ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತಮ್ಮ ಹೊಸ ನಿಂಜಾ 300 ಬೈಕಿನ ಖರೀದಿದಾರರಿಗೆ ಮೆಟಾಲಿಕ್ ಮೂನ್ ಡಸ್ಟ್ ಗ್ರೇ ಮತ್ತು ಲೈಮ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಯನ್ನು ನೀಡಲಾಗಿದ್ದು, ಈ ಬೈಕಿನ ಹಸಿರು ಬಣ್ಣವು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಇದೀಗ ಲೈಮ್ ಗಿನ್ ಬಣ್ಣದ ಆಯ್ಕೆಯನ್ನು ನೀಡಿರುವುದು ಹೊಸತೆನಿಸಲಿದೆ.

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಈ ಬೈಕ್ ಅನ್ನು ದೇಶಿಯವಾಗಿ ತಯಾರಿಸುತ್ತಿರುವುದು ಸಹ ಬೈಕಿನ ಬೆಲೆ ಕಡಿಮೆಯಾಗಿ, ಬೈಕಿನ ಮಾರಾಟವು ಚೇತರಿಸಿಕೊಳ್ಳಲು ನೆರವಾಗಿದೆ. 2018ರ ಮಧ್ಯ ಭಾಗದಲ್ಲಿ ಕಂಪನಿಯು ಕವಾಸಕಿ ನಿಂಜಾ300 ಬೈಕ್ ಅನ್ನು ದೇಶಿಯವಾಗಿ ನಿರ್ಮಿಸಿ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಬೆಳವಣಿಗೆಯಲ್ಲಿ ಕಂಪನಿಯ ವತಿಯಿಂದ ಗ್ರಾಹಕರಿಗೆ ಆರಂಭಿಕ ಕೊಡುಗೆಗಳನ್ನು ನೀಡಲಾಗಿತ್ತು. ಸುಮಾರು ರೂ.80,000 ಗಳವರೆಗೆ ಕೊಡುಗೆಗಳನ್ನು ನೀಡಲಾಗಿತ್ತು.

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಕವಾಸಕಿ ನಿಂಜಾ 300 ಲಭ್ಯವಿರುವ ಬಣ್ಣಗಳು

ಕವಾಸಕಿ ನಿಂಜಾ 300 ಬೈಕ್ ಲೈಮ್ ಗ್ರೀನ್, ಲೈಮ್ ಗ್ರೀನ್/ಇಬೊನಿ, ಮೆಟಾಲಿಕ್ ಮೂನ್ ಡಸ್ಟ್ ಗ್ರೇ ಮತ್ತು ಕ್ಯಾಂಡಿ ಬ್ಲೂ ಪ್ಲಾಸ್ಮಾ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಳೆಯ ಬಣ್ಣಾಗಳಿಗಿಂತಲೂ ವಿಭಿನ್ನವಾದ ಗ್ರಾಫಿಕ್ಸ್ ಅನ್ನು ಗ್ರಾಹಕರು ಹೊಸ ಎರಡು ಬಣ್ಣಗಳಲ್ಲಿ ಪಡೆಯಬಹುದಾಗಿದೆ.

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಎ‍‍ಬಿ‍ಎಸ್ ಹೊಂದಿಲ್ಲದ ಸಿ‍‍ಬಿ‍‍ಯು ಮಾದರಿಯ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.2.98 ಲಕ್ಷಗಳಾಗಿತ್ತು. ಬದಲಾದ ಸುರಕ್ಷತಾ ನಿಯಮಗಳಿಗನುಗುಣವಾಗಿ ದೇಶಿಯ ನಿರ್ಮಿತ ನಿಂಜಾ300 ಬೈಕಿನಲ್ಲಿ ಸ್ಟಾಂಡರ್ಡ್ ಆಗಿ ಎ‍‍ಬಿ‍ಎಸ್ ನೀಡಲಾಗುತ್ತಿದೆ.

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

300 ಸಿಸಿಯ ವ್ಯಾಪ್ತಿಯಲ್ಲಿರುವ ಬೈಕುಗಳಿಗೆ ಎ‍‍ಬಿ‍ಎಸ್ ಕಡ್ಡಾಯವೆಂಬ ನಿಯಮ 2019ರ ಏಪ್ರಿಲ್ 1 ರಿಂದ ಜಾರಿಗೆ ಬಂದ ನಂತರ ನಿಂಜಾ ಬೈಕಿನಲ್ಲೂ ಎ‍‍ಬಿ‍ಎಸ್ ಅಳವಡಿಸಲಾಗಿದೆ. ಎಬಿ‍ಎಸ್ ಇಲ್ಲದ ಮಾರಾಟವಾಗದೇ ಉಳಿದಿದ್ದ ನಿಂಜಾ300 ಬೈಕುಗಳನ್ನು, ಕಡಿಮೆ ಅವಧಿಯಲ್ಲಿ ಆಕರ್ಷಕ ದರಗಳಲ್ಲಿ ಮಾರಾಟ ಮಾಡಲಾಯಿತು.

