ಹೊಸ ಆರ್15 ವಿ3.0 ಬೈಕ್‍ನ ಬೇಲೆಯನ್ನು ಏರಿಸಿದ ಯಮಹಾ..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ಆರ್15 ವಿ3.0 ಬೈಕಿನ ಮೇಲೆ ಬೆಲೆ ಏರಿಸಿದೆ. ಯಮಹಾ ಆರ್15 ವಿ3.0 ಬೈಕ್ ಇದೇ ವರ್ಷದ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ಆರ್15 ವಿ3.0 ಬೈಕಿನ ಮೇಲೆ ಬೆಲೆ ಏರಿಸಿದೆ. ಯಮಹಾ ಆರ್15 ವಿ3.0 ಬೈಕ್ ಇದೇ ವರ್ಷದ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.1.25 ಲಕ್ಷಕ್ಕೆ ಬೆಲೆಯನ್ನು ನಿಗದಿ ಮಾಡಲಾಗಿತ್ತು.

ಆದರೆ ಯಮಹಾ ಸಂಸ್ಥೆಯು ಈ ಬೈಕಿನ ಬೆಲೆಯಲ್ಲಿ ರೂ.2,000 ಸಾವಿರದ ಮೊತ್ತವನ್ನು ಏರಿಸಲಾಗಿದ್ದು, ಇದೀಗ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.27ಲಕ್ಷಕ್ಕೆ ಹೊಸ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಯಮಹಾ ಆರ್15 ವಿ3.0 ಬೈಕ್ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಂಡಿತ್ತು. ಫುಲ್ಲಿ ಫೈರ್ಡ್ 150ಸಿಸಿ ಮೋಟರ್‍ಸೈಕಲ್ ಆದ ಆರ್15 ವಿ3.0 ಬೈಕ್ ಯಮಹಾ ಸಂಸ್ಥೆಯ ಆರ್6 ಮತ್ತು ಆರ್1 ಬೈಕ್‍ಗಳ ವಿನ್ಯಾಸವನ್ನು ಆದರಿಸಲಾಗಿದೆ. ಇನ್ನು ಏರಿಕೆಯಾದ ಇನ್ಪುಟ್ ಮತ್ತು ಕಾರ್ಯಾಚರಣೆ ವೆಚ್ಚಗಳ ಸಲುವಾಗಿ ಬೈಕಿನ ಬೆಲೆಯಲ್ಲಿ ರೂ.2000 ಸಾವಿರದಷ್ಟು ಹೆಚ್ಚಿಸಲಾಗಿದೆ.

2018ರ ಯಮಹಾ ಆರ್15 ವಿ3.0 ಬೈಕ್ 155ಸಿಸಿ, ಎಸ್‍ಒಹೆಚ್‍ಸಿ, ಲಿಕ್ವಿಡ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ 19.3 ಬಿಹೆಚ್‍ಪಿ ಮತ್ತು 15ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಯಮಹಾ ಆರ್15 ವಿ3.0 ಬೈಕಿನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಕಂವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಷಾಕ್ ಅನ್ನು ಪಡೆದುಕೊಂಡಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಯಮಹಾ ಆರ್15 ವಿ3.0 ಬೈಕ್‍ನ ಮುಂಭಾಗದಲ್ಲಿ 282ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಮ್ಎಮ್ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಯಮಹಾ ಆರ್15 ವಿ3.0 ಬೈಕ್‍ಗಳು ಎಲ್ಇಡಿ ಹೆಡ್‍ಲ್ಯಾಂಪ್ಸ್ ಮತ್ತು ಟೈಲ್ ಲ್ಯಾಂಪ್, ಪೂರ್ಣ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಅಸ್ಸಿಸ್ಟ್ ಆಂಡ್ ಸ್ಲಿಪ್ಪರ್ ಕ್ಲಚ್ ಮತ್ತು ಗೇರ್ ಶಿಫ್ಟ್ ಟೈಮೆಂಗ್ ಲೈಟ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಇದಲ್ಲದೆ ಯಮಹಾ ಸಂಸ್ಥೆಯು ಈ ತಿಂಗಳಿನಲ್ಲಿ ಆರ್15 ಬೈಕಿನ ಮೊಟೊಜಿಪಿ ಎಡಿಷನ್ ಅನ್ನು ಬಿಡುಗಡೆಗೊಳಿಸುವ ತವಕದಲಿದ್ದು, ಈಗಾಗಲೆ ಆರ್ 15 ಬೈಕಿನ ಮೊಟೊಜಿಪಿ ಎಡಿಶನ್ ಹಲವಾರು ಆಗ್ನೇಯ ಏಶಿಯಾದ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳಿತ್ತಿದೆ. ಬಿಡುಗಡೆಗೊಳ್ಳಲಿರುವ ಯಮಹಾ ಆರ್15 ಮೊಟೊಜಿಪಿ ಎಡಿಷನ್ ಬೈಕ್‍ಗಳು ವಿನ್ಯಾಸದಲ್ಲಿ ಮತ್ತು ತಾಂತ್ರಿಕವಾಗಿ ಗುರುತರ ಬದಲಾವಣೇಗಳನ್ನು ಪದೆದುಕೊಳ್ಳಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೊಸ ಯಮಹಾ ಆರ್15 ವಿ3.0 ಬೈಕ್ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ ಸ್ಪೋರ್ಟ್ಸ್ ಬೈಕ್ ಆಗಿದ್ದು, ಬಿಡುಗಡೆಗೊಂಡಗಿನಿಂದ ಸುಮಾರು 7,000 ಯೂನಿಟ್ ಬೈಕ್‍ಗಳು ಮಾರಾಟಗೊಂಡಿವೆ. ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಆರ್15 ವಿ3.0 ಬೈಕ್ ಹೋಂಡಾ ಸಿಬಿಆರ್ 150, ಸುಜುಕಿ ಜಿಕ್ಸರ್ ಎಸ್‍ಎಫ್ ಮತ್ತು ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications








