ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಸುಜುಕಿ ಕಂಪನಿಯ ಹಯಾಬುಸಾ ಬೈಕ್ ದೇಶದಲ್ಲಿರುವ ಹಲವು ಲೆಜೆಂಡರಿ ಬೈಕುಗಳ ಪೈಕಿ ಒಂದಾಗಿದ್ದು, ತನ್ನ ಆಕರ್ಷಕ ವಿನ್ಯಾಸದಿಂದಾಗಿ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಈ ಬೈಕ್ ವಿಶ್ವದಲ್ಲಿರುವ ಅತಿ ವೇಗದ ಬೈಕುಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಬೈಕ್ ಅನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ತರಲಾಗುವುದು.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ಹಯಾಬುಸಾ ಬೈಕಿನ ನಿರೀಕ್ಷೆಯಲ್ಲಿರುವ, ಬೈಕ್ ಪ್ರಿಯರು ಈ ಮಾಹಿತಿಯಿಂದಾಗಿ ಉತ್ಸುಕರಾಗಿರುವುದು ಸುಳ್ಳಲ್ಲ. ಹೊಸ ತಲೆಮಾರಿನ ಹಯಾಬುಸಾ ಬೈಕ್, ಮಾರುಕಟ್ಟೆಯಲ್ಲಿರುವ ಬೈಕಿನ ಬದಲಿಗೆ ಹಂತಹಂತವಾಗಿ ಮಾರುಕಟ್ಟೆಗೆ ಬರಲಿದೆ. ಹೊಸ ಮೋಟಾರ್‌ಸೈಕಲ್ ಬಗ್ಗೆ ಹಲವಾರು ವದಂತಿಗಳಿವೆ. ಈಗ, ಹೊಸ ಪೇಟೆಂಟ್ ಅರ್ಜಿಯು ಬಹಿರಂಗವಾಗಿದೆ. ಇದರಲ್ಲಿ ಹೊಸ ತಲೆಮಾರಿನ ಹಯಾಬುಸಾದ ಎಂಜಿನ್ ಹಾಗೂ ಗೇರ್‌ಬಾಕ್ಸ್‌ನ ಚಿತ್ರಗಳನ್ನು ಕಾಣಬಹುದು.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಪೇಟೆಂಟ್, ಬೈಕಿನ ಟ್ರಾನ್ಸ್ ಮಿಷನ್ ಸಿಸ್ಟಂಗಳಿಗೆ ಒತ್ತು ನೀಡುತ್ತದೆ. ಈ ಪೇಟೆಂಟ್‌ನಲ್ಲಿನ ಗೇರ್‌ಬಾಕ್ಸ್ ಜೋಡಣೆ ಸಾಂಪ್ರದಾಯಿಕವಾಗಿ ಕಾಣುತ್ತದೆಯಾದರೂ, ಗೇರ್ ಲಿವರ್ ಸ್ಪಿಂಡಲ್ ಅನ್ನು ಹೊಂದಿದೆ. ಸುಜುಕಿ, ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಾಗಿ ವಿಭಿನ್ನವಾದ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿದೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಟ್ರಾನ್ಸ್ ಮಿಷನ್ ಸಿಸ್ಟಂಗಳಿಗೆ ಸಂಬಂಧಪಟ್ಟ ಪೇಟೆಂಟ್ ಅನ್ನು ಫೆಬ್ರವರಿ 2018ರಂದು ಸಲ್ಲಿಸಲಾಗಿದ್ದು, ಆಗಸ್ಟ್ 22ರಂದು ಪ್ರಕಟಿಸಲಾಗಿದೆ. ಪೇಟೆಂಟ್ ಪಡೆಯಲು ಇನ್ನೂ ಹಲವಾರು ಹಂತಗಳಿವೆ. ಹೊಸ ತಲೆಮಾರಿನ ಹಯಾಬುಸಾ ಈ ವರ್ಷ ಅನಾವರಣಗೊಳ್ಳುವ ಸಾಧ್ಯತೆಯಿಲ್ಲ. ಈ ಬೈಕ್ ಅನ್ನು ಮುಂದಿನ ವರ್ಷ 2021ರ ಮಾದರಿಯ ಬೈಕ್ ಆಗಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ತಲೆಮಾರಿನ ಸುಜುಕಿ ಹಯಾಬುಸಾದಲ್ಲಿ ಹೊಸ ಹಗುರವಾದ ಅಲಾಯ್ ಫ್ರೇಂ, ತಲೆಕೆಳಗಾದ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಹಿಂಭಾಗದಲ್ಲಿ ಮೊನೊ ಶಾಕ್, ಬಲಿಷ್ಟ ಸ್ವಿಂಗ್ ಆರ್ಮ್ ಹಾಗೂ ಲೋ ಸೆಟ್ ಕ್ಲಿಪ್ ಆನ್ ಹ್ಯಾಂಡಲ್‌ಬಾರ್‌ಗಳಿರುವುದನ್ನು ಪೇಟೆಂಟ್ ಚಿತ್ರಗಳಲ್ಲಿ ಕಾಣಬಹುದು.