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಬೆಲೆಗಳಲ್ಲಿನ ಏರಿಳಿತವನ್ನು ನಿಯಂತ್ರಿಸುವ ಉದ್ದೇಶದಿಂದ ಕವಾಸಕಿ ಇಂಡಿಯಾ ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು 7% ನಷ್ಟು ಏರಿಕೆ ಮಾಡಿತು. ದೇಶಿಯವಾಗಿ ತಯಾರಿಸಲಾದ ಕವಾಸಕಿ ಎಂ‍‍ವೈ 2019 ನಿಂಜಾ 300 ಎ‍‍‍ಬಿ‍ಎಸ್ ಬೈಕ್ ಅನ್ನು 2018ರ ಜುಲೈನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗ ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.98 ಲಕ್ಷಗಳಾಗಿತ್ತು.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಕವಾಸಕಿ ನಿಂಜಾ ಬೈಕಿನಲ್ಲಿ ಹೆಚ್ಚಿನ ಪ್ರಮಾಣದ ಸ್ಟೀಲ್ ಫ್ರೇಂ ಇದ್ದು, ಸುಧಾರಿತ ಚಾಸೀಸ್‍‍‍ನ ಸ್ಥಿರತೆಗೆ ಸಹಕಾರಿಯಾಗಲಿದೆ. ಇದರಲ್ಲಿರುವ ರೇಸಿಂಗ್ ಟೆಕ್ನಾಲಜಿ ಅಸಿಸ್ಟ್ ಮತ್ತು ಸ್ಲಿಪರ್ ಕ್ಲಚ್ ಫಂಕ್ಷನಾಲಿಟಿಗಳು, ಬ್ಯಾಕ್ ಟಾರ್ಕ್ ಲಿಮಿಟರ್ ಹಾಗೂ ಕ್ಲಚ್ ಲಿವರ್‍‍‍‍ಗಾಗಿ ಸ್ವಯಂ ಚಾಲಿತ ಮೆಕಾನಿಕ್‍‍ಗಳನ್ನು ಒಳಗೊಂಡಿವೆ. ಈಗಿರುವ ಮಾದರಿಯಲ್ಲಿ ಈ ಬೈಕ್ ಎಲ್‍ಇ‍‍ಡಿ ಹೆಡ್ ಲೈಟ್ ಹಾಗೂ ಟೇಲ್ ಲ್ಯಾಂಪ್‍‍ಗಳ ಜೊತೆಗೆ ಇನ್ಸ್ ಟ್ರೂಮೆಂಟ್ ಕಂಸೋಲ್ ಹೊಂದಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಕವಾಸಕಿ ನಿಂಜಾ 300 ಎಮ್‍ಆರ್‍ಎಫ್ ಟೈರ್ ಮತ್ತು ಎಂಡ್ಯೂರನ್ಸ್ ಬ್ರೇಕ್‍‍ಗಳನ್ನು ಪಡೆದುಕೊಂಡಿದೆ. ಬೈಕಿನ ಸೀಟ್ ಅನ್ನು ಹಳೆಯ ಮಾದರಿಗಿಂತ 5ಎಮ್ಎಮ್ ಕಡಿಮೆ ನೀಡಿದ್ದು, ಒಟ್ಟಾರೆಯಾಗಿ 179 ಕೇಜಿ ತೂಕವನ್ನು ಪಡೆದುಕೊಂಡಿದೆ.

MOST READ: ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?

ಕವಾಸಕಿ ನಿಂಜಾ 300 ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ

ಈ ಬೈಕಿನಲ್ಲಿ 296 ಸಿಸಿಯ ಪ್ಯಾರಲೆಲ್ ಟ್ವಿನ್, 4 ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ ನ ಎಂಜಿನ್ ಅಳವಡಿಸಲಾಗಿದ್ದು, 38.5 ಬಿ‍‍ಹೆಚ್‍‍ಪಿಯನ್ನು 11,000 ಆರ್‍‍ಪಿ‍ಎಂನಲ್ಲಿ ಮತ್ತು 27 ಎನ್‍ಎಂ ಟಾರ್ಕ್ ಅನ್ನು 10,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಇದೆ. ಮುಂಭಾಗದ ಡಿಸ್ಕ್ ಬ್ರೇಕ್ 290 ಎಂಎಂ, ಹಿಂಭಾಗದ ಡಿಸ್ಕ್ 220 ಎಂಎಂ ಗಾತ್ರ ಹೊಂದಿವೆ.

Article Published On: Thursday, May 30, 2019, 10:46 [IST]
English summary
2019 Kawasaki Ninja 300 Gets Two New Colours. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+