ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಟ್ರಯಂಫ್ ಮೋಟಾರ್‌ಸೈಕಲ್‌ ಕಂಪನಿಯು, ಮೋಟೋ 2ದ ಟ್ರಯಂಫ್‌ನ ಕಲಿಕೆಯ ಆಧಾರದ ಮೇಲೆ ನಿರ್ಮಾಣವಾಗಿರುವ ಸೀಮಿತ ಆವೃತ್ತಿಯ ಟ್ರಯಂಫ್ ಡೇಟೋನಾ 765 ಬೈಕುಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ದೃಢಪಡಿಸಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಬ್ರಿಟಿಷ್ ಪಬ್ಲಿಕೇಷನ್ ಸಂಸ್ಥೆಯಾದ ಎಂಸಿಎನ್ ಪ್ರಕಾರ, ಹೊಸ ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗುವುದು. ಒಂದು ಆವೃತ್ತಿಯನ್ನು ಯುರೋಪ್ ಹಾಗೂ ಏಷ್ಯಾ ದೇಶಗಳಿಗಾಗಿ, ಮತ್ತೊಂದು ಆವೃತ್ತಿಯನ್ನು ಅಮೇರಿಕಾ ಹಾಗೂ ಕೆನಡಾಗಾಗಿ ತಯಾರಿಸಲಾಗುವುದು. ಪ್ರತಿ ಮಾರುಕಟ್ಟೆಯೂ ಕೇವಲ 765 ಬೈಕ್‌ಗಳಿಗೆ ಸೀಮಿತವಾಗಿರಲಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಎಂಜಿನ್ ಅನ್ನು ರೇಸ್ ಟ್ಯೂನ್ ಮಾಡುವ ಮೊದಲು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್‍‍ನಲ್ಲಿರುವ 765 ಸಿಸಿ ಇನ್ ಲೈನ್ ಮೂರು ಸಿಲಿಂಡರ್ ಎಂಜಿನ್ ಮಾದರಿಯನ್ನು ಬಳಸಿ ಹೊಸ ಬೈಕ್ ನಿರ್ಮಿಸಲಾಗುವುದು.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

