ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಅದು 2003-2005ರ ಆಸುಪಾಸು. ಪರ್ಫಾಮೆನ್ಸ್ ಬೈಕ್ ಪ್ರಿಯರ ಕೈಯಲ್ಲಿದ್ದ ಕರಿಜ್ಮಾ ಬೈಕ್‌ಗಳು ಹುಡುಗರ ಪಾಲಿನ ಹಾಟ್ ಫೇವರಿಟ್ ಆಗಿ ಗಮನ ಸೆಳೆದಿದ್ದವು. ಆದ್ರೆ ಬದಲಾದ ಮಾರುಕಟ್ಟೆಯಲ್ಲಿನ ಸನ್ನಿವೇಶಗಳಿಂದಾಗಿ ಕರಿಜ್ಮಾ ಬೈಕ್‌ಗಳನ್ನು ಯಾರು ಮಾತನಾಡಿಸುವವರೇ ಇಲ್ಲದಂತಾಯ್ತು. ಇದೇ ಕಾರಣಕ್ಕೆ ಕಳೆದ ಕೆಲ ತಿಂಗಳಷ್ಟೇ ಹೊಸ ವಿನ್ಯಾಸಗಳೊಂದಿಗೆ ಮರುಬಿಡುಗಡೆ ಮಾಡಿದ್ದರೂ ಕೂಡಾ ಕರಿಜ್ಮಾ ಬೈಕ್ ಮಾರಾಟ ಮಾತ್ರ ನೆಲಕಚ್ಚಿದೆ.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಹೌದು, ಈ ಹಿಂದೆ ಕರಿಜ್ಮಾ ಬೈಕ್‌ಗಳಿಗೆ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಮಾರಾಟ ಬಂದ್ ಮಾಡಿದ್ದ ಹೀರೋ ಸಂಸ್ಥೆಯು ಗ್ರಾಹಕರ ಒತ್ತಾಯದ ಮೇರೆಗೆ ಕಳೆದ ಮೇ ನಲ್ಲಿ ಹೊಸ ವಿನ್ಯಾಸ ಮತ್ತು ಗುಣಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಮರುಬಿಡುಗಡೆ ಮಾಡಿತ್ತು. ಈ ವೇಳೆ ಕರಿಜ್ಮಾ ಬೈಕ್ ಭಾರತದಲ್ಲಿ ಮತ್ತೊಮ್ಮೆ ಜನಪ್ರಿಯತೆ ಸಾಧಿಸಬಹುದು ಎಂದುಕೊಂಡಿದ್ದ ಹೀರೋ ಸಂಸ್ಥೆಗೆ ಇದೀಗ ಭಾರೀ ನಿರಾಶೆಯಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಗ್ರಾಹಕರ ನೀರಿಕ್ಷೆಯೆಂತೆ ಹೊಸ ಹೊಸ ಸೌಲಭ್ಯಗಳನ್ನು ಹೊತ್ತು ಬಂದಿದ್ದರೂ ಸಹ ಕರಿಜ್ಮಾ ಬೈಕ್ ನೀರಿಕ್ಷಿತ ಮಟ್ಟದ ಮಾರಾಟವನ್ನು ಗಿಟ್ಟಿಸಿಕೊಳ್ಳುವುದಿರಲಿ ಬಿಡುಗಡೆಯಾಗಿ ಆರು ತಿಂಗಳು ಕಳೆದರೂ ಕೂಡಾ ಮಾರಾಟದಲ್ಲಿ ಎರಡಂಕಿಯನ್ನು ಸಹ ದಾಟಿಲ್ಲವಂತೆ.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಮಾರಾಟದಲ್ಲಿ ಮುಗ್ಗರಿಸಿದ ಕರಿಜ್ಮಾ!

