ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್‌ನ ಮತ್ತೇರಡು ಹೊಸ ಬೈಕ್‌ಗಳು...

ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮೊದಲೇ ಮತ್ತೇರಡು ಜನಪ್ರಿಯ ಬೈಕ್ ಮಾದರಿಗಳ ಮುಂದುವರಿದ ಭಾಗವನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಪರಿಚಯಿಸುತ್ತಿದೆ.

By Praveen

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮೊದಲೇ ಮತ್ತೇರಡು ಜನಪ್ರಿಯ ಬೈಕ್ ಮಾದರಿಗಳ ಮುಂದುವರಿದ ಭಾಗವನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಪರಿಚಯಿಸುತ್ತಿದ್ದು, ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್‌ನ ಮತ್ತೇರಡು ಹೊಸ ಬೈಕ್‌ಗಳು...

ಕ್ಲಾಸಿಕ್ ಮೋಟಾರ್ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆ ತನ್ನ ವ್ಯಾಪರ ಮತ್ತು ವಹಿವಾಟಿನಲ್ಲಿ ಮಹತ್ವದ ಬದಲಾವಣೆ ತಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಂಡರ್ ಬರ್ಡ್ 500 ಎಕ್ಸ್ ಮಾದರಿ ಜೊತೆಗೆ ಟಂಡರ್‌ ಬರ್ಡ್ 300 ಎಕ್ಸ್ ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್‌ನ ಮತ್ತೇರಡು ಹೊಸ ಬೈಕ್‌ಗಳು...

ಸದ್ಯ ಟಂಡರ್‌ ಬರ್ಡ್ 500ಎಕ್ಸ್ ಹಾಗೂ ಟಂಡರ್ ಬರ್ಡ್ 300 ಎಕ್ಸ್ ಬೈಕ್ ಆವೃತ್ತಿಗಳನ್ನು ಪ್ರಮುಖ ಡೀಲರ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗಿದ್ದು, ಇದೇ ತಿಂಗಳು 28ಕ್ಕೆ ಭರ್ಜರಿಯಾಗಿ ಬಿಡುಗಡೆ ಮಾಡುವ ಬಗ್ಗೆ ರಾಯಲ್ ಎನ್‌ಫೀಲ್ಡ್ ಅಧಿಕೃತ ಮಾಹಿತಿ ನೀಡಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್‌ನ ಮತ್ತೇರಡು ಹೊಸ ಬೈಕ್‌ಗಳು...

ಡೀಲರ್ ಯಾರ್ಡ್‌ಗಳಲ್ಲಿ ಸೆರೆ ಸಿಕ್ಕ ಟಂಡರ್‌ಬರ್ಡ್ 500ಎಕ್ಸ್ ಹಾಗೂ ಟಂಡರ್‌ಬರ್ಡ್ 300ಎಕ್ಸ್ ಚಿತ್ರಗಳ ಪ್ರಕಾರ ಹೊಸ ಬೈಕ್‌ಗಳು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಬೈಕ್ ವಿನ್ಯಾಸಗಳನ್ನು ಸ್ಪೋರ್ಟ್ ಲುಕ್ ನೀಡಲಾಗಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್ ಮತ್ತೇರಡು ಹೊಸ ಬೈಕ್‌ಗಳು...

ಜೊತೆಗೆ ಹೊಸ ಬೈಕ್‌ಗಳಲ್ಲಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಮೂಲಕ ಫ್ಯೂಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಮೆರಗು ತಂದಿದೆ ತಪ್ಪಾಗಲಾರದು.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್ ಮತ್ತೇರಡು ಹೊಸ ಬೈಕ್‌ಗಳು...

ಇದಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯನ್ನು ಪ್ರಮುಖ ಮೂರು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಫ್ರಂಟ್ ಹಾಗೂ ಬ್ಯಾಕ್ ವೀಲ್ಹ್‌ಗಳಿಗೆ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್ ಮತ್ತೇರಡು ಹೊಸ ಬೈಕ್‌ಗಳು...

ಇನ್ನು ಎಂಜಿನ್ ಸಾಮರ್ಥ್ಯವನ್ನು ಈ ಹಿಂದಿನಂತಯೇ ಮುಂದುವರಿಸಲಾಗಿದ್ದು, 500ಎಕ್ಸ್‌ನಲ್ಲಿ 500-ಸಿಸಿ ಮತ್ತು 300ಎಕ್ಸ್‌ನಲ್ಲಿ 300-ಸಿಸಿ ಸಿಂಗಲ್ ಮತ್ತು ಸಿಲಿಂಡರ್ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಹೀಗಾಗಿ ಹಳೆಯ ಆವೃತ್ತಿಯಂತೆ ಹೊಸ ಬೈಕಿನಲ್ಲಿ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಿಲ್ಲ ಎಂಬುವುದು ಸ್ಪಷ್ಟವಾಗಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್ ಮತ್ತೇರಡು ಹೊಸ ಬೈಕ್‌ಗಳು...

ಬೆಲೆ (ಅಂದಾಜು)

ಹೊಸ ಬೈಕ್‌ಗಳ ಬೆಲೆ ಮಾಹಿತಿಗಳು ಅಧಿಕೃತವಾಗಿಲ್ಲವಾದರೂ ಕೆಲ ವರದಿಗಳ ಪ್ರಕಾರ ಪ್ರಸ್ತುತ ಟಂಡರ್‌ಬರ್ಡ್ ಆವೃತ್ತಿಗಳಿಂತ ರೂ. 15 ಸಾವಿರದಿಂದ ರೂ.20 ಸಾವಿರ ಹೆಚ್ಚಾಗಲಿವೆ ಎನ್ನಲಾಗಿದೆ.

ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿವೆ ರಾಯಲ್ ಎನ್‌ಫೀಲ್ಡ್ ಮತ್ತೇರಡು ಹೊಸ ಬೈಕ್‌ಗಳು...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್ ನಿರ್ಮಾಣ ಮತ್ತು ಮಾರಾಟ ತನ್ನದೇ ಆದ ಮುನ್ನಡೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬದಲಾದ ಮಾರುಕಟ್ಟೆ ಸನ್ನಿವೇಶಗಳಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಎಲ್ಲ ವರ್ಗಗಳನ್ನು ಸೆಳೆಯಬಹುದಾದ ಬೈಕ್‌ಗಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನಹರಿಸುತ್ತಿದೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

More from DriveSpark

Article Published On: Saturday, February 24, 2018, 10:24 [IST]
English summary
Royal Enfield Thunderbird 350X And 500X Launch Date: Expected Price, Specifications & Features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+