ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

ಭಾರತೀಯ ಮಾರುಕಟ್ಟೆಯು ಮಧ್ಯಮ ಗಾತ್ರದ ಬೈಕ್ ಮತ್ತು ಸ್ಕೂಟರ್ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರಲ್ಲೂ ಕಳೆದ ಜೂನ್ ಅವಧಿಯಲ್ಲಿ ಮಾರಾಟಗೊಂಡಿರುವ ಟಾಪ್ 10 ಬೈಕ್‌ಗಳ ಪಟ್ಟಿಯು ಅಚ್ಚರಿಗೆ ಕಾರಣವಾಗಿದೆ.

By Praveen Sannamani

ಭಾರತೀಯ ಮಾರುಕಟ್ಟೆಯು ಮಧ್ಯಮ ಗಾತ್ರದ ಬೈಕ್ ಮತ್ತು ಸ್ಕೂಟರ್ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರಲ್ಲೂ ಕಳೆದ ಜೂನ್ ಅವಧಿಯಲ್ಲಿ ಮಾರಾಟಗೊಂಡಿರುವ ಟಾಪ್ 10 ಬೈಕ್‌ಗಳ ಪಟ್ಟಿಯು ಅಚ್ಚರಿಗೆ ಕಾರಣವಾಗಿದೆ. 2018ರ ಅವಧಿಯಲ್ಲಿನ ಇತರೆ ತಿಂಗಳಲ್ಲಿ ಮಾರಾಟಗೊಂಡ ಬೈಕ್ ಸಂಖ್ಯೆಗಳಿಗಿಂತ ಜೂನ್ ಅವಧಿಯಲ್ಲಿ ಅತಿ ಬೈಕ್‌ಗಳು ಮಾರಾಟವಾಗಿದ್ದು, ಟಾಪ್ 1ರಲ್ಲಿ ಅಚ್ಚರಿ ಹೆಸರು ಕೇಳಿಬಂದಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮೋಟಾರ್‌ಸೈಕಲ್ ಮತ್ತು ಹೀರೋ ಮೋಟೊಕಾರ್ಪ್ ಸಂಸ್ಥೆಯ ನಡುವೆ ಭಾರೀ ಪೈಪೋಟಿ ಇದ್ದು, ಕಳೆದ ಕೆಲ ತಿಂಗಳಿನಿಂದ ಅಗ್ರಸ್ಥಾನದಲ್ಲಿದ್ದ ಹೀರೋ ಸ್ಲೈಂಡರ್ ಈ ಬಾರಿ ಆಕ್ಟಿವಾ ಸ್ಕೂಟರ್ ಅಬ್ಬರದ ಮುಂದೆ ನೆಲಕಚ್ಚಿದೆ. ಆದರೂ ಟಾಪ್ 5ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ಸ್ಪೈಂಡರ್, ಹೆಚ್‌ಎಫ್ ಡಿಲಕ್ಸ್ ಮತ್ತು ಪ್ಯಾಷನ್ ಬೈಕ್‌ಗಳ ಮಾರಾಟದಲ್ಲಿನ ತನ್ನ ಜನಪ್ರಿಯತೆಯನ್ನ ಇದುವರೆಗೂ ಕಳೆದುಕೊಂಡಿಲ್ಲ. ಹಾಗಾದ್ರೆ ಟಾಪ್ 10 ಪಟ್ಟಿಯಲ್ಲಿ ಬೈಕ್‌ಗಳು ಯಾವವು?ಮತ್ತು ಜೂನ್ ಅವಧಿಯಲ್ಲಿ ಮಾರಾಟಗೊಂಡ ಬೈಕ್‌ಗಳು ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

01. ಹೋಂಡಾ ಆಕ್ಟಿವಾ

ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ಆಕ್ಟಿವಾ 5ಜಿ ಸ್ಕೂಟರ್‌ಗಳು ಸದ್ಯ ಯುವ ಸಮುದಾಯದ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಸ್ಪೈಂಡರ್ ಬೈಕ್‌ಗಳನ್ನು ಹಿಂದಿಕ್ಕುವ ಮೂಲಕ ಜೂನ್ ಅವಧಿಯಲ್ಲಿ ಹೋಂಡಾ ಸಂಸ್ಥೆಯು 2,92,294 ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

02. ಹೀರೋ ಸ್ಪೈಂಡರ್

ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪೈಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ಜೂನ್ ಅವಧಿಯಲ್ಲಿ ಆಕ್ಟಿವಾ ಸ್ಕೂಟರ್ ಮಾರಾಟಕ್ಕಿಂತ ಕಡಿಮೆ ಬೇಡಿಕೆಯನ್ನು ಪಡೆದುಕೊಂಡಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಮೂಲಕ 2,78,169 ಬೈಕ್‌ಗಳನ್ನು ಮಾರಾಟ ಮಾಡಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

