ನಿಮ್ಮ ಲವರ್‌ಗೆ ಸ್ಕೂಟರ್ ಗಿಫ್ಟ್ ನೀಡಿ: ಭಾರೀ ರಿಯಾಯಿತಿ ಘೋಷಣೆ

ವ್ಯಾಲೆಂಟೈನ್ಸ್ ಡೇಯಂದು ತನ್ನ ಸಂಗಾತಿಗೆ ಉಡುಗೊರೆ ನೀಡುವ ಮೂಲಕ ಆ ದಿನವನ್ನು ಅವಿಸ್ಮರಣೀಯವಾಗಿಸಲು ಪ್ರತಿಯೊಬ್ಬ ಪ್ರೇಮಿಯು ಬಯಸುತ್ತಾರೆ. ಅಂತಹವರಿಗಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಒಕಿನಾವಾ (Okinawa) ಭರ್ಜರಿ ಸಿಹಿಸುದ್ದಿ ನೀಡಿದ್ದು, ತನ್ನ ದ್ವಿಚಕ್ರ ವಾಹನ ಖರೀದಿಗೆ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಈ ಡಿಸ್ಕೌಂಟ್ ಆಫರ್ ನಾಳೆವರೆಗೆ (ಫೆಬ್ರುವರಿ 15) ಜಾರಿಯಿರಲಿದ್ದು, ಗ್ರಾಹಕರಿಗೆ ಬರೋಬ್ಬರಿ ರೂ.12,500 ರಿಯಾಯಿತಿ ಸಿಗಲಿದೆ. ಒಕಿನಾವಾ, ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಟಾಪ್ ಸ್ವೀಡ್ ಹೊಂದಿರುವ ವಿವಿಧ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುವ ಮೂಲಕ ಖ್ಯಾತಿಗಳಿಸಿದೆ. ಐಪ್ರೈಸ್ ಪ್ಲಸ್ (iPraise+), ಪ್ರೈಸ್ ಪ್ರೊ (Praise Pro), ರಿಜ್ ಪ್ಲಸ್ (Ridge+). ಒಕಿನಾವಾ R30 ಹಾಗೂ ಲೈಟ್ (Lite) ಮೇಲೆ ಈ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ನಿಮ್ಮ ಲವರ್‌ಗೆ ಸ್ಕೂಟರ್ ಗಿಫ್ಟ್ ನೀಡಿ: ಭಾರೀ ರಿಯಾಯಿತಿ ಘೋಷಣೆ

ಒಕಿನಾವಾ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಎಂಟ್ರಿ ಲೆವೆಲ್ ಸ್ಕೂಟರ್, ರೂ.61,998 ದರವನ್ನು ಹೊಂದಿದೆ. ಟಾಪ್ ಲೆವೆಲ್ ಮಾದರಿಯಾಗಿರುವ ಓಕಿ 90 (Okhi-90) ಗರಿಷ್ಠ ಬೆಲೆಯನ್ನು ಹೊಂದಿದ್ದು, ರೂ.1.86 ಲಕ್ಷ, ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರು ಖರೀದಿ ಮಾಡಬಹುದು. ಇಷ್ಟೇಅಲ್ಲದೆ, ಒಕಿನಾವಾ ದೇಶದಲ್ಲಿ ಒಟ್ಟು ಎಂಟು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಒಕಿನಾವಾ ಸ್ಕೂಟರ್ ಗಳು ಹೆಚ್ಚು ರೇಂಜ್ ನೀಡುವುದಕ್ಕೆ ಹೆಸರುವಾಸಿಯಾಗಿವೆ. ಐಪ್ರೈಸ್ ಪ್ಲಸ್ (iPraise+) ಸ್ಕೂಟರ್ ಬಗ್ಗೆ ಮಾತನಾಡುವುದರೆ, ಇದು ರೂ.1,60,165 ಬೆಲೆಯನ್ನು ಹೊಂದಿದ್ದು, ಕೇವಲ ಒಂದೇ ರೂಪಾಂತರ ಹಾಗೂ ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 1000 ವ್ಯಾಟ್ BLDC ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಚಲಿಸಲಿದ್ದು, 4-5 ಗಂಟೆಗಳಲ್ಲಿ ಸಂಪೂರ್ಣ ಬ್ಯಾಟರಿ ಪ್ಯಾಕ್ ಚಾರ್ಜ್ ಆಗಲಿದ್ದು,139 Km ರೇಂಜ್ ನೀಡಲಿದೆ. ಅಲ್ಲದೆ, 58 Kmph ಟಾಪ್ ಸ್ವೀಡ್ ಹೊಂದಿದೆ.

