ಡನ್ ಮತ್ತು ಬ್ಲೂ

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಓಕಿನವಾ ಸ್ಕೂಟರ್ ವಿಶೇಷತೆಗಳು:

ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಓಕಿನವಾ ಸ್ಕೂಟರ್‌ಗಳು ಹೈ ಸ್ಪೀಡ್, ಡಿಜಿಟಲ್ ಸ್ಪೀಡೋಮೀಟರ್, ಆ್ಯಪ್ ಸಂಯೋಜಿತ ಫ್ಯೂಚರ್, ತ್ವರಿತ ಚಾರ್ಜಿಂಗ್, ಗರಿಷ್ಠ ಮೈಲೇಜ್, ರಿಯರ್ ಸಸ್ಪೆನ್ಷನ್, ಸ್ಟೈಲಿಷ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಲೈಟ್ಸ್ ಪಡೆದುಕೊಂಡಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಹಾಗೆಯೇ ಸುರಕ್ಷಿತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 12 ಇಂಚುಗಳ ಚಕ್ರಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಫ್ರಂಟ್ ಡಿಸ್ಕ್, ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಅಸಿಸ್ಟನ್ ಬ್ರೇಕಿಂಗ್ ಸಿಸ್ಟಂ (E-ABS), ಸೈಡ್ ಸ್ಟ್ಯಾಂಡ್ ಸೇಫ್ಟಿ ಸೆನ್ಸಾರ್ ಸಹ ಇದರಲ್ಲಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಇದೇ ಕಾರಣಕ್ಕಾಗಿ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆಗೆ ಅನುವು ಮಾಡಿಕೊಡುವ ಓಕಿನವಾ ಸ್ಕೂಟರ್‌ಗಳು ಮೊನ್ನೆಯಷ್ಟೇ ಜಮ್ಮು-ಕಾಶ್ಮೀರದ ಲೆಹ-ಲಡಾಕ್ ತಲಪುವ ಮೂಲಕ ವಿನೂತನ ದಾಖಲೆಗೆ ಕಾರಣವಾಗಿದ್ದು, ಇದೇ ಸಂದರ್ಭದಲ್ಲಿ ಹೊಸದಾಗಿ ಪರಿಚಯಿಸಲಾಗುತ್ತಿರುವ ಲೀಥಿಯಂ ಅಯಾನ್ ಬ್ಯಾಟಿರಿಗಳ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲಾಗಿದೆ.

ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಮತ್ತಷ್ಟು ಸ್ಮಾರ್ಟ್ ಆದ ಓಕಿನವಾ ಪ್ರೈಸ್

ಒಟ್ಟಿನಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಪ್ರೇರಿತ ಪ್ರೈಸ್ ಸ್ಕೂಟರ್‌ಗಳನ್ನು ಪರಿಚಯಿಸಲು ಭಾರೀ ಉತ್ಸಕವಾಗಿರುವ ಓಕಿನವಾ ಸಂಸ್ಥೆಯು ಸೆಪ್ಟೆಂಬರ್ ಹೊತ್ತಿಗೆ ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದ್ದು, ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 59,889ಕ್ಕೆ ಲಭ್ಯವಿರುವ ಪ್ರೈಸ್ ಸ್ಕೂಟರ್‌ಗಳು ಲೀಥಿಯಂ ಅಲಾಯ್ ಬ್ಯಾಟರಿ ಜೋಡಣೆಯ ನಂತರ ಇನ್ನಷ್ಟು ದುಬಾರಿ ಬೆಲೆ ಹೊಂದವುದು ಖಚಿತ. ಆದರೂ ಹೊಸ ಸೌಲಭ್ಯದಿಂದ ಸ್ಕೂಟರ್ ಮೈಲೇಜ್ ದ್ವಿಗುಣವಾಗುವುದು ಮುಖ್ಯ ವಿಚಾರ.

More from DriveSpark

Article Published On: Wednesday, June 27, 2018, 14:11 [IST]
English summary
Okinawa Praise To Be Introduced With Lithium-ion Battery — Launch Details Revealed.
Read more on okinawa electric scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+