2020ರ ಟ್ರಯಂಫ್ ಡೆಟೊನಾ 765 ಬೈಕ್ ಇದುವರೆಗೆ ನಿರ್ಮಿಸಲಾದ ಅತ್ಯಂತ ಬಲಶಾಲಿಯಾದ ಡೆಟೊನಾ ಬೈಕ್ ಆಗಿರಲಿದೆ. ವರದಿಗಳ ಪ್ರಕಾರ ಹೊಸ ಡೆಟೊನಾ 765 ಬೈಕ್, ಡೆಟೊನಾ 675ಆರ್ ಹಾಗೂ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಗಿಂತಲೂ ಹೆಚ್ಚಿನ ಪ್ರಮಾಣದ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದೆ ಎಂದು ಟ್ರಯಂಫ್ ದೃಢಪಡಿಸಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಹೊಸ ಡೆಟೊನಾ 765 ಹಳೆಯ ಡೆಟೊನಾ 675ಆರ್ ಬೈಕಿಗಿಂತಲೂ ಕಡಿಮೆ ತೂಕವನ್ನು ಹೊಂದಿರಲಿದೆ. ಹಳೆಯ ಡೆಟೊನಾಗಿಂತ ಉತ್ತಮ ಅನುಪಾತದಲ್ಲಿ ಶಕ್ತಿ ಹಾಗೂ ತೂಕವನ್ನು ಹೊಂದಿರಲಿದೆ. 765 ಸಿಸಿ, ಇನ್ ಲೈನ್ ಟ್ರಿಪಲ್ ಎಂಜಿನ್ ಹೊಂದಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್‍ ಬೈಕ್ 121 ಬಿಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಆದರೆ ರೇಸ್ ಟ್ಯೂನ್ಡ್ ಮೋಟೋ2 765 ಬೈಕ್, 138 ಬಿಹೆಚ್‍‍ಪಿಗಿಂತಲೂ ಹೆಚ್ಚಿನ ಪ್ರಮಾಣದ ಪವರ್ ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ, ಹೊಸ ಡೆಟೊನಾ 765 ಬೈಕ್, 130 ರಿಂದ 135 ಬಿಹೆಚ್‌ಪಿ ಉತ್ಪಾದಿಸಲಿದೆ ಎಂದು ಹೇಳಲಾಗಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ವರದಿಗಳ ಪ್ರಕಾರ, ಆಗಸ್ಟ್ 23 ರಂದು ಸಿಲ್ವರ್‌ಸ್ಟೋನ್‌ನಲ್ಲಿರುವ ಬ್ರಿಟಿಷ್ ಮೋಟೋ ಜಿಪಿಯಲ್ಲಿ ಈ ಬೈಕ್‌ಗಳನ್ನು ಅನಾವರಣಗೊಳಿಸಲಾಗುವುದು. ಉತ್ಪಾದನಾ ಹಂತದಲ್ಲಿರುವ ಡೆಟೊನಾ ಮೋಟೊ2 765 ಲಿಮಿಟೆಡ್ ಆವೃತ್ತಿಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಅನಾವರಣಗೊಳಿಸಲಾಗುವುದು.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ರೋಡ್, ರೇನ್, ಸ್ಪೋರ್ಟ್, ರೈಡರ್ ಹಾಗೂ ಟ್ರಾಕ್ ಎಂಬ ಐದು ರೈಡಿಂಗ್ ವಿಧಾನಗಳಿರಲಿದ್ದು, ಪುಲ್ ಕಲರ್‍‍ನ ಟಿಎಫ್‌ಟಿ ಸ್ಕ್ರೀನ್ ಮೂಲಕ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಅನ್ನು ನಿರ್ವಹಿಸುವ ನಿರೀಕ್ಷೆಗಳಿವೆ. ಸ್ಪೇನ್‌ನಲ್ಲಿ ಪರೀಕ್ಷಾ ಹಂತದಲ್ಲಿರುವ ಡೆಟೊನಾದ ಕೆಲವು ಇತ್ತೀಚಿನ ರಹಸ್ಯ ಚಿತ್ರಗಳನ್ನು ಎಂಸಿಎನ್ ಪ್ರಕಟಿಸಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಈ ಚಿತ್ರಗಳಲ್ಲಿರುವ ಬೈಕ್ ಸದ್ಯ ಮಾರುಕಟ್ಟೆಯಲ್ಲಿರುವ ಡೆಟೊನಾ 675 ಆರ್ ಬೈಕ್ ಅನ್ನು ಹೋಲುತ್ತದೆ. ಈ ಬೈಕ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿರುವಂತಹ ಹೊಸ 765 ಸಿಸಿ ಎಂಜಿನ್ ಹೊಂದಿರಲಿದೆ. ಆದರೂ ಡೆಟೊನಾ 765 ಬೈಕಿನ ಎಂಜಿನ್ ವಿಭಿನ್ನವಾದ ಟ್ಯೂನ್ ಹಾಗೂ ರೇಸ್ ಆಧಾರಿತ ಬಿಡಿಭಾಗಗಳನ್ನು ಹೊಂದಿರಲಿದೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಈ ಬಿಡಿಭಾಗಗಳಲ್ಲಿ ವಾಲ್ವ್ ಟ್ರೇನ್, ಕ್ಯಾಮ್ ಪ್ರೊಫೈಲ್‌ಗಳು, ಹಗುರವಾದ ಎಂಜಿನ್ ಇಂಟರ್‍‍ನಲ್‌ಗಳಿರಲಿವೆ. ಹೊಸ ಡೇಟೋನಾ 765 ಬೈಕಿನ ರಹಸ್ಯ ಚಿತ್ರಗಳು, ಬೈಕಿನಲ್ಲಿರುವ ಟಾಪ್ ಮಾದರಿಯ ಓಹ್ಲಿನ್ಸ್ ಫೋರ್ಕ್ ಹಾಗೂ ಮೊನೊಶಾಕ್‍‍ಗಳನ್ನು ತೋರಿಸುತ್ತವೆ. ಬ್ರೇಕಿಂಗ್ ಅನ್ನು ಬ್ರೆಂಬೊ ಸ್ಟೈಲ್ಮಾ ರೇಡಿಯಲ್ ಕ್ಯಾಲಿಪರ್‌ಗಳು ನಿರ್ವಹಿಸುತ್ತವೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಈ ಎಲೆಕ್ಟ್ರಾನಿಕ್ ಪ್ಯಾಕೇಜ್‍‍ನಲ್ಲಿ ಸೆಮಿ ಆಕ್ಟಿವ್ ಸಸ್ಪೆಂಷನ್ ನೀಡುವ ಸಾಧ್ಯತೆಗಳಿಲ್ಲ. ಆದರೆ 6 ಆಕ್ಸಿಸ್ ಇನ್‍‍ಹರ್ಶಿಯಲ್ ಯೂನಿಟ್ ಇರಲಿದ್ದು, ಎಲೆಕ್ಟ್ರಾನಿಕ್ ರೈಡರ್ ಶಕ್ತಿಯನ್ನು ನೀಡಲಿದೆ. ಇದರ ಜೊತೆಗೆ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ಸ್ಲೈಡ್ ಕಂಟ್ರೋಲ್ ಸೆಟ್ಟಿಂಗ್‌ಗಳಿರಲಿವೆ.

ಖಚಿತವಾಯ್ತು 2020ರ ಟ್ರಯಂಫ್ ಡೆಟೊನಾ 765 ಬಿಡುಗಡೆ

ಬೈ ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. 2020ರ ಮಾರ್ಚ್ ವೇಳೆಗೆ ಹೊಸ ಟ್ರಯಂಫ್ ಡೇಟೋನಾ 765 ಬೈಕ್ ಅನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಭಾರತದಲ್ಲಿಯೂ ಮಾರಾಟ ಮಾಡುವ ಸಾಧ್ಯತೆಗಳಿವೆ. ಈ ಸೂಪರ್‌ಸ್ಪೋರ್ಟ್‌ ಬೈಕಿಗೆ ಹೆಚ್ಚಿನ ಬೇಡಿಕೆಯಿರಲಿದ್ದು, ಕೆಲವು ಅದೃಷ್ಟವಂತರು ಮಾತ್ರ ಈ ಬೈಕ್ ಅನ್ನು ಪಡೆಯಲಿದ್ದಾರೆ.

More from DriveSpark

Article Published On: Thursday, July 25, 2019, 13:10 [IST]
English summary
2020 Triumph Daytona 765 Confirmed - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+