ಭಾರಿ ಮೊತ್ತಕ್ಕೆ ಬಿಡ್ ಆದ ಟರ್ಮಿನೇಟರ್ 2 ಸಿನಿಮಾದಲ್ಲಿನ ಹಾರ್ಲೆ ಡೇವಿಡ್‍ಸನ್ ಬೈಕ್..
ಟರ್ಮಿನೇಟರ್ 2 ಹಾಲಿವುಡ್ ಸಿನಿಮಾದಲ್ಲಿ ಬಳಸಲಾದ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ಅನ್ನು ಚಿತ್ರ ತಂಡವು ಹರಾಜಿಗೆ ಇಟ್ಟಿದ್ದು, ನಿರೀಕ್ಷೇಗಿಂತ ಹೆಚ್ಚಿನ ಮೊತ್ತಕ್ಕೆ ಈ ಬೈಕ್ ಮಾರಾಟವಾಗಿದೆ.
ಟರ್ಮಿನೇಟರ್ 2 ಹಾಲಿವುಡ್ ಸಿನಿಮಾದಲ್ಲಿ ಬಳಸಲಾದ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ಅನ್ನು ಚಿತ್ರ ತಂಡವು ಹರಾಜಿಗೆ ಇಟ್ಟಿದ್ದು, ನಿರೀಕ್ಷೇಗಿಂತ ಹೆಚ್ಚಿನ ಮೊತ್ತಕ್ಕೆ ಈ ಬೈಕ್ ಮಾರಾಟವಾಗಿದೆ. ಹರಾಜಿಗೆ ಇಟ್ಟ ಈ ಬೈಕ್ ಎಷ್ಟರ ಮೊತ್ತಕ್ಕೆ ಮಾರಟವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಂದಿನ ಲೇಖನದಲ್ಲಿ.

ನಿರ್ದೇಶಕ ಜೇಮ್ಸ್ ಕೆಮರಾನ್ ಟೈಟಾನಿಕ್, ಅವತಾರ್ ಮತ್ತು ಇನ್ನಿತರೆ ಹಿಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ನೀಡಿದ್ದು, 1991 ರಲ್ಲಿ ಆತ ನಿರ್ಧೇಶಿಸಿದ ಟರ್ಮಿನೇಟರ್ 2 ಚಿತ್ರವು ಕೂಡ ಭಾರತ ಸೇರಿಸಿ ಜಾಗತಿಕವಾಗಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಟರ್ಮಿನೇಟರ್ 2 ಚಿತ್ರದಲ್ಲಿ ನಟ ಅರ್ನಾಲ್ಡ್ ಬಳಸಿದ ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯ ಜನಪ್ರಿಯ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ಅನ್ನು ಇದೀಗ ಚಿತ್ರ ತಂಡವು ಹರಾಜಿಗೆ ಇಟ್ಟಿದೆ.

ಚಿತ್ರದಲ್ಲಿ ನಟ ಅರ್ನಾಲ್ಡ್ ನೊಂದಿಗೆ ಕಾಣಿಸಿಕೊಂಡ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ಅನ್ನು ಹರಾಜಿಗೆ ಇಟ್ಟಾಗ ಅದು 1.3 ಅಥವ 1.2 ಕೋಟಿಗೆ ಹರಾಜಿನಲ್ಲಿ ಬಿಡ್ ಆಗುತ್ತದೆ ಎಂದು ತಿಳಿದಿದ್ದರು. ಆದರೆ ಈ ಬೈಕ್ ಹರಾಜಿನಲ್ಲಿ 3.3 ಕೋಟಿ ಮೊತ್ತಕ್ಕೆ ಬಿಡ್ ಆಗಿರುವುದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

1991ರಲ್ಲಿ ಬಳಸಲಾದ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ಇನ್ನು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ಬೈಕಿನ ಕೆಲವೊಂದು ಕಡೆ ಸಣ್ಣದಾದ ಗೆರೆಗಳು ಮಾತ್ರ ಇವೆ. ಹಾಗೆಯೆ ಮಾಹಿತಿಗಳ ಪ್ರಕಾರ ಚಿತೀಕರಣದ ನಂತರ ಈ ಬೈಕ್ ಅನ್ನು ಎಲ್ಲು ಬಳಸಲಿಲ್ಲವಾದ ಕಾರಣದಿಂದ 1,000ಕ್ಕಿಂತ ಕಾಡಿಮೆ ದೂರ ಚಲಿಸಿದೆ ಎನ್ನಲಾಗಿದೆ.

ಫ್ಯಾಟ್ ಬಾಯ್ ಮೋಟಾರ್‍ಸೈಕಲ್ ಹಾರ್ಲೆ ಡೇವಿಡ್‍ಸನ್ ಸಂಸ್ಥೆಯಲ್ಲಿನ ಜನಪ್ರಿಯ ಬೈಕ್ ಅಗಿದ್ದು, ಟರ್ಮಿನೇಟರ್ 2 ಚಿತ್ರದಲ್ಲಿ ನಟ ಆರ್ನಾಲ್ಡ್ ಬಳಸಿದ ನಂತರ ಮರುಕಟ್ಟೆಯಲ್ಲಿ ಇನ್ನಷ್ಟು ಹೈಪ್ ಕ್ರಿಯೆಟ್ ಮಾಡಿತು.

ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 18.11 ಲಕ್ಷಕ್ಕೆ ಮಾರಾಟವಾಗುತ್ತಿದ್ದು, 2,370ಎಮ್ಎಮ್ ಉದ್ದ, 990ಎಮ್ಎಮ್ ಅಗಲ, 1095ಎಮ್ಎಮ್ ಎತ್ತರವನ್ನು ಮತ್ತು 115ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಈ ಬೈಕ್ ಪದೆದುಕೊಂಡಿದೆ.

ವೈಶಿಷ್ಟ್ಯತೆಗಳು
ಫ್ಯಾಟ್ ಬಾಯ್ ಬೈಕ್‍ನಲ್ಲಿ ಡಿಜಿಟಲ್ ಅನಾಲಾಗ್ ಟಾಚೋಮೀಟರ್ ಅನ್ನು ಅಳವಡಿಸಲಾಗಿದ್ದು. ಗೇರ್ ಇಂಡಿಕೇಟರ್, ಫ್ಯುಯಲ್ ವಾರ್ನಿಂಗ್ ಇಂಡಿಕೇಟರ್, ಲೋ ಬ್ಯಾಟರಿ ಇಂಡಿಕೇಟರ್, ಪಿಲಿಯಾನ್ ಸೀಟ್ ಮಾತು ಪಿಲಿಯಾನ್ ಗ್ರಾಬ್‍ರೈಲ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ 1745.0ಸಿಸಿ 2 ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 65ಬಿಹೆಚ್‍ಪಿ ಮತ್ತು 144ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಯ್ ಬೈಕ್ 3.3 ಲೀಟರ್ ಫ್ಯುಯಲ್ ಕೆಪಾಸಿಟಿಯನ್ನು ಪಡೆದಿದ್ದು, ಪ್ರತೀ ಲೀಟರ್‍ಗೆ 15 ಕಿಲೋಮೀಟರ್ ಮೈಲೇಜ್ ನೀಡುತ್ತದೆ.


Click it and Unblock the Notifications








