ಬಿಎಸ್6 ಎಂಜಿನ್‍ನೊಂದಿಗೆ ಬರಲಿದೆ ರಾಯಲ್ ಎನ್ಫೀಲ್ಡ್ ಥಂಡರ್‍ಬರ್ಡ್
2020ರ ರಾಯಲ್ ಎನ್ಫೀಲ್ಡ್ ಥಂಡರ್‍ಬರ್ಡ್ ಎಕ್ಸ್ ಎಫ್ಐ ಬಿಎಸ್ 6 ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡುವಾಗ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿತ್ತು. ಬೈಕಿನ ಹಿಂಭಾಗದ ಚಿತ್ರವನ್ನು ಮಾತ್ರ ಸೆರೆಹಿಡಿಯಲು ಸಾಧ್ಯವಾಗಿತ್ತು. ಆದರೂ ಕೆಲವೊಂದು ಆಸಕ್ತಿದಾಯಕ ವಿಷಯಗಳನ್ನು ಗಮನಿಸಬಹುದು. ಕ್ರೋಮ್ ಬಣ್ಣವನ್ನು ಹೊಂದಿರುವ ಟೇಲ್ ಲ್ಯಾಂಪ್‌ಗಳು ಸರ್ಕ್ಯುಲರ್ ಶೇಪಿನಲ್ಲಿದ್ದು ರೆಟ್ರೊ ಮಾದರಿಯಲ್ಲಿ ಕಾಣುತ್ತವೆ. ಮಾರುಕಟ್ಟೆಯಲ್ಲಿರುವ ಬೈಕಿನ ಎಲ್ಇಡಿ ಘಟಕಕ್ಕಿಂತ ವಿಭಿನ್ನವಾದ ಬಲ್ಬ್ ಪ್ರಕಾರದ ಟೈಲ್ ಲ್ಯಾಂಪ್‍ಗಳಾಗಿವೆ.

ಕಪ್ಪು ಬಣ್ಣವನ್ನು ಹೊಂದಿರುವ ಇಂಡಿಕೇಟರ್‍ಗಳನ್ನು ಲೈಸೆನ್ಸ್ ಪ್ಲೇಟ್‍ನ ಬಳಿಯಲ್ಲಿ ಅಳವಡಿಸಲಾಗಿದೆ. ರಶ್ಲೇನ್ ವರದಿಗಳ ಪ್ರಕಾರ, ಸ್ಪ್ಲಿಟ್ ಸೀಟುಗಳು ವಿಭಿನ್ನವಾಗಿದ್ದು, ಕಾಂಟ್ರಾಸ್ಟ್ ಸ್ಟಿಚಿಂಗ್ ಅನ್ನು ಹೊಂದಿವೆ. ಹಿಂಬದಿಯ ಸೀಟಿನ ಮೇಲೆ ಹೆಚ್ಚು ಮೆತ್ತಗಿನ ಸೀಟ್ ಅಳವಡಿಸಲಾಗಿದೆ. ಈ ಬೈಕ್ ಸ್ಪ್ಲಿಟ್ ಗ್ರಾಬ್ ರೇಲ್‍ಗಳನ್ನು ಹೊಂದಿದೆ. ಬ್ಯಾಕ್‌ರೆಸ್ಟ್ ಕಾಣೆಯಾಗಿರುವ ಕಾರಣ ಬೈಕ್ ಭಿನ್ನವಾಗಿ ಕಾಣುತ್ತದೆ. ಬ್ಯಾಕ್‌ರೆಸ್ಟ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ನೀಡುವ ಸಾಧ್ಯತೆಗಳಿವೆ.

2020ರ ಹೊಸ ಬೈಕಿನಲ್ಲಿ, ಕ್ಲಾಸಿಕ್ 350 ಬೈಕುಗಳಲ್ಲಿರುವಂತಹ ಸಾಂಪ್ರದಾಯಿಕವಾದ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್‌ಗಳನ್ನು ಅಳವಡಿಸಿಕೊಂಡಿರುವಂತೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಸವಾರನ ಫುಟ್ ರೆಸ್ಟ್ ಬಳಿ ಗೇರ್ ಲಿವರ್‌ನ ಲಿಂಕ್‌ಗಳನ್ನು ಕಾಣಬಹುದು. ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದ್ದ 2020ರ ಕ್ಲಾಸಿಕ್ 350 ಬೈಕಿನಲ್ಲಿ ಕಂಡು ಬಂದ ಹೊಸ ಕಪ್ಪು ಬಣ್ಣದ ಗೇರ್ ಬಾಕ್ಸ್ ಹೌಸಿಂಗ್ ಅನ್ನು ನೋಡಬಹುದು. ಟ್ರಾನ್ಸ್ ಮಿಷನ್ ಹೊಸದಾಗಿ ಕಂಡು ಬರುತ್ತದೆ. ಡ್ರೈವ್ ಚೈನ್ ಬೈಕಿನ ಎಡ ಭಾಗದಲ್ಲಿದೆ.

