ಬೈಕ್ ಪ್ರಿಯರನ್ನು ಸೆಳೆದ ಅಗ್ಗದ ಬೆಲೆಯ ಸುಜುಕಿ ಜಿಕ್ಸರ್ ಎಬಿಎಸ್
ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಸದ್ಯದಲ್ಲೇ ವಿನೂತನ ಎಬಿಎಸ್ ಸೌಲಭ್ಯ ಹೊಂದಿರುವ ಎಂಟ್ರಿ ಲೆವೆಲ್ ಜಿಕ್ಸರ್ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದೆ.
ಜಿಕ್ಸರ್ ಬೈಕ್ ಸರಣಿಗಳ ಮೂಲಕ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಸದ್ಯದಲ್ಲೇ ವಿನೂತನ ಎಬಿಎಸ್ ಸೌಲಭ್ಯ ಹೊಂದಿರುವ ಎಂಟ್ರಿ ಲೆವೆಲ್ ಜಿಕ್ಸರ್ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದ್ದು, ಅಗ್ಗದ ಬೆಲೆಯಲ್ಲಿ ಎಬಿಎಸ್ ಸೌಲಭ್ಯವುಳ್ಳ ಬೈಕ್ ಖರೀದಿಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಬೈಕ್ ಮಾದರಿಯಾಗುವ ಸಾಧ್ಯತೆಗಳಿವೆ.

150ಸಿಸಿ ಯಿಂದ 160ಸಿಸಿ ಎಂಜಿನ್ ಹೊಂದಿರುವ ಹಲವು ಬೈಕ್ ಮಾದರಿಗಳು ಈಗಾಗಲೇ ಎಬಿಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಬೈಕ್‌ಗಳಿಗೆ ಟಾಂಗ್ ನೀಡಲು ಮುಂದಾಗಿರುವ ಸುಜುಕಿ ಸಂಸ್ಥೆಯು ಪ್ರಸ್ತುತ ಎಬಿಎಸ್ ಬೈಕ್ ಮಾದರಿಗಳಿಂತ ಜಿಕ್ಸರ್ 155 ಬೈಕಿನ ಬೆಲೆಗಳಲ್ಲಿ ಸಂಚಲನ ಸೃಷ್ಠಿಸಲು ಮುಂದಾಗಿದೆ.

ಕೆಲವು ವರದಿಗಳ ಪ್ರಕಾರ ಬಿಡುಗಡೆಯಾಗಲಿರುವ ಜಿಕ್ಸರ್ ಎಬಿಎಸ್ ಆವೃತ್ತಿಯು ಇತರೆ 150ಸಿಸಿ ಟು 160ಸಿಸಿ ಎಬಿಎಸ್ ಆವೃತ್ತಿಗಳಿಂತ 5 ಸಾವಿರ ರೂಪಾಯಿ ಕಡಿಮೆ ಬೆಲೆ ಪಡೆಯಲಿದೆ ಎನ್ನಲಾಗಿದ್ದು, ಸಿಂಗಲ್ ಚಾನೆಲ್ ಎಬಿಎಸ್ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕಿಗೆ ತೀವ್ರ ಪೈಪೋಟಿ ನೀಡಲಿದೆಯಂತೆ.

ಹೀಗಾಗಿ ಎಬಿಎಸ್ ಜಿಕ್ಸರ್ ಬೈಕ್‌ಗಳು ಬೆಲೆಯು ಎಕ್ಸ್‌ಶೋರಂ ಪ್ರಕಾರ 87 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಬೈಕಿನ ಬೆಲೆಯನ್ನು ಇತರೆ ಎಬಿಎಸ್ ಬೈಕ್‌ಗಳಿಗೆ ಹೋಲಿಕೆ ಮಾಡಿದ್ದಲ್ಲಿ ರೂ. 5 ಸಾವಿರ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಮಾರುಕಟ್ಟೆಯಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಪ್ರೇರಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬೆಲೆಯೇ ಎಕ್ಸ್‌ಶೋರಂ ಪ್ರಕಾರ 92,675 ಬೆಲೆ ಹೊಂದಿದ್ದು, 87 ಸಾವಿರ ಬಿಡುಗಡೆಯಾಗುತ್ತಿರುವ ಜಿಕ್ಸರ್ ಎಬಿಎಸ್ ಬೈಕ್‌ಗಳು ಗ್ರಾಹಕರನ್ನು ಸೆಳೆಯದೇ ಇರಲಾರವು.

ಇನ್ನು ನಾನ್ ಎಬಿಎಸ್ ಜಿಕ್ಸರ್ ಬೈಕ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಆನ್ ರೋಡ್ ಬೆಲೆಗಳ ಪ್ರಕಾರ ರೂ. 82,445ಕ್ಕೆ ಖರೀದಿ ಲಭ್ಯವಿದ್ದು, ಹೆಚ್ಚುವರಿಯಾಗಿ ನಾಲ್ಕು ಸಾವಿರ ಪಾವತಿಸಿದಲ್ಲಿ ಎಬಿಎಸ್ ಸೌಲಭ್ಯದ ಜಿಕ್ಸರ್ ಖರೀದಿ ಮಾಡಬಹುದಾಗಿದೆ.

ಬಿಡುಗಡೆ ಯಾವಾಗ?
ಎಬಿಎಸ್ ಪ್ರೇರಿತ ಜಿಕ್ಸರ್ ಬೈಕ್‌ಗಳನ್ನು ಸದ್ಯಕ್ಕೆ ಪರೀಕ್ಷಾರ್ಥವಾಗಿ ಸ್ಪಾಟ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಇದೇ ತಿಂಗಳು ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದೆ.

ಎಂಜಿನ್ ಸಾಮರ್ಥ್ಯ
154.9 ಸಿಸಿ ಎಂಜಿನ್ ಹೊಂದಿರುವ ಜಿಕ್ಸರ್ ಬೈಕ್‌ಗಳು ಪ್ರಮುಖ ಮೂರು ವಿಧಗಳಲ್ಲಿ ಖರೀದಿಗೆ ಲಭ್ಯವಿದ್ದು, ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಮತ್ತು ಮ್ಯಾಟೆ ಫೈಬ್ರಾನ್ ಆರೇಂಜ್ ಬ್ಲ್ಯಾಕ್ ಮಾದರಿಗಳನ್ನು ಹೊಂದಿದೆ. ಹೀಗಾಗಿ ಎಬಿಎಸ್ ಆವೃತ್ತಿಯನ್ನು ಸೇರ್ಪಡೆ ಮಾಡಲಾಗುತ್ತಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಅಗ್ಗದ ಬೆಲೆಯ ಎಬಿಎಸ್ ಬೈಕ್ ಆವೃತ್ತಿಗಳಿಗೆ ಭಾರೀ ಬೇಡಿಕೆ ಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಯೋಜನೆ ರೂಪಿಸಿರುವ ಸುಜುಕಿ ಸಂಸ್ಥೆಯು ಎಂಟ್ರಿ ಲೆವೆಲ್ ಜಿಕ್ಸರ್‌ಗಳಲ್ಲಿ ಅಗ್ಗದ ಬೆಲೆಯ ಎಬಿಎಸ್ ಸೌಲಭ್ಯ ಒದಗಿಸಿ ಗ್ರಾಹಕರನ್ನು ಸೆಳೆಯುವ ತಂತ್ರ ರೂಪಿಸಿದೆ.


Click it and Unblock the Notifications








