ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

Written By: Rahul

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಮೊದಲ ಕ್ರೂಸರ್ ಬೈಕ್‌ನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದು, ಈ ಬೈಕಿನ ಭವಿಷ್ಯದ ಡಿಸೈನ್ ಮತ್ತು ಫೀಚರ್ಸ್ ಕ್ರೂಸರ್ ಬೈಕ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಟಿವಿಎಸ್ ಝೆಪ್ಲಿನ್ ವಿನ್ಯಾಸ

ಬೈಕ್‌ನ ಪರಿಕಲ್ಪನೆಯು ಮುಂದಿನ ತಲೆಮಾರಿನ ಕ್ರೂಸರ್ ಬೈಕಿನ ವಿನ್ಯಾಸವಾಗಿದ್ದು, ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಈ ಬೈಕ್‌ ಲೋ ಸ್ಲಂಗ್ ಸೀಟ್, ಎಲಾಂಗೇಟೆಡ್ ಫ್ಯುಯಲ್ ಟ್ಯಾಂಕ್, ಮುಂಭಾಗದ ಫುಟ್ ಪೆಗ್ ಸೆಟ್ ಮತ್ತು ಉದ್ದವಾದ ವೀಲ್ ಬೇಸನ್ನು ಹೊಂದಿದೆ. ಆದರೆ ಇದರ ಎಲ್ಲ ಅಂಶಗಳು ಮಾಡರ್ನ್ ಟಚ್ ಹೊಂದಿದೆ.

Recommended Video - Watch Now!
TVS NTORQ 125 Specs Details & First-Look - DriveSpark
ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಝೆಪ್ಲಿನ್ ಪರಿಕಲ್ಪನೆಯು ಪೂರ್ಣ ಎಲ್ಇಡಿ ಹೆಡ್ ಲೈಟ್ ಮತ್ತು ಗೋಲ್ಡೆನ್ ಯುಎಸ್ ಡಿ ಫೋರ್ಕ್ಸ್ ಹೊಂದಿದ್ದು, ಫ್ಯುಯಲ್ ಟ್ಯಾಂಕ್ ವಿನ್ಯಾಸ ಮೊಣಕಾಲಿನ ಹಿನ್ಸ್ ರೆಸ್ಸೆಸೆಸ್, ಸೈಡ್ ಪ್ಯಾನೆಲ್‌ಗಳು ಬೆಳ್ಳಿ ಮತ್ತು ಇಂಜಿನ್ ಕೂಡ ದೀರ್ಘ ಬೆಲ್ಲಿ ಪ್ಯಾನ್ ಪಡೆಯುತ್ತದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಹೀಗಾಗಿ ಝೆಪೆಲಿನ್ ವೈಶಿಷ್ಟ್ಯಗಳ ಹಿಂಭಾಗವು ಆಸನ, ದಪ್ಪನಾದ ಟೈರ್ ಮತ್ತು ಟೈರ್ ಹಗ್ಗರ್ ಇಂಟಿಗ್ರೇಟೆಡ್ ನಂಬರ್ ಪ್ಲೇಟ್ ಹೋಲ್ಡರನ್ನು ಪಡೆದಿದ್ದು, ಅಗಲವಾದ ಫೌಕ್ಸ್ ರೇಡಿಯೇಟರ್, ಆಯಿಲ್ ಕೂಲ್ಡ್ ಎಂಜಿನ್ ಅಲ್ಲದೇ ಸ್ಪೋಕ್ ಅಲಾಯ್ ಚಕ್ರಗಳು, ಬಾರ್ ಎಂಡ್ ಮಿರರ್ ಗಳು ಬೈಕಿಗೆ ಕ್ಲಾಸಿಕ್ ನೋಟವನ್ನು ನೀಡಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಎಂಜಿನ್ ವಿಶೇಷತೆ

ಟಿವಿಎಸ್ ಝೆಪ್ಲಿನ್ 220ಸಿಸಿ ಸಿಂಗಲ್ ಸಿಲೆಂಡರ್, ಆಯಿಲ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಹೊಂದಿದ್ದು, 19.7 ಬಿಹೆಚ್ ಪಿ ಮತ್ತು 18.5 ಪೀಕ್ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿರುವ ಝೆಪ್ಲಿನ್ 48V ಲಿ-ಐಯಾನ್ ಬ್ಯಾಟರಿಯೊಂದಿಗೆ 1,200W ಪುನರುಜ್ಜೀವನದ ಸಹಾಯಕ ಮೋಟಾರು ಪಡೆಯುತ್ತದೆ, ಇದು ಅಗತ್ಯವಿದ್ದಾಗ ಕ್ರೂಸರ್‌ನ ಶಕ್ತಿಯುತ ಪ್ರದರ್ಶನಕ್ಕೆ ಶೇ.20ರಷ್ಟು ಹೆಚ್ಚು ಟಾರ್ಕ್ ಅನ್ನು ತಲುಪಿಸುತ್ತದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಟಿವಿಎಸ್ ಝೆಪ್ಲಿನ್ ವೈಶಿಷ್ಟ್ಯತೆಗಳು

