ಯಶಸ್ವಿ ಹಾದಿಯಲ್ಲಿ ಸಾಗಿದ ಸುಜುಕಿ ಹೊಚ್ಚ ಹೊಸ ಇನ್‌ಟ್ರುಡರ್
ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಜಿಕ್ಸರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಹೊರತಂದಿರುವ ಜಪಾನ್ ದೈತ್ಯ ದ್ವಿಚಕ್ರ ವಾಹನ ಸಂಸ್ಧೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ವಿಭಾಗದಲ್ಲೂ ಸಹ ಹೊಸ ನಮೂನೆಯ ಇನ್‌ಟ್ರುಡರ್ ಪರಿಚಯಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಇನ್‌ಟ್ರುಡರ್ 150ಸಿಸಿ ಕ್ರೂಸರ್ ಬೈಕ್ ಮಾದರಿಯು ಸುಜುಕಿ ನಿರ್ಮಾಣದ ಮತ್ತೊಂದು ಕ್ರೂಸರ್ ಬೈಕ್ ಎಂ1800ಆರ್ ಬೈಕಿನ ಡಿಸೈನ್ ಪ್ರೇರಣೆ ಪಡೆದುಕೊಂಡಿದ್ದು, ಸಾಂಪ್ರದಾಯಿಕ ಕ್ರೂಸರ್ ಮತ್ತು ಸ್ಟ್ರೀಟ್ ಫೈಟರ್ ವಿನ್ಯಾಸದ ಸಮ್ಮಿಶ್ರಣವನ್ನು ಪಡೆದಿದೆ.

ಸದ್ಯ ಭಾರತದಲ್ಲಿ ಸುಜುಕಿ ಸಂಸ್ಥೆಯು ಎಂಟ್ರಿ ಲೆವಲ್ ಹಯಾಟೆ, ಜಿಕ್ಸರ್ ಸರಣಿ ಪ್ಲಸ್ ಮತ್ತು ಸ್ಕೂಟರ್ ವಿಭಾಗದಲ್ಲಿ ಆಕ್ಸೆಸ್ 125, ಬರ್ಗಮನ್ ಸ್ಟ್ರೀಟ್ ಹಾಗೆಯೇ ಪ್ರೀಮಿಯಂ ಬೈಕ್ ವಿಭಾಗದಲ್ಲಿ ವಿ-ಸ್ಟ್ರೊಮ್ 650, ಹಯಾಬುಸಾ, ಜಿಎಸ್ಎಕ್ಸ್ಎಸ್ 1000 ಮತ್ತು ವಿ-ಸ್ಟ್ರೊಮ್ 1000 ಬೈಕ್ ಮಾರಾಟ ಮಾಡುತ್ತಿದ್ದು, ಇದರಲ್ಲಿ ಇನ್‌ಟ್ರುಡರ್ 150 ಕೂಡಾ ಪ್ರಮುಖ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಸುಜುಕಿ ಇನ್‌ಟ್ರುಡರ್ ಬೈಕ್ ಮಾದರಿಯು ಜಾಗತಿಕ ಕ್ರೂಸರ್ ಬೈಕ್‌ಗಳಿಗೆ ಹೊಸ ಆಯಾಮವನ್ನು ತುಂಬಿದ್ದು, ಈಗ ತನ್ನದೇ ಆದ ವಿಶಿಷ್ಟ ವಿನ್ಯಾಸದೊಂದಿಗೆ ಭಾರತದಲ್ಲೂ ಗಮನ ಸೆಳೆಯುತ್ತಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯು ದೈನಂದಿನ ಸೇರಿದಂತೆ ವಾರಂತ್ಯದ ಪ್ರಯಾಣಕ್ಕೂ ಸೂಕ್ತವೆನಿಸಲಿದೆ. ಹಾಗೆಯೇ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿಂದಲೂ ಕೂಡಿದೆ.

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

ಇದಲ್ಲದೇ ಶಕ್ತಿಯುತವಾದ ವಿನ್ಯಾಸ, ಇಂಧನ ಟ್ಯಾಂಕ್, ಕಡಿಮೆ ಎತ್ತರದ ಸೀಟು, ಹ್ಯಾಂಡಲ್‌ಬಾರ್, ಫೂಟ್ ಪೆಗ್, ಆರಾಮದಾಯಕ ಸೀಟು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಎಂಜಿನ್ ಸಾಮರ್ಥ್ಯ
154.9ಸಿಸಿ ಏರ್ ಕೂಲ್ಡ್, ಫ್ಯೂಲ್-ಇಂಜೆಕ್ಷ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ ಬೈಕ್, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 14.5 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇದರಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಅಂದ್ರೆ, ನಗರಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಡಿಸೈನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯಲ್ಲಿ ಎಸ್‌ಇಪಿ(ಸುಜುಕಿ ಇಕೋ ಪರ್ಫಾಮೆನ್ಸ್) ತಂತ್ರಜ್ಞಾನ ಹೊಂದಿರುವುದು ಬೈಕಿನ ಪರ್ಫಾಮನ್ಸ್ ಹೆಚ್ಚಿಸಿರುವುದಲ್ಲದೇ ಇಂಧನ ದಕ್ಷತೆಯನ್ನು ಸಹ ಹೆಚ್ಚಿಸಿದೆ.

ಬೈಕಿನಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದ ಚಕ್ರದಲ್ಲಿ ಮೊನೋಶಾರ್ಕ್ ಸಸ್ಷೆಷನ್ ಹೊಂದಿದೆ. ಹಾಗೆಯೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರದಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಅಳವಡಿಕೆ ಮಾಡಲಾಗಿದೆ.

ಈ ಮೂಲಕ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಆವೃತ್ತಿಯಾದ ಇನ್‌ಟ್ರುಡರ್ 150 ಬೈಕ್ ಮಾದರಿಯು, ಎಂಟ್ರಿ ಲೆವಲ್ ಕ್ರೂಸರ್ ಖರೀದಿಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ ಎಂಬುವುದು ನಮ್ಮ ಅಭಿಪ್ರಾಯ.


Click it and Unblock the Notifications