ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಟೀಟ್ 125 ಸ್ಕೂಟರ್ ಇದೇ...

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತಮ್ಮ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಣೆಗೊಳಿಸಿ ಗ್ರಾಹಕರಲ್ಲಿ ಹೆಚ್ಚು ಕುತೂಹಲವನ್ನು ಸೃಷ್ಟಿ ಮಾಡಿದೆ.

By Rahul Ts

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತಮ್ಮ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಣೆಗೊಳಿಸಿ ಗ್ರಾಹಕರಲ್ಲಿ ಹೆಚ್ಚು ಕುತೂಹಲವನ್ನು ಸೃಷ್ಟಿ ಮಾಡಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಸುಜುಕಿ ಬರ್ಗ್‍‍ಮನ್ ಸ್ಟೀಟ್ 125 ಮ್ಯಾಕ್ಸಿ ಸ್ಕೂಟರ್ ಇದೇ ತಿಂಗಳ 19ರಂದು ಬಿಡುಗಡೆಗೊಳ್ಳಲಿದ್ದು, ಇದೀಗ ಸಂಸ್ಥೆಯ ಅಧಿಕೃತ ಶೋರಂ ಅನ್ನು ತಲುಪಿದೆ. ಈ ನಿಟ್ಟಿನಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍‍ಮನ್ಸ್ ಸ್ಟ್ರೀಟ್ 125 ಸ್ಕೂಟರ್‍‍ನ ಹೊಸ ಚಿತ್ರಗಳು ಮತ್ತು ಇನ್ನಿತರೆ ಮಾಹಿತಿಗಳು ಇಲ್ಲಿದೆ ನೋಡಿ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಮೋಟಾರ್ ಸೈಕಲ್ ವಿಭಾಗವು ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 125ಸಿಸಿ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದ್ದು, ಇದು ವಿದೇಶಿ ಮಾರುಕಟ್ಟೆಗಳಲ್ಲಿ 150ಸಿಸಿ, 180ಸಿಸಿ, 220ಸಿಸಿ ಮಾದರಿಯಲ್ಲೂ ಸಹ ಲಭ್ಯವಿವೆ. ಹೀಗಾಗಿ ಹೊಸ ಸ್ಕೂಟರ್‌ಗಳು ಪ್ರಸ್ತುತ ಲಭ್ಯವಿರುವ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಇನ್ನು ಸುಜುಕಿ ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಹೊಸ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಸ್ಕೂಟರ್ ಬೆಲೆಗಳು ಕೂಡಾ ಇತರೆ ಸ್ಕೂಟರ್‌ಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿದಂತೆ ಆಕ್ಸೆಸ್ 125 ಸ್ಕೂಟರ್‌ಗೆ ಸಮನಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 124ಸಿಸಿ ಎಂಜಿನ್ ಮೂಲಕ 8.6 ಬಿಎಚ್‌ಪಿ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಸಿವಿಟಿ ಗೇರ್‌ಬಾಕ್ಸ್ ಹೊಂದಿರಲಿವೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಇದರ ಜೊತೆಗೆ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಹೊಸ ಸುಜುಕಿ ಸ್ಕೂಟರ್‌ಗಳು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ರಚಿಸಲಾಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಎಬಿಎಸ್ ಆಯ್ಕೆ ರೂಪದಲ್ಲಿ ಲಭ್ಯವಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸುಜುಕಿ ಬರ್ಗ್‍‍ಮನ್ ಸ್ಕೂಟರ್ ಇದೇ...

ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.65 ಸಾವಿರದಿಂದ ರೂ.70 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಜುಲೈ 19ರಂದು ಸ್ಕೂಟರ್ ಬೆಲೆ ಜೊತೆಗೆ ಮತ್ತಷ್ಟು ತಾಂತ್ರಿಕ ಅಂಶಗ ನಿಖರ ಮಾಹಿತಿ ದೊರೆಯಲಿದೆ.

Article Published On: Friday, July 6, 2018, 13:34 [IST]
English summary
Suzuki burgman 125 maxi scooter spy images
Read more on suzuki scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+