ಟಿವಿಎಸ್ ಝೆಪ್ಲಿನ್ ಕ್ರೂಸರ್ ಪರಿಕಲ್ಪನೆಯು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ನಿಮ್ಮ ಪಯಣವನ್ನು ರೆಕಾರ್ಡ್ ಮಾಡಲು HD ಕ್ಯಾಮೆರಾ, ಎಲ್ಇಡಿ ಹೆಡ್ ಲೈಟ್, ಆನ್ ಲೈನ್ ಕನೆಕ್ಟಿವಿಟಿ, ಫರ್ಸ್ಟ್-ಇನ್- ಸೆಗ್ಮೆಂಟ್ ಸ್ಮಾರ್ಟ್ ಬಯೊ-ಕೀ, ಎಲ್ಇಡಿ ಟೈಲ್ ಲ್ಯಾಂಪ್, ಅಡ್ಜಸ್ಟೆಬಲ್ ಬ್ರೇಕ್ ಮತ್ತು ಕ್ಲಚ್ ಲೆವೆರ್ಸ್ ಅನ್ನು ಕೂಡ ಪಡೆದಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

41ಎಂಎಂ ಅಪ್-ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸಸ್ಪೆಷನ್, 300 ಎಂಎಂ ಡಿಸ್ಕ್ ಮುಂಭಾಗದಲ್ಲಿ ಹಾಗೂ 240 ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿವೆ. ಎರಡು ಬ್ರೇಕ್ ಗಳು ಎಬಿಎಸ್ ನೊಂದಿಗೆ ಸಹಕರಿಸುತ್ತವೆ. ಲೋವರ್ಡ್ ಹ್ಯಾಂಡಲ್ ಬಾರ್ಸ್ ಮತ್ತು ಸ್ಲಂಗ್ ಸೀಟ್ ಸಹಾಯಕಗಳಿಂದ ಹಾಯಾಗಿ ಚಲಿಸಬಲ್ಲ ಅನುಭವವನ್ನು ನೀಡಲಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಟಿವಿಎಸ್ ಝೆಪ್ಲಿನ್ ಪರಿಕಲ್ಪನೆಯು ಭವಿಷ್ಯದ ಯಂತ್ರ ಹಾಗು ಹಲವಾರು ಮುಂದಿನ ಅಡ್ವಾಸ್ಡ್ ಫೀಚರ್ ನೊಂದಿಗೆ ಬಜಾಜ್ ಅವೆಂಜರ್ 220 ಕ್ರೂಸ್ ಮತ್ತು ಸ್ಟ್ರೀಟ್, 150ಸಿಸಿ ಅವೆಂಜರ್ ಸ್ಟ್ರೀಟ್ ಮತ್ತು ಕೆಲದಿನಗಳ ಹಿಂದೆ ಬಿಡುಗದೆಯಾದ ಸುಜುಕಿ ಇಂಟ್ರುಡರ್ ಬೈಕ್ ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ನ ಮೊದಲ ವಿಮರ್ಶೆ...

ಟಿವಿಎಸ್ ಝೆಪ್ಲಿನ್ ಪರ್ಫಾರ್ಮೆನ್ಸ್ ಕ್ರೂಸರ್ ಬೈಕ್ ಎನ್ನಲಾಗಿದ್ದು, ಬೈಕಿನ ಸಂಪೂರ್ಣ ಡಿಸೈನ್ ಭವಿಷ್ಯದ ಹಾಗು ಕ್ಲಾಸಿಕ್ ಡಿಸೈನ್ ಅನ್ನು ಹೊಂದಿದೆ. ಇನ್ನು ಟಿವಿಎಸ್ ಸಂಸ್ಥೆಯು ಈ ಬೈಕಿನ ಉತ್ಪಾದನೆಯ ವಿಷಯವನ್ನು ದೃಢೀಕರಿಸಲಿಲ್ಲ.

Read more on tvs motors
English summary
TVS Zeppelin First Look Review — A Power-Packed Cruiser.
Story first published: Wednesday, February 14, 2018, 12:13 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark