ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸದ್ದು ಜೋರಾಗಿದೆ. ಸ್ಟಾರ್ಟ್ ಅಪ್ ಕಂಪನಿಗಳೂ ಸೇರಿದಂತೆ ಬಹುತೇಕ ಎಲ್ಲಾ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಈಗ ಬೆಂಗಳೂರು ಮೂಲದ ಆಂಪಿಯರ್ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯು ಹೊಸ ರಿಯೊ ಎಲೈಟ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ವೇಗದಲ್ಲಿಯೂ ಚಲಿಸುತ್ತದೆ. ಈ ಸ್ಕೂಟರಿನ ಬೆಲೆಯು ಬೆಂಗಳೂರಿನ ಎಕ್ಸ್ ಶೋರೂಂ ದರದಂತೆ ರೂ.45,099ಗಳಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ರಿಯೊ ಸ್ಕೂಟರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ಕಂಪನಿಯ ಅಧಿಕೃತ ವೆಬ್‍‍ಸೈಟ್ ಮೂಲಕ ರೂ.1,999 ಪಾವತಿಸಿ ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದು. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಈ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 55ರಿಂದ 60 ಕಿ.ಮೀವರೆಗೂ ಚಲಿಸಬಹುದು. ರಿಯೊ ಎಲೆಕ್ಟ್ರಿಕ್ ಸ್ಕೂಟರ್ ನಗರ ಪ್ರದೇಶಗಳಲ್ಲಿ 55 ಕಿ.ಮೀ ಮೈಲೇಜ್ ನೀಡಿದರೆ, ಹೆದ್ದಾರಿಗಳಲ್ಲಿ 60 ಕಿ.ಮೀ ಮೈಲೇಜ್ ನೀಡುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಈ ಸ್ಕೂಟರಿನಲ್ಲಿ 48 ವ್ಯಾ 20 ಎ‍‍ಹೆಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸಾಮಾನ್ಯವಾದ ಪ್ಲಗ್ ಪಾಯಿಂಟ್‍‍ಗಳಲ್ಲಿ ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 6 ಗಂಟೆಗಳು ಬೇಕಾಗುತ್ತವೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಚಾರ್ಜಿಂಗ್ ವಿಷಯದಲ್ಲಿ ಹಿಂದೆ ಇದ್ದರೂ, ಈ ಸ್ಕೂಟರಿನಲ್ಲಿರುವ ಹಲವಾರು ಅಂಶಗಳು ಯುವ ಜನತೆಯನ್ನು ಆಕರ್ಷಿಸಲಿವೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಎಲ್‍ಇ‍‍ಡಿ ಲೈಟಿಂಗ್, ಡಿಜಿಟಲ್ ಡ್ಯಾಶ್‍‍ಬೋರ್ಡ್ ಹಾಗೂ ಯು‍ಎಸ್‍‍ಬಿ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ನೀಡಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಈ ಬೈಕ್ ಅನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಹೆಲ್ಮೆಟ್ ಅನ್ನು ಉಚಿತವಾಗಿ ವಿತರಿಸಲಾಗುವುದು. ರಿಯೊ ಎಲೈಟ್ ಸ್ಕೂಟರ್ ಅನ್ನು ರೆಡ್, ವೈಟ್, ಬ್ಲೂ ಹಾಗೂ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಆಂಪಿಯರ್ ಕಂಪನಿಯು ತನ್ನ ಸರಣಿಯಲ್ಲಿರುವ ಜೀಲ್ ಎಲೆಕ್ಟ್ರಿಕ್ ಸ್ಕೂಟರಿನ 50 ಸಾವಿರಕ್ಕೂ ಹೆಚ್ಚು ಯುನಿಟ್‍‍ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಆಂಪಿಯರ್ ಈ ಸ್ಕೂಟರಿನ ಜೊತೆಗೆ ಉಚಿತ ಇನ್ಶೂರೆನ್ಸ್ ನೀಡುವುದಾಗಿ ಘೋಷಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಜೀಲ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 1,200 ವ್ಯಾ.ನ ಪಿ‍ಎಲ್‍‍ಟಿ‍‍ಸಿ ಮೋಟರ್ ಅಳವಡಿಸಲಾಗಿದೆ. ಇದರ ಜೊತೆಗೆ 30 ಎ‍ಹೆಚ್ 60 ವಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಸಹ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಜೀಲ್ ಸ್ಕೂಟರ್ 75 ಕಿ.ಮೀ ದೂರದವರೆಗೂ ಚಲಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್‍ ಬಿಡುಗಡೆಗೊಳಿಸಿದ ಆಂಪಿಯರ್

ಜೀಲ್ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಇವುಗಳಲ್ಲಿ ಹಾರ್ಮೊನಿಕ್ ಬ್ರೇಕಿಂಗ್ ಸಿಸ್ಟಂ, ಟ್ಯೂಬ್‍‍ಲೆಸ್ ಟಯರ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್, ಎಲ್‍ಇ‍‍ಡಿ ಡಿ‍ಆರ್‍ಎಲ್, ಮುಂಭಾಗದಲ್ಲಿ ಗ್ಲೌವ್ ಬಾಕ್ಸ್ ಗಳು ಸೇರಿವೆ.

More from DriveSpark

Article Published On: Tuesday, December 24, 2019, 13:33 [IST]
English summary
Ampere launches reo elite e-scooter in India - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+