ಫೇಕ್ ISI ಹೆಲ್ಮೆಟ್‌ಗಳ ಕುರಿತು ಕೇಂದ್ರಕ್ಕೆ ಪತ್ರ ಬರೆದ ಸಚಿನ್ ತೆಂಡೂಲ್ಕರ್
ರಸ್ತೆ ಸುರಕ್ಷತೆ ಕುರಿತು ಪದೇ ಪದೆ ಜಾಗೃತಿ ಮೂಡಿಸುತ್ತಾ ಸುದ್ದಿಯಲ್ಲಿರುವ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಇದೀಗ ಕೇಂದ್ರಕ್ಕೆ ಪತ್ರ ಬರೆದು ಮತ್ತೆ ಸುದ್ದಿಯಲ್ಲಿದ್ದಾರೆ.
ರಸ್ತೆ ಸುರಕ್ಷತೆ ಕುರಿತು ಪದೇ ಪದೆ ಜಾಗೃತಿ ಮೂಡಿಸುತ್ತಾ ಸುದ್ದಿಯಲ್ಲಿರುವ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಇದೀಗ ಕೇಂದ್ರಕ್ಕೆ ಪತ್ರ ಬರೆದು ಮತ್ತೆ ಸುದ್ದಿಯಲ್ಲಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವ ಕುರಿತು ಜಾಗೃತಿ ಅಭಿಯಾನಯೊಂದನ್ನು ಆರಂಭಿಸಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಇದೀಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ನಕಲಿ ಐಎಸ್ಐ ಮುದ್ರಿತ ಹೆಲ್ಮೆಟ್ ತಯಾಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿರುವ ಸಚಿನ್ ತೆಂಡೂಲ್ಕರ್, ದೇಶದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳಲ್ಲಿ ಬಹುತೇಕ ಬೈಕ್ ಸವಾರರು ಸರಿಯಾದ ಸುರಕ್ಷಾ ಕ್ರಮಗಳಿಲ್ಲದೇ ದುರ್ಮರಣಕ್ಕಿಡುತ್ತಿದ್ದಾರೆ. ಹೀಗಾಗಿ ಬೈಕ್ ಸವಾರರಿಗೆ ಗುಣಮಟ್ಟ ಹೆಲ್ಮೆಟ್‌ಗಳು ಮಾತ್ರ ಸಂಪೂರ್ಣ ಸುರಕ್ಷೆ ನೀಡಬಲ್ಲವು ಎಂದಿದ್ದಾರೆ.

ಜೊತೆಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸಿ ನಕಲಿ ಐಎಸ್ಐ ಮುದ್ರೆಯೊಂದಿಗೆ ಮಾರಾಟ ಮಾಡುತ್ತಿರುವ ತಯಾಕರು ಮತ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದ್ದು, ಒಬ್ಬ ಕ್ರೀಡಾಪಟುವಾಗಿ ಸುರಕ್ಷಾ ಕ್ರಮಗಳ ಬಳಕೆ ಎಷ್ಟು ಮಹತ್ವ ಎನ್ನುವುದು ನನಗೆ ತಿಳಿದೆ ಎಂದಿದ್ದಾರೆ.

ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ, ಭಾರತದಲ್ಲಿ ಸುಮಾರು 70% ರಷ್ಟು ಬೈಕ್ ಸವಾರರು ಕಳಪೆ ಹೆಲ್ಮೆಟ್ ಖರೀದಿಸಿ ಜೀವ ಕಳೆದುಕೊಳ್ಳುತ್ತಿದ್ದರೂ ಅಗ್ಗದ ಬೆಲೆಯ ಹೆಲ್ಮೆಟ್ ಖರೀದಿ ಪ್ರಕ್ರಿಯೆ ಮಾತ್ರ ಎಗ್ಗಿಲ್ಲದೇ ನಡೆಯುತ್ತಲೇ ಇದೆ.

ಇದರಿಂದ ದ್ವಿಚಕ್ರ ಸವಾರರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕೆಯಿದ್ದು, 2016ರ ಅಪಘಾತದಲ್ಲಿ ಶೇ.30 ಮಂದಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಬಹುತೇಕರು ಗುಣಮಟ್ಟದ ಹೆಲ್ಮೆಟ್ ಇಲ್ಲದ ಕಾರಣಕ್ಕೆಯೇ ಸಾವನ್ನಪ್ಪಿದ್ದು, ಇದಕ್ಕಾಗಿ ಗುಣಮಟ್ಟದ ಹೆಲ್ಮೆಟ್‌ಗಳೇ ಪರಿಹಾರ ಎನ್ನುವುದು ಸಚಿನ್ ಕಳಕಳಿ.

ಈ ಹಿನ್ನೆಲೆ ನಕಲಿ ಹೆಲ್ಮೆಟ್ ತಯಾಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಸಚಿನ್ ತೆಂಡೂಲ್ಕರ್, ದ್ವಿಚಕ್ರ ವಾಹನ ಸವಾರರು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಖರೀದಿ ಮಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವೇ ಉತ್ತಮಗುಣಮಟ್ಟದ ಹೆಲ್ಮೆಟ್‌ಗಳನ್ನು ಕಡಿಮೆ ಬೆಲೆಗೆ ಒದಗಿಸಬೇಕು ಎಂದು ಕೋರಿದ್ದಾರೆ.

ಇನ್ನು ಈ ಹಿಂದೆಯೂ ಹಲವು ಬಾರಿ ರಸ್ತೆ ನಿಯಮಗಳ ಪಾಲನೆ ಬಗ್ಗೆ ಮತ್ತು ಗುಣಮಟ್ಟದ ಹೆಲ್ಮೆಟ್‌ಗಳ ಬಳಕೆ ಕುರಿತು ಸಾಕಷ್ಟು ಜಾಗೃತಿ ಅಭಿಯಾನಗಳನ್ನು ಕೈಗೊಂಡಿರುವ ಸಚಿನ್ ಅವರು, ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವ ಇದೀಗ ಫೇಕ್ ಐಎಸ್ಐ ಹೆಲ್ಮೆಟ್‌ಗಳ ವಿರುದ್ಧ ಅಭಿಯಾನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


Click it and Unblock the Notifications








