ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಒಕಿನಾವ ಕಳೆದ ಮೇ ತಿಂಗಳಲ್ಲಿ 1,000ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿವೆ. ರಾಷ್ಟ್ರವ್ಯಾಪಿ ಇರುವ ಲಾಕ್‌ಡೌನ್ ನಿಯಮವನ್ನು ಸಡಿಲಿಕೆಗೊಳಿಸಿದಾಗ ಒಕಿನಾವ ತಮ್ಮ ಕಾರ್ಯಾಚರಣೆಯನ್ನು ಪುನಾರಂಭಿಸಿದ ಬಳಿಕ 1,000ಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟವಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿದರೂ ಕೈಗಾರಿಕಾ ವಾಲಯಕ್ಕೆ ಕೆಲವು ವಿನಾಯಿತಿಯನ್ನು ನೀಡಿ ಹೊಸ ಮಾರ್ಗಸೂಚಿಯಂತೆ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನರಾರಂಭಿಸಲು ಅನುಮತಿ ನೀಡಿತು. ಸರ್ಕಾರಾದ ಹೊಸ ಮಾರ್ಗಸೂಚಿಯಂತೆ ಒಕಿನಾವ ಕಂಪನಿಯು ದ್ವಿಚಕ್ರ ಉತ್ಪಾದನೆಯನ್ನು ಪುನರಾರಂಭಿಸಿದ್ದರು. ಒಕಿನಾವ ಶೇ.25 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಪೊರೇಟ್ ಕಚೇರಿ ಮತ್ತು ಉತ್ಪಾದನಾ ಘಟಕದಲ್ಲಿ ದ್ವಿಚಕ್ರ ಉತ್ಪಾದನೆಯನ್ನು ಪುನರಾರಂಭಿಸಿದ್ದರು.

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಕಂಪನಿಯ ವರದಿ ಪ್ರಕಾರ, ಒಕಿನಾವ ತಮ್ಮ ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿದ ನಂತರದ 1 ತಿಂಗಳ ಅವಧಿಯಲ್ಲಿ 1,200 ಕ್ಕೂ ಹೆಚ್ಚು ಇ-ಸ್ಕೂಟರ್‌ಗಳನ್ನು ಡೀಲರ್ ಗಳಿಗೆ ವಿತರಿಸಿದೆ.

MOST READ: ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಮೇ 11 ರಂದು ಕೇವಲ ಶೇ.25 ಉದ್ಯೋಗಿಗಳೊಂದಿಗೆ ಡೀಲರ್ ಗಳು ಮಾರಾಟವನ್ನು ಪುನಾರಂಭಿಸಿದ್ದರು. 350 ಮಾರಾಟ ಮಳಿಗೆಗಳಲ್ಲಿ ಶೇ.70 ರಷ್ಟು ಮಾತ್ರ ಮಾರಾಟ ಪಕ್ರಿಯೆಯನ್ನು ಪುನಾರಂಭಿಸಿದ್ದರು.

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇದರೊಂದಿಗೆ 2020ರ ಆರ್ಥಿಕ ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಒಕಿನಾವ ಬ್ರ್ಯಾಂಡ್ ಮುಂಚೂಣಿಯಲ್ಲಿದೆ ಎಂಬುವುದು ಈ ವರದಿಯಿಂದ ಸ್ಪಷ್ಟವಾಗಿದೆ. ಭಾರತದಲ್ಲಿ 10,000 ಇ-ಸ್ಕೂಟರ್ ಮಾರಾಟ ಮಾಡಿದ ಏಕೈಕ ಇವಿ ತಯಾರಕ ಒಕಿನಾವ ಆಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಒಕಿನಾವ ವ್ಯವಸ್ಥಾಪಕ ನಿರ್ದೇಶಕ ಜೀತೇಂದರ್ ಶರ್ಮಾ ಅವರು ಮಾತನಾಡಿ, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಸೀಮಿತ ಸಂಖ್ಯೆಯಲ್ಲಿ ಡೀಲರ್ ಗಳು ಕಾರ್ಯನಿರ್ವಹಿಸುತ್ತಿದ್ದರು 1000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದೇವೆ ಎಂದು ಹೇಳೀದರು.

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಒಕಿನಾವಾ ಆಟೋಟೆಕ್, ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಈ ಎಲೆಕ್ಟ್ರಿಕ್ ಮಾಕ್ಸಿ ಸ್ಕೂಟರ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಹೊಸ ಒಕಿನಾವಾ ಮ್ಯಾಕ್ಸಿ ಸ್ಕೂಟರ್ 3 ಕಿ.ವ್ಯಾಟ್ ಬ್ರಷ್‍‍ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಈ ಮೋಟರಿಗೆ 4 ಕಿ.ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಜೋಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 120 ಕಿ.ಮೀವರೆಗೆ ಚಲಿಸುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀಗಳಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಒಕಿನಾವ ಸ್ಕೂಟರ್‌ಗಳು ಕೂಡ ಉತ್ತಮವಾಗಿ ಮಾರಾಟವಾಗುತ್ತಿವೆ. ಅಲ್ಲದೇ ಒಕಿನಾವ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

Most Read Articles

Kannada
English summary
Okinawa Sells Over 1000 Electric Scooter After Resuming Operations In May. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X