2020ರ ಹೊಸ ಥಂಡರ್ ಬರ್ಡ್ ಎಕ್ಸ್ ಎಫ್ಐ ಬಿಎಸ್ 6 ಬೈಕಿನಲ್ಲಿ ಸರ್ಕ್ಯುಲರ್ ಶೇಪಿನಲ್ಲಿರುವ ರೇರ್ ವೀವ್ ಮಿರರ್‍ಗಳಲ್ಲಿ ಹಾಗೂ ಮರುವಿನ್ಯಾಸದ ಫುಟ್ ಪೆಗ್‌ಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಈ ಬೈಕಿನಲ್ಲಿ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ. 2020ರ ರಾಯಲ್ ಎನ್ಫೀಲ್ಡ್ ಥಂಡರ್‌ಬರ್ಡ್ ಬೈಕುಗಳನ್ನು 350 ಸಿಸಿ ಹಾಗೂ 500 ಸಿಸಿಯ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಮಾರುಕಟ್ಟೆಯಲ್ಲಿರುವ 350 ಸಿಸಿ ಬೈಕುಗಳು 346ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 19.8 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. 500 ಸಿಸಿ ಬೈಕುಗಳು 499 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು 27.2 ಬಿಹೆಚ್‌ಪಿ ಪವರ್ ಹಾಗೂ 41.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡೂ ಎಂಜಿನ್‍ಗಳಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಬಿಎಸ್ 6 ಎಂಜಿನ್‍ಗಳನ್ನು ಅಳವಡಿಸಿದ ನಂತರ ಪರ್ಫಾಮೆನ್ಸ್ ಹೆಚ್ಚಾಗುವ ಸಾಧ್ಯತೆಗಳಿವೆ.

ಮುಂದಿನ ವರ್ಷದ ಮೊದಲ ಆರ್ಥಿಕ ವರ್ಷದ ವೇಳೆಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಥಂಡರ್ ಬರ್ಡ್ ಎಕ್ಸ್ ಎಫ್ಐ ಬಿಎಸ್6 ಬೈಕುಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಿಡುಗಡೆಯ ದಿನಕ್ಕೂ ಸ್ವಲ್ಪ ದಿನಗಳ ಮುಂಚೆ ಬೆಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಕೆಲ ವರದಿಗಳ ಪ್ರಕಾರ ಈ ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.1.75 ಲಕ್ಷಗಳಾಗುವ ಸಾಧ್ಯತೆಗಳಿವೆ. ಥಂಡರ್ ಬರ್ಡ್ ಸರಣಿಯ ಹೊಸ ಬೈಕುಗಳನ್ನು ನವೆಂಬರ್‍ನಲ್ಲಿ ನಡೆಯಲಿರುವ 2019ರ ಇಐಸಿಎಂಎನಲ್ಲಿ ಅಧಿಕೃತವಾಗಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಥಂಡರ್ ಬರ್ಡ್ ರಾಯಲ್ ಎನ್‌ಫೀಲ್ಡ್ ಕಂಪನಿಯ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಒಂದಾಗಿದೆ. ಕ್ರೂಸರ್ ಶೈಲಿಯನ್ನು ಹೊಂದಿರುವ ಕಾರಣದಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ. ಬಿಎಸ್6 ಮಾನದಂಡಗಳನ್ನು ಕಂಪನಿಯು ನಿಧಾನವಾಗಿ ತನ್ನ ಬೈಕುಗಳಲ್ಲಿ ಅಳವಡಿಸುತ್ತಿದೆ. ಬೇರೆ ಕಂಪನಿಗಳೂ ಸಹ ಇದೇ ಹಾದಿಯಲ್ಲಿ ನಡೆಯುವ ನಿರೀಕ್ಷೆಗಳಿವೆ.
Source: Rushlane


Click it and Unblock the Notifications