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ಹಯಾಬುಸಾದಲ್ಲಿ ಸುಜುಕಿ ಹೆಚ್ಚಿನ ಡಿಸ್‍‍ಪ್ಲೇಸ್‍‍ಮೆಂಟಿನ ಎಂಜಿನ್ ಮೌಂಟ್ ಮಾಡಿರಬಹುದೆಂಬ ವರದಿಗಳಿವೆ. ಇದಕ್ಕಾಗಿ ಹೊಸ ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಪ್ರಸ್ತುತವಿರುವ ಎಂಜಿನ್ ಅನ್ನು ನವೀಕರಿಸಬೇಕಾಗುತ್ತದೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಸುಜುಕಿ ಕಂಪನಿಯು ಖಂಡಿತವಾಗಿಯೂ ಪ್ರಸ್ತುತ ತಲೆಮಾರಿನ ಮಾದರಿಗಿಂತ ಸಮನಾದ ಅಥವಾ ಹೆಚ್ಚಾದ ಬಲಶಾಲಿಯಾದ ದೊಡ್ಡ ವಿದ್ಯುತ್ ಘಟಕವನ್ನು ಮೌಂಟ್ ಮಾಡಲು ಬಯಸುತ್ತದೆ. ಸುಜುಕಿ ಕಂಪನಿಯು ಪರ್ಫಾಮೆನ್ಸ್ ಅನ್ನು ಗಮನದಲ್ಲಿಟ್ಟುಕೊಂಡು, ಹೊಸ ತಲೆಮಾರಿನ ಹಯಾಬುಸಾದ ಪರಿಷ್ಕೃತ ಎಂಜಿನ್‌ಗಾಗಿ ಹೊಸ ಎಕ್ಸಾಸ್ಟ್ ಸಿಸ್ಟಂ ಹೊಂದಲು ಪೇಟೆಂಟ್ ಅರ್ಜಿ ಸಲ್ಲಿಸಿದೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಪೇಟೆಂಟ್ ಚಿತ್ರಗಳು ಪ್ರಸ್ತುತವಿರುವ ಎಂಜಿನ್ ಬ್ಲಾಕ್ ಅನ್ನು ಹೊಸ ಮಾದರಿಯಲ್ಲಿಯೂ ಸಹ ಉಳಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತವೆ. ಆದರೆ ಸಿಲಿಂಡರ್‌, ಎಂಜಿನ್ ಹೆಡ್, ಇಸಿಯು, ಎಕ್ಸಾಸ್ಟ್ ಸಿಸ್ಟಂ ಹಾಗೂ ಹಲವಾರು ಇತರ ಬಿಡಿಭಾಗಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಅಪ್‍‍ಗ್ರೇಡ್ ಮಾಡುವ ಸಾಧ್ಯತೆಗಳಿವೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ಸುಜುಕಿ ಹಯಾಬುಸಾ ಹೊಸ ವಿನ್ಯಾಸ ಭಾಷೆಯನ್ನು ಒಳಗೊಂಡಿರುವ ನಿರೀಕ್ಷೆಗಳಿವೆ. ಈ ಬೈಕ್ ತುಂಬಾ ವೇಗವಾಗಿರಲಿದ್ದು, ಸುಜುಕಿ ಕಂಪನಿಯ ಡಿಸೈನರ್‍‍ಗಳು ಹಾಗೂ ಎಂಜಿನಿಯರ್‌ಗಳು ಏರೋಡೈನಾಮಿಕ್ ಎಫಿಶಿಯನ್ಸಿಗಾಗಿ ಬಾಡಿವರ್ಕ್ ಅನ್ನು ಸಂಪೂರ್ಣವಾಗಿ ನಿರ್ಮಿಸಬೇಕಾಗುತ್ತದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಮಿಟಿಗೇಷನ್ ಮುಂತಾದ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಗಳಿಗಾಗಿ ಇನ್‍‍ಹರ್ಶಿಯಲ್ ಮೇಶರ್‍‍ಮೆಂಟ್ ಯೂನಿಟ್(ಐಎಂಯು) ಅಳವಡಿಸಲಾಗಿದೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಈ ಬೈಕಿನಲ್ಲಿ ಸ್ಮಾರ್ಟ್ ಫೋನ್ ಎನಾಬಲ್ ಆಗಿರುವ ನ್ಯಾವಿಗೇಷನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲ್ಇಡಿ ಹೆಡ್‍‍ಲೈಟ್ ಹಾಗೂ ಟೇಲ್‍‍ಲೈಟ್, ಟಾಪ್ ಶೆಲ್ಫ್ ಬ್ರೇಕಿಂಗ್ ಸಿಸ್ಟಂಗಳಿರುವ ಸಾಧ್ಯತೆಗಳಿವೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಇರಲಿದ್ದು, ಈ ಎಂಜಿನ್ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 155 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 300 ಕಿ.ಮೀ ಆಗಿರಲಿದೆ.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಈ ಬೈಕಿನಲ್ಲಿ ಆರು ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು. ಹೊಸ ಬಿಎಸ್6 ಆಧಾರಿತ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಗಳಲ್ಲಿ ಬದಲಾವಣೆ ಕಾಣಬಹುದು. ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯೂನಿಟ್‍‍ನಲ್ಲಿರುವ ಆರು ಸ್ಪೀಡಿನ ಗೇರ್‌ಬಾಕ್ಸ್‌ನಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಹೊಸ ತಲೆಮಾರಿನ ಸುಜುಕಿ ಹಯಾಬುಸಾ ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ. ನಾವು ಈ ಹೊಸ ಬೈಕ್ ಅನ್ನು ಮುಂದಿನ ವರ್ಷ ನಿರೀಕ್ಷಿಸಬಹುದು.

ಹೊಸ ಹಯಾಬುಸಾ ಪೇಟೆಂಟ್‍‍ಗಾಗಿ ಅರ್ಜಿ ಸಲ್ಲಿಸಿದ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಳಿಗಾಗಿ ಪೇಟೆಂಟ್‌ಗಳನ್ನು ಸಲ್ಲಿಸಿದ್ದು ಆಸಕ್ತಿದಾಯಕವಾಗಿದೆ. ಹಯಾಬುಸಾದಲ್ಲಿ ಸೆಮಿ ಆಟೋಮ್ಯಾಟಿಕ್ ಅಳವಡಿಸಲಾಗಿದೆ. ಬೈಕ್ ಪ್ರಿಯರು ಪರ್ಫಾಮೆನ್ಸ್ ಬೈಕುಗಳನ್ನು ಚಾಲನೆ ಮಾಡುವಾಗ, ಕಡೆಯ ಪಕ್ಷ ಟ್ರಾನ್ಸ್ ಮಿಷನ್ ಯೂನಿಟ್‍‍ಗಳೊಂದಿಗೆ ನಿಯಂತ್ರಿಸಲು ಬಯಸುತ್ತಾರೆ. ಈ ಹೊಸ ಬೈಕಿಗಾಗಿ ನಿರೀಕ್ಷೆಗಳು ಹೆಚ್ಚಾಗಿವೆ.

Most Read Articles

Kannada
English summary
2020 Hayabusa: Suzuki Files Patents For Engine, Semi-Automatic Transmission & Exhaust System - Read in kannada
Story first published: Tuesday, August 27, 2019, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X