ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಇಂಡಿಯಾ ಯಮಹಾ ಮೂಟರ್ಸ್‍ ಸಂಸ್ಥೆಯು ಕಳೆದ ವಾರವಷ್ಟೆ ತಮ್ಮ ಹೊಸ ಸ್ಟ್ರೀಟ್ ರ್‍ಯಾಲಿ ಜೆಡ್‍ಆರ್ ಸ್ಕೂಟರ್‍‍ನ ಟೀಸರ್ ಅನು ಬಿಡುಗಡೆಗೊಳಿಸಿದ್ದು, ಇದೀಗ ಸೈನಸ್ ರೇ ಸ್ಕೂಟಾರಿನ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಗೆ ಪ

By Rahul Ts

ಯಮಹಾ ಸಂಸ್ಥೆಯು ಕಳೆದ ವಾರವಷ್ಟೆ ತಮ್ಮ ಹೊಸ ಸ್ಟ್ರೀಟ್ ರ್‍ಯಾಲಿ ಜೆಡ್‍ಆರ್ ಸ್ಕೂಟರ್‍‍ನ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಲ್ಲದೇ, ಇದೀಗ ಸೈನಸ್ ರೇ ಸ್ಕೂಟರಿನ ಸ್ಟ್ರೀಟ್ ರ್‍ಯಾಲಿ ಎಡಿಷನ್ ಮಾದರಿಯನ್ನ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಹೊಸದಾಗಿ ಬಿಡುಗಡೆಗೊಂಡ ಸ್ಟ್ರೀಟ್ ರ್‍ಯಾಲಿ ಜೆಡ್‍ಆರ್ ಸಂಸ್ಥೆಯ ರೇ ಜೆಡ್‍ಆರ್ ಸ್ಪೋರ್ಟಿ 110 ಸ್ಕೂಟರಿನ ಸ್ಪೋರ್ಟಿ ವರ್ಷನ್ ಆಗಿದ್ದು, ರ್‍ಯಾಲಿ ರೆಡ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟ ಈ ಸ್ಕೂಟರ್‌ನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 57,898 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ರೇ ಜೆಡ್‍ಆರ್ ಸ್ಕೂಟರ್‍‍ನ ಸ್ಟ್ರೀಟ್ ರ್‍ಯಾಲಿ ಎಡಿಷನ್ ಇದೇ ಜುಲೈ ತಿಂಗಳ ಕೊನೆಯ ವಾರದಿಂದ ಯಮಹಾ ಸಂಸ್ಥೆಯ ಎಲ್ಲಾ ಅಧಿಕೃತ ಡೀಲರ್‍‍ಗಳ ಬಳಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಹೊಸ ಯಮಹಾ ಸೈನಸ್ ರೇ ಜೆಡ್‍ಆರ್ ರ್‍ಯಾಲಿ ಎಡಿಷನ್ ಸ್ಕೂಟರ್ ಸಂಸ್ಥೆಯ ಎಮ್‍ಟಿ-09 ವಿನ್ಯಾಸವನ್ನು ಆಧರಿಸಿದ್ದು, ಸ್ಪೋರ್ಟಿ ಲುಕ್ ಅನ್ನು ನೀಡಲು ವಿಂಡ್‍‍ಸ್ಕ್ರೀನ್ ಅನ್ನು ಪಡೆದಿದ್ದು, ಜೊತೆಗೆ ಹ್ಯಾಂಡಲ್ ಗ್ರಿಪ್‍‍ನ ಮೇಲೆ 'ಕಂಕಲ್ ಗಾರ್ಡ್' ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಸೈನಸ್ ರೇ ಜೇಡ್‍‍ಆರ್ ಸ್ಟ್ರೀಟ್ ರ್‍ಯಾಲಿಯ ಫ್ರಂಟ್ ಫೆಂಡರ್ ಮಡ್ ಸ್ಪ್ಲಾಟರ್‍‍ನಿಂದ ರಕ್ಷಿಸುತ್ತದೆ ಮತ್ತು ಸ್ಪೋರ್ಟಿ ನೋಟಕ್ಕೆ ಸೇರಿಸುತ್ತದೆ. ಸ್ಕೂಟರ್‌‌ನ ಹೊಸ ಆವೃತ್ತಿಯು 'ರೈಸಿಂಗ್ ಏರ್ ಟೈಲ್' ವಿನ್ಯಾಸವನ್ನು ಸಹ ಒಳಗೊಂಡಿದ್ದು, ತೀಕ್ಷ್ಣವಾದ ಸ್ಪೋರ್ಟಿ ಮಿರರ್ ಮತ್ತು ಡಿಜಿಟಲ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಎಂಜಿನ್ ಸಾಮರ್ಥ್ಯ

ಹೊಸದಾಗಿ ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್ 113ಸಿಸಿ ಏರ್ ಕೂಲ್ಡ್, ಬ್ಲೂ ಕೋರ್ ಎಂಜಿನ್ ಸಹಾಯದಿಂದ 7.1-ಬಿಹೆಚ್‍‍ಪಿ ಮತ್ತು 8.1-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಈ ಎಂಜಿನ್ ರೋಲರ್ ರಾಕರ್ ಆರ್ಮ್ ಅನ್ನು ಪಡೆದಿದ್ದು, ಇದು ಕಡಿಮೆ ವೇಗದ ವ್ಯಾಪ್ತಿಯಲ್ಲಿ ವಿದ್ಯುತ್ ನಷ್ಟವನ್ನು ಕಡಿಮೆ ಮಾಡುತ್ತದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಯಮಹಾ ಸೈನಸ್ ರೇ ಜೆಡ್‍ಆರ್ ಸ್ಕೂಟರ್‍‍ನ ಮುಂಭಾಗದಲ್ಲಿ 170ಎಮ್ಎಮ್ ಡಿಸ್ಕ್ ಬ್ರೇಕ್, ಅಲಾಯ್ ಚಕ್ರಗಳು, 21 ಲೀಟರ್‍‍ನ ಸ್ಟೋರೇಜ್, ಫ್ರಂಟ್ ಪಾಕೆಟ್, ಕೀ ಸೆಕ್ಯೂರ್ ಗ್ರಿಪ್ ಸಿಸ್ಟಮ್, ಎಡ್ಜಿ ಆಂಡ್ ಹೈ ರೈಸಿಂಗ್ ಟೈಲ್ ಲೈಟ್ ಮತ್ತು 2 ಮಟ್ಟದಲ್ಲಿ ಸೀಟ್ ಎತ್ತರ ಪಡಿಸಬಹುದಾದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಯಮಹಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ಈ ರೇ ಜೆಡ್‍ಆರ್ 110 ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಅನ್ನು ಪ್ರದರ್ಶಿಸಿದ್ದು, ಇದೀಗ ಸ್ಕೂಟರ್ ಹೊಸ ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಗೋಲ್ಡನ್ ಅಲಾಯ್ ವ್ಹೀಲ್‍‍ಗಳನ್ನು ಪಡೆದ ಅವತಾರದಲ್ಲಿ ಬಿಡುಗಡೆಗೊಂಡಿದೆ.

More from DriveSpark

Article Published On: Monday, July 16, 2018, 12:33 [IST]
English summary
Yamaha Cygnus Ray ZR ‘Street Rally’ Edition Launched In India.
Read more on yamaha scooter new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+