ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತನ್ನ ಹೊಸ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ. ಜಾಹಿರಾತಿಗಾಗಿ ವಿಡಿಯೊ ಶೂಟ್ ಮಾಡುವ ವೇಳೆ ಕಾಣಿಸಿಕೊಂಡಿದೆ. ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಪ್ರದರ್ಶಿಸಲಾಗಿದ್ದು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು ಭಾರತದ ಮೊದಲ ಯೂರೋಪಿಯನ್ ಶೈಲಿಯ ಕಟಿಂಗ್ ಎಡ್ಜ್ - ಮಾಕ್ಸಿ ಸ್ಕೂಟರ್ ಎಂಬ ಖ್ಯಾತಿಯನ್ನು ಪಡೆದಿರಲಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್‍ಲೆಸ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಹೊಸ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಹೆಡ್‍ಲ್ಯಾಂಪ್ಸ್ ನೊಂದಿಗೆ ಅಗಲವಾದ ಫ್ರಂಟ್ ಏಪ್ರಾನ್ ಅನ್ನು ಹೊಂದಿದ್ದು, ಬಾಡಿ ಮೌನ್ಟೆಡ್ ವಿಂಡ್‍ಸ್ಕ್ರೀನ್ ಹ್ಯಾಂಡಲ್‍‍ಬಾರ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಇದರ ಸೀಟ್ ವಿನ್ಯಾಸವು ಕೂಡ ವಿಶಾಲವಾಗಿದ್ದು ಪಿಲಿಯಾನ್ ಸೀಟ್ ಅನ್ನು ಪಡೆದಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್ 124.3ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 11.8 ಬಿಹೆಚ್‍ಪಿ ಮತ್ತು 10.8 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಸಿವಿಟಿ ಟ್ರ್ಯಾನ್ಸ್ ಮಿಶನ್‍‍ನೊಂದಿಗೆ ಜೋಡಿಸಲಾಗಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್ 2,055ಎಮ್ಎಮ್ ಉದ್ದ, 740ಎಮ್ಎಮ್ ಅಗಲ ಮತ್ತು 1,355ಎಮ್ಎಮ್ ಅಗಲ, 130ಎಮ್ಎಮ್ ಗ್ರೌಂಡ್ ಕಿಲಯರೆನ್ಸ್ ಅನ್ನು ಹೊಂದಿದ್ದು, ಜೊತೆಗೆ 10.5 ಲೀಟರ್ ಬೂಟ್ ಸ್ಪೇಸ್ ಅನ್ನು ಪಡೆದುಕೊಂಡಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ಪ್ರತಿ ಲೀಟರ್‍‍ಗೆ 45-50 ಕಿಲೋಮೀಟರ್ ಮೈಲೇಜ್ ನೀಡಲಿರುವ ಈ ಸ್ಕೂಟರ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 74,000 ಸಾವಿರ ಬೆಲೆ ಇರಬಹುದೆಂದು ಅಂದಾಜಿಸಲಾಗಿದ್ದು, ಮುಂದಿನ ತಿಂಗಳು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ.

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರಿಗೆ ಟಾಂಗ್ ನೀಡಲು ಬರಲಿದೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್..

ದೇಶದಲ್ಲಿನ ಯುವ ಸಮುದಾಯವನ್ನು ಸೆಳೆಯಲು ಸ್ಪೋರ್ಟಿ ಲುಕ್ ಮತ್ತು ಪ್ರೀಮಿಯಮ್ ವೈಶಿಷ್ಟ್ಯತೆಗಳನ್ನು ಪಡೆದಿರುವ ಈ ಸ್ಕೂಟರ್ ಮಾರುಕಟ್ಟೆಯಲ್ಲಿರುವ ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‍‍ಟಾರ್ಕ್ ಮತ್ತು ಎಪ್ರಿಲಿಯಾ ಎಸ್‍ಆರ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Source : Gaadiwaadi

Kannada
Read more on suzuki spy image
English summary
Suzuki burgman 125cc Scooter spied.
Story first published: Tuesday, June 12, 2018, 18:10 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more