ನಿಮ್ಮ ಲವರ್‌ಗೆ ಸ್ಕೂಟರ್ ಗಿಫ್ಟ್ ನೀಡಿ: ಭಾರೀ ರಿಯಾಯಿತಿ ಘೋಷಣೆ

ಒಕಿನಾವಾ ಪ್ರೈಸ್ ಪ್ರೊ (Praise Pro) ರೂ. 99,645 ದರದಲ್ಲಿ ಖರೀದಿಗೆ ಸಿಗಲಿದ್ದು, 2.0 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. 2-3 ಗಂಟೆಗಳಲ್ಲಿ ಇದರ ಬ್ಯಾಟರಿ ಚಾರ್ಜ್ ಆಗಲಿದ್ದು, 88 km ರೇಂಜ್ ನೀಡಲಿದೆ. ಅಲ್ಲದೆ, 58 kmph ಟಾಪ್ ಸ್ವೀಡ್ ಹೊಂದಿದೆ. ಎಲ್ಇಡಿ ಹೆಡ್ ಲೈಟ್ಸ್, ಎಲ್ಇಡಿ DRLs, ಡಿಜಿಟಲ್ LCD ಕನ್ಸೋಲ್, ಆಂಟಿ ಥೆಫ್ಟ್ ಅಲಾರ್ಮ್, ಕೀಲೆಸ್ ಎಂಟ್ರಿ ಹಾಗೂ USB ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಒಕಿನಾವಾ ರಿಜ್ ಪ್ಲಸ್ (Ridge+) ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ರೂ.76,285 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಗ್ರಾಹಕರಿಗೆ ಮೂರು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಅವುಗಳೆಂದರೆ, ಆಶ್ ಗ್ರೇ, ಕ್ಲೌಡ್ ಸಿಲ್ವರ್ ಹಾಗೂ ಮ್ಯಾಜಿಕ್ ಬ್ಲೂ. 2-3 ಗಂಟೆಗಳಲ್ಲಿ ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲಿದ್ದು, ಬರೋಬ್ಬರಿ 84 km ರೇಂಜ್ ನೀಡಲಿದ್ದು, 45 kmph ಟಾಪ್ ಸ್ವೀಡ್ ಹೊಂದಿದೆ ಎಂದು ಹೇಳಬಹುದು.

ನಿಮ್ಮ ಲವರ್‌ಗೆ ಸ್ಕೂಟರ್ ಗಿಫ್ಟ್ ನೀಡಿ: ಭಾರೀ ರಿಯಾಯಿತಿ ಘೋಷಣೆ

ಒಕಿನಾವಾ R30 ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಸ್ಕೂಟರ್ ಆಗಿದ್ದು, ರೂ. 61,998 ದರಕ್ಕೆ ಸಿಗಲಿದೆ. 1.25 KWH ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್, 4-5 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, 60 km ರೇಂಜ್ ನೀಡಲಿದ್ದು, 25 kmph ಟಾಪ್ ಸ್ವೀಡ್ ಹೊಂದಿದೆ. ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಒಕಿನಾವಾ ಲೈಟ್, ರೂ.85,450 ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 60 Km ರೇಂಜ್ ನೀಡಲಿದೆ.

ಪ್ರೇಮಿಗಳ ದಿನಕ್ಕೆ ಬೇರೆ ಯಾವ ಕಂಪನಿಯು ನೀಡದಂತಹ ರಿಯಾಯಿತಿಯನ್ನು ಒಕಿನಾವಾ ನೀಡಿದೆ. ಅಲ್ಲದೆ, ಕಂಪನಿಯ ಸ್ಕೂಟರ್ ಗಳು ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಟಾಪ್ ಸ್ವೀಡ್ ಹಾಗೂ ಹೆಚ್ಚಿನ ರೇಂಜ್ ನೀಡುವ ದ್ವಿಚಕ್ರ ವಾಹನಗಳಿವೆ. ಈ ವ್ಯಾಲೆಂಟೈನ್ಸ್ ಡೇಯಲ್ಲಿ ನಿಮ್ಮ ಸಂಗಾತಿಗೆ ಈ ಸ್ಕೂಟರ್ ನ್ನು ಉಗುಗೊರೆಯಾಗಿ ನೀಡುವ ಮೂಲಕ ಮತ್ತಷ್ಟು ಹತ್ತಿರವಾಗಬಹುದು. ನೆನಪಿನಲ್ಲಿಡಿ... ಈ ರಿಯಾಯಿತಿ ಪ್ರಯೋಜನಗಳು ನಾಳೆವರೆಗೆ (ಫೆಬ್ರುವರಿ 15) ಮಾತ್ರ ದೊರೆಯುತ್ತದೆ.

More from DriveSpark

Article Published On: Tuesday, February 14, 2023, 12:59 [IST]
English summary
Valentines day okinawa discount offer details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+