ಮೆಟ್ರೋ ನಿಲ್ದಾಣಗಳಲ್ಲೇ ಇನ್ಮುಂದೆ ಬಾಡಿಗೆಗೆ ಸಿಗಲಿವೆ ಬೈಕ್..
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ಮುಂದೆ ಮೋಟರ್ ಬೈಕ್‌ಗಳನ್ನು ಬಾಡಿಗೆಗಾಗಿ ಪಡೆಯಬಹುದಾಗಿದ್ದು, ಮೊದಲ ಹಂತದಲ್ಲಿ ನಿರ್ಮಾಣವಾಗಿರುವ 36 ಮೆಟ್ರೋ ನಿಲ್ದಾಣಗಳಲ್ಲಿ ಈ ಹೊಸ ಸೌಲಭ್ಯಕ್ಕೆ ಚಾಲನೆ ಸಿಕ್ಕಿದೆ.
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ಮುಂದೆ ಮೋಟರ್ ಬೈಕ್‌ಗಳನ್ನು ಬಾಡಿಗೆಗಾಗಿ ಪಡೆಯಬಹುದಾಗಿದ್ದು, ಮೊದಲ ಹಂತದಲ್ಲಿ ನಿರ್ಮಾಣವಾಗಿರುವ 36 ಮೆಟ್ರೋ ನಿಲ್ದಾಣಗಳಲ್ಲಿ ಈ ಹೊಸ ಸೌಲಭ್ಯಕ್ಕೆ ಚಾಲನೆ ಸಿಕ್ಕಿದೆ.

ಕೇವಲ ಪೆಟ್ರೋಲ್ ಬೈಕ್‌ಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಕೂಡ ಬಾಡಿಗೆಗೆ ಪಡೆಯಬಹುದಾಗಿದ್ದು, ಬಾಡಿಗೆಗೆ ಪಡೆದ ನಂತರ ಹಿಂತಿರುಗಿಸಲು ಅದೇ ಮೆಟ್ರೋ ನಿಲ್ದಾಣಕ್ಕೆ ಹೋಗದೇ ನಗರದ ಇತರೆ ಯಾವುದಾದರೂ ಮೆಟ್ರೋ ನಿಲ್ದಾಣಗಳಲ್ಲಿ ಬೈಕ್ ಹಿಂತಿರುಗಿಸಬಹುದಾದ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ.

ಮೊದಲ ಬಾಡಿಗೆ ಬೈಕ್ ಪಡೆಯುವ ಯೋಜನೆಯನ್ನು ಕಳೆದ ಶುಕ್ರವಾರ ಕಬ್ಬನ್ ಪಾರ್ಕಿನಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದ್ದು, ರೆಂಟಲ್ ಬೈಕ್ಸ್ ಸಂಸ್ಥೆಯಾದ 'ಮೆಟ್ರೋ ಬೈಕ್ಸ್' ಬಾಡಿಗೆಗೆ ಬೈಕ್‌ಗಳನ್ನು ಒದಗಿಸಲಿದೆ.

ಇನ್ನು ಬಳಕೆದಾರರು ಹತ್ತಿರದಲ್ಲೇ ದೊರೆಯುವ ಬೈಕಿನ ಮಾಹಿತಿಗಾಗಿ ಮೊಬೈಲ್ ಆಪ್ ಅನ್ನು ಬಳಸಬಹುದಾಗಿದ್ದು, ಬಯೋಮ್ಯಾಟ್ರಿಕ್ ಆಕ್ಸಿಸ್, ಬ್ಲುಟೂತ್ ಲೋ ಎನರ್ಜಿ ಅಥವಾ ಹತ್ತಿರದ ಫೀಲ್ಡ್ ಕಮ್ಯುನಿಕೇಶನ್ ಸಹಾದದಿಂದ ತಿಳಿದುಕೊಳ್ಳಬಹುದಾಗಿದೆ.

ಮೊದಲ ಬಾರಿಗೆ ಬೈಕ್ ರೈಡ್ ಆರಂಭಗೊಳಿಸಲು ಆಪ್ ನಲ್ಲಿ ಒನ್ ಟೈಮ್ ಪಾಸ್‌ವಾರ್ಡ್ ಕೊಟ್ಟು ಪ್ರಾರಂಭಿಸಬಹುದಾಗಿದ್ದು, ಹಾಗೆಯೇ ಬೈಕ್ ರೈಡ್ ಕೊನೆಗೊಳಿಸಲು ಆಪ್ ನಲ್ಲಿ ಕಾಣುವ ಬೈಕ್ ಐಕಾನಿನ ಮೇಲೆ ಕ್ಲಿಕ್ ಮಾಡಬೇಕಾಗಿದೆ.

ಈ ಸೇವೆಯ ಬೆಲೆಗಳು ಪ್ರತಿ ಕಿಲೋ ಮೀಟರ್‌ಗೆ ರೂ.5 ಮತ್ತು ಇಂಧನವನ್ನು ಒಳಗೊಂಡಂತೆ ಪ್ರತಿ ನಿಮಿಷಕ್ಕೆ 50 ಪೈಸೆ ಚಾರ್ಜ್ ಮಾಡಲಿದೆ. ಹೀಗಾಗಿ ಬಳಸಿದ ಮೊತ್ತದ ಹಣವನ್ನು ಬಳಕೆದಾರರು ಆಪ್ ನಲ್ಲಿ ಲಿಂಕ್ ಮಾಡಿವಂತಹ ತಮ್ಮ ಅಕೌಂಟ್ ನಿಂದ ತೆಗೆದುಕೊಳ್ಳುವ ವ್ಯವಸ್ಥೆ ಕೂಡಾ ಹೊಂದಿರಲಿದೆ ಎಂದು ಮೆಟ್ರೋ ಬೈಕ್ಸ್ ಸಂಸ್ಥೆ ಹೇಳಿಕೊಂಡಿದೆ.


Click it and Unblock the Notifications








