ಜುಲೈ 19ಕ್ಕೆ ಬಿಡುಗಡೆಯಾಗಲಿರುವ ಸುಜುಕಿ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಸ್ಪೆಷಲ್ ಏನು?
ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ಹೊಸ ಸ್ಕೂಟರ್ ಒಂದನ್ನು ಬಿಡುಗಡೆ ಮಾಡುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಮಾದರಿಯನ್ನು ಪರಿಚಯಿಸುತ್ತಿದೆ.

ಫೆಬ್ರುವರಿನಲ್ಲಿ ನಡೆದಿದ್ದ 2018ರ ಆಟೋ ಎಕ್ಸ್ ಪೋ ಹೊಸ ಸ್ಕೂಟರ್ ಮಾದರಿಯ ಬಗೆಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಬಹಿರಂಗಗೊಳಿಸಿದ್ದ ಸುಜುಕಿ ಸಂಸ್ಥೆಯು, ಹೊಸ ಸ್ಕೂಟರ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿನ 125 ಸಿಸಿ ಸಾಮರ್ಥ್ಯದ ಸ್ಕೂಟರ್ ಆವೃತ್ತಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ಮುನ್ಸೂಚಣೆ ನೀಡಿದೆ.

150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಮೋಟಾರ್ ಸೈಕಲ್ ವಿಭಾಗವು ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಿದ್ದು, ಇದೇ ತಿಂಗಳು 19ಕ್ಕೆ ಹೊಸ ಸ್ಕೂಟರ್ ಬಿಡುಗಡೆಗೊಳಿಸುವ ಅಧಿಕೃತ ಮಾಹಿತಿ ಹೊರಹಾಕಿದೆ.

ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 125ಸಿಸಿ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದ್ದು, ಇದು ವಿದೇಶಿ ಮಾರುಕಟ್ಟೆಗಳಲ್ಲಿ 150ಸಿಸಿ, 180ಸಿಸಿ, 220ಸಿಸಿ ಮಾದರಿಯಲ್ಲೂ ಸಹ ಲಭ್ಯವಿವೆ. ಹೀಗಾಗಿ ಹೊಸ ಸ್ಕೂಟರ್‌ಗಳು ಪ್ರಸ್ತುತ ಲಭ್ಯವಿರುವ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಇನ್ನು ಸುಜುಕಿ ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಹೊಸ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಸ್ಕೂಟರ್ ಬೆಲೆಗಳು ಕೂಡಾ ಇತರೆ ಸ್ಕೂಟರ್‌ಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂಜಿನ್ ವೈಶಿಷ್ಟ್ಯತೆ
ಮೇಲೆ ಹೇಳಿದಂತೆ ಆಕ್ಸೆಸ್ 125 ಸ್ಕೂಟರ್‌ಗೆ ಸಮನಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 124ಸಿಸಿ ಎಂಜಿನ್ ಮೂಲಕ 8.6 ಬಿಎಚ್‌ಪಿ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಸಿವಿಟಿ ಗೇರ್‌ಬಾಕ್ಸ್ ಹೊಂದಿರಲಿವೆ.

ಇದರ ಜೊತೆಗೆ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಹೊಸ ಸುಜುಕಿ ಸ್ಕೂಟರ್‌ಗಳು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ರಚಿಸಲಾಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಎಬಿಎಸ್ ಆಯ್ಕೆ ರೂಪದಲ್ಲಿ ಲಭ್ಯವಿರಲಿದೆ.

ಬೆಲೆ (ಅಂದಾಜು)
ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.65 ಸಾವಿರದಿಂದ ರೂ.70 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಜುಲೈ 19ರಂದು ಸ್ಕೂಟರ್ ಬೆಲೆ ಜೊತೆಗೆ ಮತ್ತಷ್ಟು ತಾಂತ್ರಿಕ ಅಂಶಗ ನಿಖರ ಮಾಹಿತಿ ದೊರೆಯಲಿದೆ.

ಇತರೆ ಸ್ಕೂಟರ್‌ಗಳಿಂತ ಈ ಸ್ಕೂಟರ್ ಹೇಗೆ ಭಿನ್ನ?
ಹೌದು.. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ 125 ಸಿಸಿ ಸಾಮರ್ಥ್ಯದ ಸ್ಕೂಟರ್ ಮಾದರಿಗಳಿದ್ದು, ಬರ್ಗಮನ್ ಸ್ಟ್ರೀಟ್ ಇತರೆ ಮಾದರಿಗಳಿಂತ ಸಾಕಷ್ಟು ವಿಭಿನ್ನವಾಗಿದೆ. ಇದಕ್ಕೆ ಕಾರಣ, ಈ ಹಿಂದೆ ಬಿಡುಗಡೆಯಾಗಿದ್ದ ಇನ್‌ಟ್ರುಡರ್ 150 ಮಾದರಿಯಲ್ಲೇ ಕ್ರೂಸರ್ ವೈಶಿಷ್ಟ್ಯತೆಯನ್ನು ಇದು ಸಹ ಪಡೆದುಕೊಂಡಿದೆ.


Click it and Unblock the Notifications








