ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿದರೂ ಕೈಗಾರಿಕಾ ವಾಲಯಕ್ಕೆ ಕೆಲವು ವಿನಾಯಿತಿಯನ್ನು ನೀಡಿ ಹೊಸ ಮಾರ್ಗಸೂಚಿಯಂತೆ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಸರ್ಕಾರಾದ ಹೊಸ ಮಾರ್ಗಸೂಚಿಯಂತೆ ಒಕಿನಾವ ಕಂಪನಿಯು ದ್ವಿಚಕ್ರ ಉತ್ಪಾದನೆಯನ್ನು ಪುನರಾರಂಭಿಸಿದೆ.

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಒಕಿನಾವ ಶೇ.25 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಪೊರೇಟ್ ಕಚೇರಿ ಮತ್ತು ಉತ್ಪಾದನಾ ಘಟಕದಲ್ಲಿ ದ್ವಿಚಕ್ರ ಉತ್ಪಾದನೆಯನ್ನು ಪುನರಾರಂಭಿಸಿದೆ. ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸುವುದರಿಂದ ಕೆಲಸದ ಸ್ಥಳದಲ್ಲಿ, ಉತ್ಪಾದನಾ ಘಟಕದಲ್ಲಿ ಮತ್ತು ಡೀಲರ್ ಸುರಕ್ಷತೆಗೆ ಕ್ರಮಗಳನ್ನು ಕೈಗೊಂಡು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಂಪನಿ ಹೇಳಿದೆ.

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ದೇಶದಲ್ಲಿ ಕೋವಿಡ್ -19 ಮಹಾಮಾರಿ ವಿರುದ್ದ ಹೋರಾಡುವ ಸಮಯದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದರಿಂದ ಒಕಿನಾವ ಕಂಪನಿಯು ತಮ್ಮ ಡೀಲರ್ ಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಕಂಪನಿಯು ಹೊರಡಿಸಿದ ಮಾರ್ಗಸೂಚಿ ಪ್ರಕಾರ ಶೇ.25 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಡೀಲರ್ ಗಳಿಗೆ ಸೂಚಿಸಿದ್ದಾರೆ. ಹೆಚ್ಚುವರಿಯಾಗಿ ಉತ್ಪಾದನಾ ಘಟಕದಲ್ಲಿ ಸಿಬ್ಬಂದಿಗಳು ಎಲ್ಲಾ ಉತ್ಪನ್ನಗಳನ್ನು ಸ್ವಚ್ಚಗೊಳಿಸಲು ಸೂಚಿಸಿದೆ. ಇನ್ನು ಉತ್ಪಾದನಾ ಘಟಕದಿಂದ ಡೀಲರ್ ಗಳ ಉತ್ಪನ್ನಗಳನ್ನು ಸ್ವೀಕರಿಸಿದ ಬಳಿಕ ಮತ್ತೊಮ್ಮೆ ಸ್ವಚ್ಚಗೊಳಿಸುತ್ತಾರೆ.

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಡೀಲರ್ ಗಳು ತಮ್ಮ ಗ್ರಾಹಕರು ಸುರಕ್ಷಿತವಾಗಿರಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಇತರ ಅಗತ್ಯ ರಕ್ಷಣಾ ಸಾಧನಗಳನ್ನು ಒದಗಿಸುತ್ತಾರೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಕಾರ್ಪೊರೇಟ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅಲ್ಲದೇ ಸಿಬ್ಬಂದಿಗಳು ಕೂರಲು ಆಸನ ವ್ಯವಸ್ಥೆಯನ್ನು ಅಂತರ ಪಾಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಒಕಿನಾವ ಕಂಪನಿಯ ಎಲ್ಲಾ ನೌಕರರು ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಮತ್ತು ಇತರ ರಕ್ಷಣಾ ಸಾಧನಗಳನ್ನು ಬಳಿಸಿ ಕರ್ತವ್ಯವನ್ನು ನಿರ್ವಹಿಸುತ್ತಾರೆ.

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಕಂಪನಿಯು ತಮ್ಮ ನೌಕರರಿಗೆ ಕರೋನಾ ವೈರಸ್ ಬಗ್ಗೆ ಜಾಗೃತಿಯನ್ನು

ಮೂಡಿಸುತ್ತಿದೆ. ಹೆಚ್ಚುವರಿಯಾಗಿ, ಯಾವುದೇ ವೈದ್ಯಕೀಯ ತುರ್ತು ಸಂದರ್ಭದಲ್ಲಿ ನೌಕರರನ್ನು ಆಸ್ಪತ್ರೆಗೆ ಸಾಗಿಸಲು ಕಂಪನಿಯು ವಿಶೇಷ ತಂಡವನ್ನು ಸಿದ್ಧಪಡಿಸಿದೆ ಮತ್ತು ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸರ್ಕಾರಿ ಟೆಸ್ಟಿಂಗ್ ಸೆಂಟರ್ ಗೆ ಕರೆದೊಯ್ಯುತ್ತಾರೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಮಾರ್ಗಸೂಚಿಗಳ ಬಗ್ಗೆ, ಒಕಿನಾವಾ ವ್ಯವಸ್ಥಾಪಕ ನಿರ್ದೇಶಕ ಜೀತೇಂದರ್ ಶರ್ಮಾ ಮಾತನಾಡಿ, ಇಡೀ ದೇಶ ಈ ದುರದೃಷ್ಟಕರ ಸನ್ನಿವೇಶದಲ್ಲಿ, ಜವಾಬ್ದಾರಿಯುತ ಬ್ರ್ಯಾಂಡ್ ಆಗಿ ಒಕಿನಾವಾ ತನ್ನ ನೌಕರರು ಮತ್ತು ಗ್ರಾಹಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜೊತೆಗೆ ಈ ಸವಾಲಿನ ಸಮಯಗಳಲ್ಲಿ ಕರೋನಾ ವಿರುದ್ದ ಹೋರಾಟ ಮಾಡಲು ಸರ್ಕಾರದ ಜೊತೆ ಕೈ ಜೋಡಿಸುತ್ತೇವೆ ಎಂದು ಹೇಳಿದರು.

ಶೇ.25 ರಷ್ಟು ಉದ್ಯೋಗಿಗಳೊಂದಿಗೆ ದ್ವಿಚಕ್ರ ವಾಹನ ಉತ್ಪಾದನೆ ಪುನರಾರಂಭಿಸಿದ ಒಕಿನಾವ

ಒಕಿನಾವ ಶೇ.25 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಪೊರೇಟ್ ಕಚೇರಿ ಮತ್ತು ಉತ್ಪಾದನಾ ಘಟಕದಲ್ಲಿ ದ್ವಿಚಕ್ರ ಉತ್ಪಾದನೆಯನ್ನು ಹಂತ ಹಂತವಾಗಿ ಪುನಾರಂಭಿಸುತ್ತಿದೆ. ಒಕಿನಾವ ನೌಕರರು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

Most Read Articles

Kannada
English summary
Okinawa Resumes Production At 25 Percent Capacity After Lockdown Relaxations. Read in Kananda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X