ಮತ್ತೆರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾದ ಯಮಹಾ ಸಿಗ್ನಸ್ ರೇ-ಝಡ್‌ಆರ್
ಯಮಹಾ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಒದಗಿಸುತ್ತಿದ್ದು, ಆರ್ಮಾಂಡಾ ಬ್ಲೂ ಮತ್ತು ರೂಸ್ಟರ್ ರೆಡ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.
ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಒದಗಿಸುತ್ತಿದ್ದು, ಆರ್ಮಾಂಡಾ ಬ್ಲೂ ಮತ್ತು ರೂಸ್ಟರ್ ರೆಡ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಮ್ಯಾಟ್ ಗ್ರೀನ್, ಮಾವೆರಿಕ್ ಬ್ಲೂ, ಮತ್ತು ಡಾರ್ಕ್ ನೈಟ್ ಬ್ಲಾಕ್ ಎಂಬ ಬಣ್ಣಗಳಲ್ಲಿ ಲಭ್ಯವಿರುವ ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳು ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಆರ್ಮಾಂಡಾ ಬ್ಲೂ ಮತ್ತು ರೂಸ್ಟರ್ ರೆಡ್ ಎಂಬ ಎರಡು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ.

ಆದ್ರೆ ಬೆಲೆಗಳಲ್ಲಿ ಯಾವುದೇ ಬದಲವಾಣೆಗೊಳಿಸಿದೆ ಈ ಹಿಂದಿನ ಬೆಲೆಯನ್ನೇ ಮುಂದುವರಿಸಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಆರಂಭಿಕವಾಗಿ ರೂ. 53,451 ಮತ್ತು ಉನ್ನತ ಮಟ್ಟದ ಸಿಗ್ನಸ್ ರೇ-ಝಡ್‌ಆರ್‌ಗಳು ರೂ. 56,898ಕ್ಕೆ ಖರೀದಿಸಬಹುದಾಗಿದೆ.

ಇನ್ನು ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳಲ್ಲಿ ಹೊಸ ಬಣ್ಣಗಳ ಆಯ್ಕೆ ಹೊರತಾಗಿ ಈ ಹಿಂದಿನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಲಾಗಿದ್ದು, 113ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನೊಂದಿಗೆ 7-ಬಿಎಚ್‌ಪಿ ಹಾಗೂ 8.1 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳು, 103 ಕೆಜಿ ತೂಕ ಹೊಂದುವ ಮೂಲಕ ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ನಗರ ಪ್ರದೇಶಗಳಲ್ಲಿ ಸುಲಭ ರೈಡಿಂಗ್‌ಗೆ ಅನುಕೂಲಕರವಾಗಿದೆ.

ಸಿಗ್ನಸ್ ರೇ-ಝಡ್‌ಆರ್ ಮೈಲೇಜ್
ಸುಧಾರಿತ ತಂತ್ರಜ್ಞಾನ ಹೊಂದಿರುವ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳು ಸ್ಕೂಟರ್ ಮಾದರಿಗಳಲ್ಲಿ ಉತ್ತಮ ಮೈಲೇಜ್ ನೀಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 66 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

ಸ್ಕೂಟರ್ ವೈಶಿಷ್ಟ್ಯತೆಗಳು
ಸುಲಭವಾಗಿ ಅರ್ಥೈಸಬಲ್ಲ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, 20 ಲೀಟರ್ ಸಾಮರ್ಥ್ಯ ಸೀಟ್ ಅಂಡರ್ ಸ್ಟೊರೇಜ್ ಮತ್ತು ಟ್ಯೂಬ್ ಲೆಸ್ ಟೈರ್ ಹೊಂದಿರುವ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳು ಯುವ ಸಮುದಾಯದ ನೆಚ್ಚಿನ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸ್ಪೋರ್ಟಿ ಲುಕ್‌ನೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್‌ಗಳು ಹೊಸ ಬಣ್ಣಗಳಲ್ಲಿ ಲಭ್ಯವಾಗಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸೌಲಭ್ಯಗಳನ್ನು ಪಡೆಯುವ ನೀರಿಕ್ಷೆಯಿದೆ.


Click it and Unblock the Notifications