03. ಹೀರೋ ಹೆಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ಜೂನ್ ತಿಂಗಳಿನಲ್ಲಿ ಬರೋಬ್ಬರಿ 1,82,883 ಬೈಕುಗಳು ಮಾರಾಟವಾಗುವ ಮೂಲಕ ಟಾಪ್ 3 ಸ್ಥಾನಕ್ಕೆರಿದ್ದು, ಕೆಲವು ತಿಂಗಳಿನಿಂದಲೂ ಟಾಪ್ 10ರ ಪಟ್ಟಿಯಲ್ಲಿ 3 ಅಥವಾ 4 ಸ್ಥಾನದಲ್ಲೇ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

04. ಹೀರೋ ಪ್ಯಾಶನ್

ಜೂನ್ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 97,715 ಪ್ಯಾಶನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಶನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ ಟಿಆರ್ ಮತ್ತು ಪ್ರೊ ಐಎಸ್3 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

05. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ಜೂನ್ ತಿಂಗಳಿನಲ್ಲಿ 96,505 ಬೈಕ್‌ಗಳು ಮಾರಾಟವಾಗಿದ್ದು, ತಾಂತ್ರಿಕವಾಗಿ ಅತ್ಯುತ್ತಮ ಮಟ್ಟದಲ್ಲಿರುವ ಹೋಂಡಾ ಸಿಬಿ ಶೈನ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

06. ಬಜಾಜ್ ಪಲ್ಸರ್

ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿದ್ದು, ಇದರಲ್ಲಿ ಪಲ್ಸರ್ 135 ಮತ್ತು ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ಜೂನ್ ಅವಧಿಯಲ್ಲಿ ಬಜಾಜ್ ಸಂಸ್ಥೆಯು 71,539 ಬೈಕ್‌ಗಳನ್ನ ಮಾರಾಟ ಮಾಡಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

07. ಟಿವಿಎಸ್ ಎಕ್ಸ್ಎಲ್ ಸೂಪರ್

ಗ್ರಾಮೀಣ ವಿಭಾಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟಿವಿಎಸ್ ಎಕ್ಸ್‌ಎಲ್ ಸೂಪರ್ ಬೈಕ್‌ಗಳು ಮಾರಾಟದಲ್ಲಿ ಇತರೆ ಜನಪ್ರಿಯ ಬೈಕ್‌ಗಳನ್ನೇ ಹಿಂದಿಕ್ಕಿದ್ದು, ಜೂನ್ ಅವಧಿಯಲ್ಲಿ ಬರೋಬ್ಬರಿ 66,791 ಬೈಕ್‌ಗಳು ಮಾರಾಟಗೊಳ್ಳುವ ಮೂಲಕ 7 ಸ್ಥಾನಕ್ಕೆ ಬಡ್ತಿ ಪಡೆದಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

08. ಬಜಾಜ್ ಸಿಟಿ 100

ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್ ಒಟ್ಟು 3 ವಿವಿಧ ನಮೂನೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಸಿಟಿ ಬೈಕ್‌ಗಳು ಜೂನ್ ಅವಧಿಯಲ್ಲಿ 66,314 ಬೈಕ್‌ಗಳು ಮಾರಾಟಗೊಂಡಿವೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

09. ಹೀರೋ ಗ್ಲ್ಯಾಮರ್

ಜೂನ್ ಅವಧಿಯಲ್ಲಿ ಬರೋಬ್ಬರಿ 63,417 ಹೀರೋ ಗ್ಲ್ಯಾಮರ್ ಬೈಕ್‌ಗಳು ಮಾರಾಟಗೊಂಡಿದ್ದು, ಕಳೆದ ಎರಡು ತಿಂಗಳ ಹಿಂದಿನ ಬೈಕ್ ಮಾರಾಟಕ್ಕೆ ಹೋಲಿಕೆ ಮಾಡಿದಾಗ ಸಿಟಿ 100 ಬೈಕಿಗಿಂತ ಕಡಿಮೆ ಮಾರಾಟ ದಾಖಲೆ ಮಾಡಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಮತ್ತೆ ಟ್ರೆಂಡ್ ಸೃಷ್ಠಿಸಿದ ಹೋಂಡಾ ಆಕ್ಟಿವಾ

10. ಟಿವಿಎಸ್ ಜೂಪಿಟರ್

ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ ನಂತರದ ಸ್ಥಾನದಲ್ಲಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 10 ಸ್ಥಾನದಲ್ಲಿದ್ದು, ಇದರೊಂದಿಗೆ ಇನ್ನು ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಸಹ ಭಾರತದಲ್ಲಿ ಉತ್ತಮ ಮಾದರಿಯ ಬೈಕ್ ಮಾರಾಟ ಪ್ರಕ್ರಿಯೆ ದಾಖಲಿಸಿವೆ.

More from DriveSpark

Article Published On: Tuesday, July 24, 2018, 19:39 [IST]
English summary
Top-Selling Bikes In India For June 2018 — Honda Activa Reclaims Top Spot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+