ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಹೋಂಡಾ ಕಂಪನಿಯು ತನ್ನ ಬಿಎಸ್-6 ಗ್ರಾಜಿಯಾ ಮಾದರಿಯನ್ನು ಭಾರತೀಯ ಮಾರುಕಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೋಂಡಾ ಕಂಪನಿಯು ಹೊಸ ಗ್ರಾಜಿಯಾ ಸ್ಕೂಟರ್ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದೆ.

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಹೊಂಡಾ ಕಂಪನಿಯು ಬಿಡುಗಡೆಗೊಳಿಸಿದ ಟೀಸರ್ ವೀಡಿಯೋದಲ್ಲಿ ಬಿಎಸ್-6 ಗ್ರಾಜಿಯಾ ಸ್ಕೂಟರ್‌ನಲ್ಲಿ ಮಾಡಿದ ಕೆಲವು ಬದಲಾವಣೆಗಳನ್ನು ಪ್ರದರ್ಶಿಸಿದೆ. ಹೊಸ ಗ್ರಾಜಿಯ ಸ್ಕೂಟರ್‌ನಲ್ಲಿ ಆಲ್-ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ ಇರಿಸಲಾಗಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಟೀಸರ್ ವೀಡಿಯೋದಲ್ಲಿ ಹೊಸ ಗ್ರಾಜಿಯಾ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಹೊಸ ಹೋಂಡಾ ಗ್ರಾಜಿಯಾ ಅದೇ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಕೆಲವು ಸಣ್ಣ ಬದಲಾವಣೆಗಳಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದರ ಹಿಂದಿನ ಬಿಎಸ್-4 ಮಾದರಿಯ ಎಂಜಿನ್ 8.5 ಬಿಹೆಚ್‍ಪಿ ಪವರ್ ಮತ್ತು 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಟೀಸರ್ ವೀಡಿಯೊದ ಕೊನೆಯಲ್ಲಿ 'ಎ ಕೊಯೆಟ್ ರೆವಲ್ಯುಶನ್' ಎಂಬ ಪದಗಳನ್ನು ಸಹ ಉಲ್ಲೇಖಿಸಿದೆ. ಬಿಎಸ್-6 ಗ್ರಾಜಿಯಾ ಹೋಂಡಾದ ಎಸಿಜಿ ಸ್ಟಾರ್ಟರ್ ಅಥವಾ ಎಲೆಕ್ಟ್ರಿಕ್ ಸ್ಟ್ರಾರ್ಟ್ ತಂತ್ರಜ್ಞಾನವನ್ನು ಹೊಂದಿರುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಬಿಎಸ್-6 ಹೋಂಡಾ ಗ್ರಾಜಿಯಾ ಮಾದರಿಗಳು ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕ್ಲಸ್ಟರ್ ಅಲ್ಲಿ ಕ್ಲಾಕ್ ಮಾಹಿತಿ ಮತ್ತು ಸೈಡ್ ಸ್ಟ್ಯಾಂಡ್ ಸೂಚನೆ ಅನ್ನು ನೀಡುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಇವುಗಳನ್ನು ಸೇರಿದಂತೆ ಹಲವಾರು ಮಾಹಿತಿಯನ್ನು ವೀಡಿಯೋದಲ್ಲಿ ಪ್ರದರ್ಶಿಸಲಾಗಿದೆ. ಈ ಹೊಸ ಬಿಎಸ್-6 ಹೋಂಡಾ ಗ್ರಾಜಿಯಾ ಪ್ರೀಮಿಯಂ ಸ್ಕೂಟರ್ ಆಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೊಂಡಾ ಗ್ರಾಜಿಯ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.61,561 ಗಳಾಗಿದೆ.

ಬಿಎಸ್-6 ಮಾಲಿನ್ಯ ನಿಯಮ ಏಪ್ರಿಲ್ 1ರ ಗಡುವಿನ ಒಳಗಡೆ ಈ ಸ್ಕೂಟರ್ ಅನ್ನು ಈ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಹೋಂಡಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಈ ಸ್ಕೂಟರ್ ಹೆಸರನ್ನು ಅನ್‌ಲಿಸ್ಟ್ ಮಾಡಬೇಕಾಗಿತ್ತು .

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವಾರು ಪ್ರೀಮಿಯಂ ಮಾದರಿಗಳ ಮಾರಾಟವನ್ನು ಮಾಡಲಾಗುತ್ತಿದೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಐಷಾರಾಮಿ ಸೌಲಭ್ಯವುಳ್ಳ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಯ ಯೋಜನೆಯಲ್ಲಿದೆ.

ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಹೊಸ ಟೀಸರ್ ವೀಡಿಯೋದಲ್ಲಿ ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್‌ನ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಹೋಂಡಾ ಕಂಪನಿಯು ಶೀಘ್ರದಲ್ಲೇ ಈ ಹೊಸ ಗ್ರಾಜಿಯಾ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Honda Grazia BS6 Model Teaser Video Released. Read In Kannada.
Story first published: Thursday, June 18, 2020, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X