ಮಾಹಿತಿಗಳ ಪ್ರಕಾರ, ಹೀರೋ ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳು ಬಿಡುಗಡೆಯ ನಂತರ ಇದುವರೆಗೆ ಕೇವಲ 64 ಬೈಕ್‌ಗಳು ಮಾತ್ರವೇ ಮಾರಾಟವಾಗಿದ್ದು, ತಿಂಗಳಿಗೆ ಸರಾಸರಿ 10ರಿಂದ 11 ಬೈಕ್‌ಗಳು ಮಾರಾಟಗೊಂಡಿರುವುದು ಕರಿಜ್ಮಾ ಜನಪ್ರಿಯತೆ ಎಷ್ಟಿದೆ ಎಂದು ನೀವೇ ಊಹೆ ಮಾಡಿ.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಇನ್ನು 2018ರ ಆಟೋ ಎಕ್ಸ್‌ಪೋದಲ್ಲೇ ಕರಿಜ್ಮಾ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಜುಲೈ ಅಂತ್ಯದಲ್ಲಿ ಕರಿಜ್ಮಾ ಝೆಡ್ಎಂಆರ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಜೊತೆಗೆ ನವೀಕರಿಸಿದ ವಿನ್ಯಾಸಗಳು ಮತ್ತು ಡಿಸೈನ್‌ಗಳು ಬೈಕಿನ ಅಂದವನ್ನು ಹೆಚ್ಚಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿತ್ತು.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಹಾಗಾದ್ರೆ ಹಿನ್ನೆಡೆಗೆ ಕಾರಣ ಏನು?

ಹೀರೋ ಮೊಟೊಕಾರ್ಪ್ ಸಂಸ್ಥೆಯು ಹೊಸ ಕರಿಜ್ಮಾ ಬೈಕಿನಲ್ಲಿ ಸುಧಾರಿತ ವಿನ್ಯಾಸಗಳನ್ನು ಹೊರತುಪಡಿಸಿ ಬೈಕಿನ ಎಂಜಿನ್ ವಿಭಾಗದಲ್ಲಿ ಹಾಗೂ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳೇ ಗ್ರಾಹಕರನ್ನು ಸೆಳೆಯಲು ವಿಫಲವಾಗಿದೆ ಎನ್ನಬಹುದು.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಅಸಲಿಗೆ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ 125ಸಿಸಿ ಮೇಲ್ಪಟ್ಟ ಬೈಕ್‌ ಮತ್ತು ಸ್ಕೂಟರ್ ಮಾದರಿಗಳಲ್ಲಿ ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನ ಕಡ್ಡಾಯ ಮಾಡಲಾಗುತ್ತಿದ್ದು, ಹೀಗಿದ್ದರೂ 223 ಸಿಸಿ ಎಂಜಿನ್ ಹೊಂದಿರುವ ಕರಿಜ್ಮಾ ಬೈಕ್‌ಗಳಲ್ಲಿ ಎಬಿಎಸ್ ವ್ಯವಸ್ಥೆ ಇಲ್ಲದಿರುವುದು ಪರ್ಫಾಮೆನ್ಸ್ ಬೈಕ್ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಆದ್ರೆ ಎಬಿಎಸ್‌ಗೆ ಬದಲಾಗಿ ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಒದಗಿಸಿದ್ದ ಹೀರೋ ಸಂಸ್ಥೆಯು, ಏರಿಕ್ ಬ್ಯೂಲ್ ರೇಸಿಂಗ್ ಸಂಸ್ಥೆಯೊಂದಿಗೆ ಜೊತೆಗೂಡಿ ಹೊಸ ಕರಿಜ್ಮಾ ಬೈಕ್‌ಗಳನ್ನು ಮರುಬಿಡುಗಡೆಗೊಳಿಸಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ಹಿನ್ನಡೆ ಅನುಭವಿಸಿದೆ.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಕರಿಜ್ಮಾ ಬೈಕಿನ ಎಂಜಿನ್ ವೈಶಿಷ್ಟ್ಯತೆ

