ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಚೆನ್ನೈ ಮೂಲದ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟಾರ್ಸ್ ತಮ್ಮ ಗ್ರಾಹಕರಿಗೆ ಅನುಗುಣವಾಗುವಂತೆ ದ್ವಿಚಕ್ರ ವಾಹನಗಳನು ಪರಿಚಯಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ತಮ್ಮ ಜನಪ್ರಿಯ ಜುಪಿಟರ್ ಸ್ಕೂಟಾರಿನ ಹೊಸ ವೇರಿಯಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಮುಂದಾಗಿದೆ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಟಿವಿಎಸ್ ಮೋಟಾರ್ಸ್ ಕಂಪೆನಿಯು ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಆದ ಗ್ರಾಂಡೆ ಎಡಿಷನ್ ಈಗಾಗಲೆ ಡೀಲರ್‍‍ಗಳ ಯಾರ್ಡ್ ಅನ್ನು ತಲುಪಿದ್ದು, ನವೀಕರಿಸಲಾದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಟಿವಿಎಸ್ ಜುಪಿಟರ್ ಗ್ರಾಂಡೆ ಎಡಿಷನ್ ಸ್ಕೂಟರ್ ಹೊರ ವಿನ್ಯಾಸದಲ್ಲಿ ನವೀಕರಣವನ್ನು ಪಡೆದುಕೊಂಡಿದ್ದು, ಪ್ರಮುಖವಾಗಿ ಗಮನಿಸಿದ್ದಲ್ಲಿ ಗಾಡಿಯ ಫ್ರಂಟ್ ಏಪ್ರಾನ್‍‍ನಲ್ಲಿ ಗ್ರಾಂಡೆ ಬ್ಯಾಡ್ಜಿಂಗ್ ಮತ್ತು ಹೊಸ ಕಲರ್ ಸ್ಕೀಮ್ ಅನ್ನು ಪಡೆದುಕೊಂಡಿದೆ. ಈ ಸ್ಕೂಟರ್ ಫ್ಲೋರ್‍‍ಬೋರ್ಡ್ ಮತ್ತು ಫೂಟ್‍ರೆಸ್ಟ್ ಮೇಲೆ ಉಣ್ಣೆಯ ಬಣ್ಣವನ್ನು ಒದಗಿಸಲಾಗಿದೆ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಟಿವಿಎಸ್ ಜುಪಿಟರ್ ಗ್ರಾಂಡೆ ಎಡಿಷನ್ ಸ್ಕೂಟರ್‍‍ನ ಪ್ರೀಮಿಯಂ ಲುಕ್‍‍ಗಾಗಿ ಟ್ಯಾನ್ ಲೆಧರ್ ಸೀಟ್ ಅನ್ನು ಒದಗಿಸಲಾಗಿದ್ದು, ಫ್ರಂಟ್ ಮಡ್‍‍ಗಾರ್ಡ್‍‍ನಲ್ಲಿ ಜುಪಿಟರ್ ಕ್ಲಾಸಿಕ್ ಮಾಡಲ್‍‍ನಿಂದ ಪಡೆದ ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಸ್ಕೂಟರ್ ರೆಗ್ಯುಲರ್ ಮಾಡಲ್‍‍ನಲ್ಲಿ ಕಾಣಲಾಗಂದತ ಹೊಸ ವೈಶಿಷ್ಟ್ಯತೆಗಳನ್ನು ಕೂಡಾ ನೀಡಲಾಗಿದೆ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಸ್ಪೆಷಲ್ ಎಡಿಷನ್ ಟಿವಿಎಸ್ ಜುಪಿಟರ್ ಸ್ಕೂಟರ್‍‍ನಲ್ಲಿ ಪೂರ್ಣ ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಆನಾಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒದಗಿಸಲಾಗಿದ್ದು, ಇದನ್ನು ಹೊರತು ಪಡಿಸಿ ಇನ್ನೆಲ್ಲಾ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಮಾಡಲ್‍ನಿಂದ ಪಡೆದುಕೊಂಡಿದೆ. ಆದರೆ ನೋಟದಲ್ಲಿ ಸಾಧಾರಣ ಮಾಡಲ್‍‍ಗಿಂತಾ ಸ್ಪೆಷಲ್ ಎಡಿಷನ್ ಸ್ಕೂಟರ್ ಪ್ರೀಮಿಯಂ ಲುಕ್ ಅನ್ನು ಪಡೆದುಕೊಂಡಿರುವುದೇ ವಿಶೇಷ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಎಂಜಿನ್ ಸಾಮರ್ಥ್ಯ

ಹೊಸ ಜುಪಿಟರ್ ಗ್ರಾಂಡೆ ಸ್ಪೆಷಲ್ ಎಡಿಷನ್ ಸ್ಕೂಟರ್ 109.7ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 8ಬಿಹೆಚ್‍ಪಿ ಮತ್ತು 8ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಲೀಟರ್‍‍ಗೆ 56ಕಿಲೋಮೀಟರ್‍‍ನ ಮೈಲೇಜ್ ನೀಡುತ್ತದೆ.

ಟಿವಿಎಸ್ ಪರಿಚಯಿಸಲಿರುವ ಜುಪಿಟರ್ ಸ್ಕೂಟರ್‍‍ನ ಹೊಸ ವೇರಿಯಂಟ್ ಇದೇ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಮೋಟಾರ್ಸ್ ಸಂಸ್ಥೆಯು ಹಬ್ಬದ ಋತುವಿನಲ್ಲಿ ತಮ ಜುಪಿಟರ್ ಗ್ರಾಂಡೆ ಎಡಿಷನ್ ಸ್ಕೂಟರ್ ಅನ್ನು ಪರಿಚಯಿಸಲಿರುವ ತವಕದಲಿದ್ದು, ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ನೀಡಲಾಗಿದೆ. ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Source: Gaadiwaadi

Article Published On: Monday, October 1, 2018, 11:15 [IST]
English summary
TVS Jupiter Grande Edition Spotted At Dealership — Gets New Features
Read more on tvs motor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+