223ಸಿಸಿ ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಎಂಜಿನ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 19.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಜೊತೆಗೆ ಪ್ರತಿ ಗಂಟೆಗೆ 129 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಕರಿಜ್ಮಾ ಬೈಕ್‌ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪ್ರೋಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾರ್ಕ್ಸ್ ಸೌಲಭ್ಯವನ್ನ ನೀಡಲಾಗಿದ್ದು, ಬೈಕಿನ ಹೆಡ್‌ಲ್ಯಾಂಪ್ ವಿನ್ಯಾಸವೇ ಹೊಸ ಬೈಕಿನ ಮೊದಲ ಆಕರ್ಷಣೆಯಾಗಿದೆ ಎನ್ನಬಹುದು.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಕರಿಜ್ಮಾ ಝೆಡ್ಎಂಆರ್ ಬೆಲೆಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಹೀರೋ ಮೊಟೊಕಾರ್ಪ್ ಸಂಸ್ಥೆಯು ಕರಿಜ್ಮಾ ಝೆಡ್ಎಂಆರ್ ಬೈಕ್‌ಗಳಲ್ಲಿ ಎರಡು ವೆರಿಯೆಂಟ್‌ಗಳನ್ನು ಪರಿಚಯಿಸಿದ್ದು, ಸ್ಟ್ಯಾಂಡರ್ಡ್ ಬೈಕಿನ ಬೆಲೆಯನ್ನ ರೂ. 1.15 ಲಕ್ಷಕ್ಕೆ ಹಾಗೂ ಡ್ಯುಯಲ್ ಟೋನ್ ಮಾದರಿ ಬೆಲೆಯನ್ನು ರೂ. 1,18 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಯೆಂತೆ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದ ಕರಿಜ್ಮಾ ಹೊಸ ಬೈಕ್‌ ಬಜಾಜ್ ಪಲ್ಸರ್ 220ಎಫ್ ಬೈಕಿಗೆ ಪ್ರತಿಸ್ಪರ್ಧಿಯಾಗುವ ಗುಣಲಕ್ಷಣಗಳನ್ನು ಹೊಂದಿದ್ದರೂ ಸಹ ಹೊಸ ಬೈಕಿನಲ್ಲಿ ಎಬಿಎಸ್ ಸೌಲಭ್ಯ ಮತ್ತು ಕೆಲವು ಸುಧಾರಿತ ಸೌಲಭ್ಯಗಳು ಇಲ್ಲದಿರುವುದು ಗ್ರಾಹಕರ ಸೆಳೆಯುವಲ್ಲಿ ವಿಫಲವಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಕರಿಜ್ಮಾ ಬೈಕ್ ಮಾತನಾಡಿಸುವರೇ ಇಲ್ವಂತೆ..!

ಇದಲ್ಲದೇ ಕರಿಜ್ಮಾ ಬಿಡುಗಡೆಯ ನಂತರ ಹೀರೋ ಸಂಸ್ಥೆಯ ಮತ್ತೊಂದು ಬಹುನೀರಿಕ್ಷಿತ ಬೈಕ್ ಮಾದರಿಯಾದ ಎಕ್ಸ್‌ಟ್ರಿಮ್ 200ಆರ್ ಬೈಕ್ ಬಿಡುಗಡೆಯಾಗಿರುವುದು ಕೂಡಾ ಕರಿಜ್ಮಾ ಬೈಕ್ ಮಾರಾಟದ ಮೇಲೆ ವ್ಯತರಿಕ್ತ ಪರಿಣಾಮ ಬಿರಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹೀಗೆ ಇದ್ದಲ್ಲಿ ಕರಿಜ್ಮಾ ಮತ್ತೆ ಮಾರುಕಟ್ಟೆಯಿಂದ ನಿರ್ಗಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಿದ್ದವಾಗಿರುವ ಹೀರೋ ಅಡ್ವೆಂಚರ್ ಬೈಕ್ ಎಕ್ಸ್‌ಪಲ್ಸ್ 200 ಬೈಕ್ ಫೋಟೋ ಗ್ಯಾಲರಿ..!

Article Published On: Friday, October 26, 2018, 14:33 [IST]
English summary
Only 64 Units Of New Hero Karizma ZMR Bikes Sold Since May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+